ಬಾಲ್ಕನಿಯಲ್ಲಿ ನಿಂತು ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 11 : "ನಾನು ಪರಿಣಾಮವಾಗಿ ಥೆರಪಿ ಮತ್ತು ಔಷಧಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ನಾವು ಕಾಯಿಲೆಯಿಂದ ಗುಣಮುಖರಾಗುತ್ತೇವೆ, ಕೆಲವೇ ದಿನಗಳಲ್ಲಿ ಔಷಧಿ ಬರಲಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಕೋವಿಡ್ ಸೋಂಕು ತಗುಲಿದ್ದ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಶ್ವೇತ ಭವನದ ಬಾಲ್ಕನಿ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಬಾಲ್ಕನಿಯಲ್ಲಿ ಒಬ್ಬರೇ ನಿಂತು ಮಾಸ್ಕ್ ಧರಿಸದೇ ಟ್ರಂಪ್ ಭಾಷಣ ಮಾಡಿದರು.

Donald Trump

ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಟ್ರಂಪ್ ಸೋಮವಾರ ಡಿಸ್ಚಾರ್ಜ್ ಆಗಿ ಶ್ವೇತ ಭವನಕ್ಕೆ ಆಗಮಿಸಿದ್ದರು. ಬಳಿಕ ಇದೇ ಮೊದಲ ಬಾರಿಗೆ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

"ಕಾನೂನು ಮತ್ತು ಸುವ್ಯವಸ್ಥೆಗಾಗಿ ಶಾಂತಿಯುತ ಪ್ರತಿಭಟನೆ" ಎಂಬ ಕಾರ್ಯಕ್ರಮಕ್ಕಾಗಿ ನೂರಾರು ಜನರು ಶ್ವೇತ ಭವನದ ಲಾನ್‌ನಲ್ಲಿ ಸೇರಿದ್ದರು. "ಐ ಯಾಮ್ ಫೀಲಿಂಗ್ ಗ್ರೇಟ್" ಎಂದು ಡೊನಾಲ್ಡ್ ಟ್ರಂಪ್ ಜನರನ್ನು ಉದ್ದೇಶಿಸಿ ಮಾತು ಆರಂಭಿಸಿದರು.

"ನಿಮ್ಮ ಹಾರೈಕೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ ಡೊನಾಲ್ಡ್ ಟ್ರಂಪ್, "ನಾವು ದೊಡ್ಡ ದೊಡ್ಡ ಸಮಾವೇಶಗಳನ್ನು ಆರಂಭಿಸಲಿದ್ದೇವೆ. ನಮ್ಮ ದೇಶವನ್ನು ಸೋಶಿಯಲಿಸ್ಟ್ ದೇಶವಾಗಲು ನಾವು ಬಿಡುವುದಿಲ್ಲ" ಎಂದು ಹೇಳಿದರು.

ಚೀನಾದ ಮೇಲೆ ಸಹ ಆರೋಪಗಳನ್ನು ಮಾಡಿದ ಟ್ರಂಪ್, "ಔಷಧಿ ಕೆಲವೇ ದಿನಗಳಲ್ಲಿ ಬರಲಿದೆ. ನಮ್ಮಲ್ಲಿ ಉತ್ತಮ ಕಂಪನಿಗಳಿದ್ದು, ಅವುಗಳನ್ನು ಸರಬರಾಜು ಮಾಡಲಿವೆ. ಚೀನಾ ವೈರಸ್ ವಿರುದ್ಧ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ" ಎಂದರು.

ಶ್ವೇತ ಭವನಕ್ಕೆ ಬಂದ ಬಳಿಕ ಟ್ರಂಪ್ ಹಲವಾರು ಸಂದರ್ಶನಗಳನ್ನು, ಟಿವಿ ಕಾರ್ಯಕ್ರಮಗಳನ್ನು ಮಾಡಿದ್ದರು. ಆದರೆ, ಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಮಾತನಾಡಿದರು. ಟ್ರಂಪ್ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬ ಪ್ರಕಟಣೆಯನ್ನು ಶ್ವೇತ ಭವನ ಇನ್ನೂ ಹೊರಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+