ಮುಂದಿನ ಗಣರಾಜ್ಯೋತ್ಸವದ ಅತಿಥಿ-ಡೊನಾಲ್ಡ್ ಟ್ರಂಪ್?

ವಾಷಿಂಗ್ಟನ್, ಸೆಪ್ಟೆಂಬರ್ 29: 2019ರ ಜನವರಿ 26 ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುವುದು ಬಹುತೇಕ ಖಚಿತವಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

ಮೋದಿ ಸರ್ಕಾರದ ಈ ಅವಧಿಯ ಕೊನೆಯ ಗಣರಾಜ್ಯೋತ್ಸವ ಅದಾಗಿರುವುದರಿಂದ ಅದ್ಧೂರಿ ಯಾಘಿ ನೆರವೇರುವ ಸಾಧ್ಯತೆ ಇದೆ.

ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಅಪೇಕ್ಷಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ಉತ್ತಮವಾಗಲು ಇದು ನೆರವಾಗಲಿದೆ ಎಂದು ಟ್ರಂಪ್ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Donald Trump likely to visit India on Republic Day1

ಇತ್ತೀಚೆಗಷ್ಟೇ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ 73ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡಿದ್ದ ಟ್ರಂಪ್, 'ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತರಾದ ಭಾರತದ ಪ್ರಧಾನಿ ಮೋದಿ ಅವರಿಗೆ ನನ್ನ ಶುಭಾಶಯ ತಿಳಿಸಿ' ಎಂದಿದ್ದರು.

ಕಳೆದ ವರ್ಷವೇ ಎರಡು ಬಾರಿ ಟ್ರಂಪ್ ಅವರನ್ನು ಮೋದಿ ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

"ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ" ಎಂದು ಕಳೆದ ಫೆಬ್ರವರಿಯಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಹೇಳಿತ್ತು.

ಆದರೆ ಇತ್ತೀಚೆಗಷ್ಟೇ, 'ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾದಂಥ ದೇಶಗಳಿಗೆ ಅಮೆರಿಕ ಶಾಯಧನ ನೀಡುವುದಿಲ್ಲ, ಅಮೆರಿಕ ಎಲ್ಲ ದೇಶಗಳಿಗಿಂದ ವೇಗವಾಗಿ ಬೆಳೆಯಬೇಕು' ಎಂಬ ಹೇಳಿಕೆಯನ್ನು ಟ್ರಂಪ್ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+