ಏನಿದು ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಟ್ವೀಟ್ ರಗಳೆ
ವಾಷಿಂಗ್ಟನ್, ನ. 4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಅವರು ಮ್ಯಾಪ್ ಟ್ವೀಟ್ ಮಾಡಿ ಕಿರಿಕ್ ಮಾಡಿದ್ದಾರೆ. ಭಾರತ, ಚೀನಾ, ಮೆಕ್ಸಿಕೋ, ಕ್ಯೂಬಾ , ಲಿಬೆರಿಯಾ(ಆಫ್ರಿಕಾ), ಕೆನಡಾದ ಸಣ್ಣ ಪ್ರಾಂತ್ಯ ಬಿಟ್ಟರೆ ಮಿಕ್ಕ ಎಲ್ಲಾ ರಾಷ್ಟ್ರಗಳು ರಿಪಬ್ಲಿಕನ್ ಪಕ್ಷದ ಟ್ರಂಪ್ ಪರ ಇದ್ದಾರೆ ಎಂದು ವಿವಾದಿತ ಟಿಪ್ಪಣಿ ಬರೆದಿದ್ದಾರೆ.
Okay, finally got around to making my electoral map prediction. #2020Election #VOTE pic.twitter.com/STmDSuQTMb
— Donald Trump Jr. (@DonaldJTrumpJr) November 3, 2020
ಅಮೆರಿಕ ಅಧ್ಯಕ್ಷೀಯ ಚುನಾವಣಾ ಮತದಾನದ ವೇಳೆ ವಿವಾದಾತ್ಮಕ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ವಿಶ್ವದೆಲ್ಲೆಡೆ ಟ್ರಂಪ್ ಅವರಿಗೆ ಭಾರಿ ಬೆಂಬಲ ಸಿಕ್ಕಿದೆ ಎಂಬುದನ್ನು ತೋರಿಸಲು ಬಳಸಿದ ವಿಶ್ವ ಭೂಪಟದಲ್ಲಿ ಕಾಶ್ಮೀರ ಭಾಗ ತಪ್ಪಾಗಿದೆ. ಅಲ್ಲದೇ ಭಾರತ ಹಾಗೂ ಚೀನಾ ಭಾಗಕ್ಕೆ ಕೆಂಪು ಬಣ್ಣದಿಂದ ತುಂಬಿಸಲಾಗಿದೆ. ಕೆಂಪು ಹಾಗೂ ನೀಲಿ ಬಣ್ಣ ಬಳಸಿ ಡೆಮೊಕ್ರಾಟಿಕ್ ಹಾಗೂ ರಿಪಬ್ಲಿಕನ್ ಪಕ್ಷದ ಸಂಕೇತ ಎಂದು ತಿಳಿಸಲು ಹೊರಟ ಟ್ರಂಪ್ ಜ್ಯೂನಿಯರ್ ಭಾರಿ ಪ್ರಮಾದ ಎಸಗಿದ್ದಾರೆ ಎಂದು ಟ್ವಿಟ್ಟಿಗರು ಟೀಕಿಸಿದ್ದಾರೆ.

ರಿಪಬ್ಲಿಕನ್ ಪಕ್ಷ ಗೆಲ್ಲಬೇಕೆಂದು ಎಂದು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಟ್ವೀಟ್ ಮಾಡಿವೆ. ಭಾರತವು ನೀಲಿ ಬಣ್ಣದಿಂದ ತುಂಬಿದೆ. ಅಂದರೆ, ಭಾರತವು ಡೆಮಾಕ್ರಟಿಕ್ ಅಭ್ಯರ್ಥಿ ಬೈಡೆನ್ ಅವರನ್ನು ಬೆಂಬಲಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂಬಂತೆ ತೋರಿಸಿದ್ದಾರೆ. ರಿಪಬ್ಲಿಕನ್ನರಿಗೆ ಬೆಂಬಲವನ್ನು ತೋರಿಸದಿರುವುದು ಅವಮಾನಕರವಾಗಿದೆ ಎಂದಿದ್ದಾರೆ.












Click it and Unblock the Notifications