ಡೆಡ್ಲಿ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋದ ದೊಡ್ಡಣ್ಣ ಅಮೆರಿಕ

ವಾಷಿಂಗ್ಟನ್, ಮಾರ್ಚ್ 23: ಡೆಡ್ಲಿ ಕೊರೊನಾಕ್ಕೆ ಅಮೆರಿಕದಲ್ಲಿ ಸಾವಿನ ಸರಣಿ ನಿಲ್ಲುತ್ತಿಲ್ಲ. ಅಮೆರಿಕದಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸೋಮವಾರದ ವರದಿಗಳ ಪ್ರಕಾರ 500 ಕ್ಕೆ ಏರಿಕೆಯಾಗಿದೆ. 35058 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Recommended Video

      Trump finally points his finger towards China | Oneindia kannada

      ಅಮೆರಿಕದ ನ್ಯೂಯಾರ್ಕ್ ಒಂದರಲ್ಲೇ 184 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಬಳಲುತ್ತಿರುವ ನಾಲ್ಕನೇ ಅತಿದೊಡ್ಡ ರಾಷ್ಟ್ರ ಅಮೆರಿಕ ಎಂದು ಎನಿಸಿಕೊಂಡಿದೆ. ಇದರಿಂದಾಗಿ ಅಲ್ಲಿನ ಸರಕಾರ ಮತ್ತು ರಾಜಕೀಯ ನಾಯಕರನ್ನು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಆದರೆ, ಸದ್ಯದ ಬೆಳವಣಿಗೆಗಳ ಪ್ರಕಾರ ಕೊರೊನಾ ವೈರಸ್‌ಗೆ ಅಮೆರಿಕ ತತ್ತರಿಸಿದೆ ಎಂದು ವರದಿಗಳು ಹೇಳಿವೆ.

      ಇದೇ ವೇಳೆ, ಅಮೆರಿಕ ಸರ್ಕಾರ ನಾಗರಿಕರು ಮನೆಯ ಒಳಗೇ ಇರುವಂತೆ ಮನವಿ ಮಾಡಿಕೊಂಡಿದೆ. ಸೋಂಕು ತಗುಲವ ಸಂಖ್ಯೆ ಲಕ್ಷದ ಗಡಿ ದಾಟಬಹುದು ಎಂಬ ಎಚ್ಚರಿಕೆಯನ್ನು ಅಲ್ಲಿನ ಸ್ಥಳೀಯ ಸರ್ಕಾರ ಎಚ್ಚರಿಕೆನೀಡಿದೆ. ಮುಂದೆ ಓದಿ.

      ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು

      ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು

      ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯೂಯಾರ್ಕ ಗವರ್ನರ್ ಆಂಡ್ರೋ ಕುಮೋ ಮಹತ್ವದ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಶೇ 40 ರಿಂದ 80 ರಷ್ಟು ಜನಕ್ಕೆ ಸೋಂಕು ತಗಲಬಹುದು ಎಂದು ಅಂದಾಜಿಸಿದ್ದಾರೆ. ಗವರ್ನರ್ ಅವರ ಈ ಹೇಳಿಕೆ ಅಮೆರಿಕದ ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

      ನ್ಯೂಯಾರ್ಕ್‌ನಲ್ಲಿ ಅಘೋಷಿತ ಬಂದ್

      ನ್ಯೂಯಾರ್ಕ್‌ನಲ್ಲಿ ಅಘೋಷಿತ ಬಂದ್

      ಅಮೆರಿಕದಲ್ಲಿ ಸೋಂಕು ಕಾಣಿಸಿಕೊಂಡಿದರಲ್ಲಿ ನ್ಯೂಯಾರ್ಕ ನಗರದ್ದೆ ಅತಿ ಹೆಚ್ಚಿನ ಪಾಲು ಕಂಡು ಬಂದಿದೆ. 15,952 ಜನರಿಗೆ ನ್ಯೂಯಾರ್ಕ್‌ನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆ ಬಿಟ್ಟು ಯಾರೂ ಹೊರೆಗೆ ಬರಬೇಡಿ ಎಂದು ಅಲ್ಲಿನ ಸ್ಥಳೀಯ ಸರ್ಕಾರ ಕಟ್ಟಪ್ಪಣೆ ಮಾಡಿದೆ.

      ಕರಾಳ ದಿನವಾಗಿರಲಿವೆ

      ಕರಾಳ ದಿನವಾಗಿರಲಿವೆ

      ಕೊರೊನಾ ವೈರಸ್ ಅಮೆರಿಕವನ್ನು ಈ ಪರಿ ಕಾಡುತ್ತಿರುವ ಬಗ್ಗೆ ಅಮೆರಿಕದ ಜನರಲ್ ಸರ್ಜನ್ ಜರ್ಮಿ ಅಡಮ್ಸ್ ತೀವ್ರ ಆತಂಕ ಹೊರ ಹಾಕಿದ್ದಾರೆ. ಮುಂದಿನ ಎರಡು ವಾರದ ಅಮೆರಿಕದ ಪಾಲಿಗೆ ಕರಾಳ ದಿನವಾಗಿರಲಿವೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಚಿಂತಾಕ್ರಾಂತರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

      ಮಲೇರಿಯಾ ಲಸಿಕೆ ಬಳಕೆಗೆ ಅನುಮತಿ

      ಮಲೇರಿಯಾ ಲಸಿಕೆ ಬಳಕೆಗೆ ಅನುಮತಿ

      ಮತ್ತೊಂದು ಮಹತ್ವದ ಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌, ಮಲೇರಿಯಾ ನಿರೋಧಕ ಲಸಿಕೆಯನ್ನು ಕೊರೊನಾ ಚಿಕಿತ್ಸೆಗೆ ಬಳಕೆ ಮಾಡಲು ಅನುಮತಿ ನೀಡಿದ್ದಾರೆ. ಈ ಬೆಳವಣಿಗೆಗಳಿಗೆ ಪೂರಕವಾಗಿ ಅಮೆರಿಕದ ಪ್ರಜೆಗಳು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವುದು ಬೇಡ ಎಂಬ ಸಲಹೆಯನ್ನೂ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+