ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 2 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 23:ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.

ಕೊರೊನಾವೈರಸ್‌ನಿಂದ ವಿಶ್ವದಲ್ಲೇ ಅತಿಹೆಚ್ಚು ಬಾಧಿತ ದೇಶವಾದ ಅಮೆರಿಕದಲ್ಲಿ ಸಾವಿನ ಸಂಖ್ಯೆ 2,00,000 ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ)ನ ಮಾಹಿತಿ ವರದಿ ತಿಳಿಸಿದೆ.

ಕೊರೊನಾ ಲಸಿಕೆ ಅಭಿವೃದ್ಧಿ : WHO ಜೊತೆ ಕೈಜೋಡಿಸಲ್ಲ ಎಂದ ಅಮೆರಿಕಕೊರೊನಾ ಲಸಿಕೆ ಅಭಿವೃದ್ಧಿ : WHO ಜೊತೆ ಕೈಜೋಡಿಸಲ್ಲ ಎಂದ ಅಮೆರಿಕ

ನ್ಯೂಯಾರ್ಕ್ ರಾಜ್ಯದಲ್ಲಿ 33,092 ಸಾವುಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ನ್ಯೂಜೆರ್ಸಿ ರಾಜ್ಯದಲ್ಲಿ 16,069 ಸಾವುಗಳು ವರದಿಯಾಗಿವೆ.

ಅಮೆರಿಕದಲ್ಲಿ ನಿತ್ಯವೂ ಸಾವಿರಾರು ಮಂದಿ ಕೊರೊನಾ ಸೋಂಕಿನಿಂದ ಮೃತಪಡುತ್ತಿದ್ದಾರೆ.

ಇದುವರೆಗೆ 68 ಲಕ್ಷ ಪ್ರಕರಣಗಳು

ಇದುವರೆಗೆ 68 ಲಕ್ಷ ಪ್ರಕರಣಗಳು

ದೇಶದಲ್ಲಿ ಇದುವರೆಗೆ 68 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 2,00,005ರಷ್ಟಿದೆ ಎಂದು ಸಿಎಸ್ಎಸ್ಇ ಮಾಹಿತಿ ತಿಳಿಸಿರುವುದಾಗಿ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯ

ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯ

ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾ ಸೇರಿದಂತೆ ಇಡೀ ವಿಶ್ವ ಕಣ್ಣಿಗೆ ಕಾಣದ ಹೊಸ ಶತ್ರುವಿನಿಂದ ನಲುಗಿದ್ದು, ಧೈರ್ಯಶಾಲಿ ಅಮೆರಿಕಾ ಜನತೆ ಈ ಸವಾಲನ್ನು ದಿಟ್ಟತೆಯಿಂದ ಎದುರಿಸುತ್ತೇವೆ ಎಂದರು.

ಕೊವಿಡ್ ಲಸಿಕೆ ಪ್ರಯೋಗದ ನೀಲನಕ್ಷೆ ಹಂಚಿಕೊಂಡ ಮಾಡೆರ್ನಾ, ಪಿಫೈಜರ್ಕೊವಿಡ್ ಲಸಿಕೆ ಪ್ರಯೋಗದ ನೀಲನಕ್ಷೆ ಹಂಚಿಕೊಂಡ ಮಾಡೆರ್ನಾ, ಪಿಫೈಜರ್

ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ

ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ

ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ. ಅವುಗಳನ್ನು ನಾವು ಮುಂಚಿತವಾಗಿ ಉತ್ಪಾದಿಸುತ್ತಿರುವುದರಿಂದ ಅನೇಕ ಡೋಸ್ ಗಳ ದೊರೆಯಲಿವೆ. ಈ ವರ್ಷ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಹೊಂದುತ್ತೇವೆ. ಒಟ್ಟಾಗಿ ಕೊವಿಡ್ ನ್ನು ತೊಲಗಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ನಲ್ಲಿ ಅಮೆರಿಕದಲ್ಲಿ ಚುನಾವಣೆ

ನವೆಂಬರ್‌ನಲ್ಲಿ ಅಮೆರಿಕದಲ್ಲಿ ಚುನಾವಣೆ

ನವೆಂಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ, ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡನ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಅಕ್ಟೋಬರ್‌ನಲ್ಲಿಯೇ ಕೊರೊನಾ ಲಸಿಕೆಯನ್ನು ನೀಡುವ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದ್ದು, ಇದರಿಂದ ತಮ್ಮ ಚುನಾವಣೆ ಗೆಲುವಿಗೆ ಸಹಾಯವಾಗಲಿದೆ ಎಂದು ನಂಬಿದ್ದಾರೆ.

Recommended Video

Modi ವಿದೇಶಿ ಪ್ರವಾಸದ ಗುಟ್ಟು ರಟ್ಟು | Oneindia Kannada

English summary
The US death toll from the coronavirus topped 200,000 on Tuesday, a figure unimaginable eight months ago when the scourge first reached the world’s richest nation with its sparkling laboratories, top-flight scientists and stockpiles of medicines and emergency supplies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X