• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಸೂಪರ್‌ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ: ಪೊಲೀಸರು ಸೇರಿ 10 ಸಾವು

|

ವಾಷಿಂಗ್ಟನ್, ಮಾರ್ಚ್ 23: ಅಮೆರಿಕದ ಸೂಪರ್‌ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಸೇರಿ 10 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕದ ಕೊಲೊಡಾಡೊದಲ್ಲಿ ಘಟನೆ ಸಂಭವಿಸಿದೆ. ಶಂಕಿತನಿಗೂ ಗಾಯಗಳಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಡೆನ್‌ವರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿ ಗುಂಡಿನ ದಾಳಿ ನಡೆದಿದೆ.

Video: ಪ್ರತಿಷ್ಠಿತ ಮಾಲ್ ನಲ್ಲಿ 12 ಮಂದಿಗೆ ಗುಂಡಿಕ್ಕಿದ ಸೈನಿಕ

ಗುಂಡಿನ ದಾಳಿಯಲ್ಲಿ ಪೊಲೀಸರು ಸೇರಿ ಹಲವರು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಧ್ಯ ವಯಸ್ಸಿನ ಶರ್ಟ್ ಧರಿಸದೆ ಇದ್ದ, ರಕ್ತಸಿಕ್ತ ದೇಹದಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತನಿಗೆ ಸಹ ಗಾಯಗಳಾಗಿದ್ದು ಆತನನ್ನು ವೈದ್ಯಕೀಯ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯ ಸದ್ಯಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತಪಟ್ಟ ಪೊಲೀಸ್ ಅಧಿಕಾರಿಯನ್ನು 51 ವರ್ಷದ ಎರಿಕ್ ಟಾಲ್ಲಿ ಎಂದು ಗುರುತಿಸಲಾಗಿದ್ದು ಇವರು 2010ರಿಂದ ಬೌಲ್ಡರ್ ಪೊಲೀಸ್ ಜೊತೆಗಿದ್ದರು ಎಂದು ಹೇಳಲಾಗುತ್ತಿದೆ.

ಮೃತಪಟ್ಟವರ ಹೆಸರುಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕಿದೆ ಎಂದು ಬೌಲ್ಡರ್ ಕೌಂಟಿ ಜಿಲ್ಲಾ ಅಟೊರ್ನಿ ಮೈಕೆಲ್ ಡೌಘರ್ಟಿ ತಿಳಿಸಿದ್ದಾರೆ.

ಪೊಲೀಸರ ಬಂಧನದಲ್ಲಿರುವವರು ನಿಜವಾಗಿಯೂ ಆರೋಪಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. 911ಕ್ಕೆ ಕರೆ ಮಾಡಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಶಂಕಿತ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿರಲಿಲ್ಲ, ಹೀಗಾಗಿ ಆತನನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Several people including a police officer were killed Monday by a gunman at a US grocery store in the western state of Colorado, police said, without specifying the assailant's possible motive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X