'ಅಮೆರಿಕದಲ್ಲಿ ಕೊರೊನಾ ಎರಡನೇ ಅಲೆ ಮತ್ತಷ್ಟು ಭಯಾನಕ'

ವಾಷಿಂಗ್ಟನ್, ಏಪ್ರಿಲ್ 22: ಅಮೆರಿಕದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಮತ್ತಷ್ಟು ಭಯಾನಕವಾಗಿರಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡಿಸಿ ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್ ಹೇಳುವಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಲು ಅಮೆರಿಕದ ಜನರು ಸಿದ್ಧರಾಗಬೇಕು ಎಂದು ಹೇಳಿದ್ದಾರೆ.

ಪ್ರತಿ ವರ್ಷವೂ ಫ್ಲೂ ಕಾಲ ಎಂದರೆ ಅಕ್ಟೋಬರ್‌ನಿಂದ ಮೇವರೆಗೆ ಇರುತ್ತದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಫ್ಲೂನಿಂದ ಮೃತಪಡುತ್ತಾರೆ.
ಈಗ ಮುಂದಬರುವ ಫ್ಲೂ ಸೀಸನ್ ಇನ್ನಷ್ಟು ಭಯಾನಕವಾಗಿರಲಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ವರ್ಷ ಬರಲಿರುವ ಚಳಿಗಾಲದಲ್ಲಿ ಕೊರೊನಾ ವೈರಸ್ ಮತ್ತೆ ಹುಟ್ಟಿಕೊಂಡರೂ ಆಶ್ಚರ್ಯವೇನಿಲ್ಲ ಎಂದಿದ್ದಾರೆ. ಫ್ಲೂ ಹಾಗೂ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಒಂದೇ ಸಮಯದಲ್ಲಿ ಕಾಣಿಸಿಕೊಂಡರೆ ನಿಯಂತ್ರಣ ಕಷ್ಟ ಎಂದು ಹೇಳಲಾಗಿದೆ.

2009ರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರ

2009ರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರ

2009ರಲ್ಲಿ ಎಚ್‌1ಎನ್‌1 ಕಾಣಿಸಿಕೊಂಡಿತ್ತು. ಅದು ಮಾರ್ಚ್‌ನಿಂದ ಜೂನ್ ವರೆಗೆ ಇತ್ತು, ಬಳಿಕ ಮತ್ತೆ ಫ್ಲೂ ಸೀಸನ್‌ಲ್ಲಿ ದುಪ್ಪಟ್ಟು ಹೆಚ್ಚಾಗಿತ್ತು. ಹೀಗಾಗಿ ಕೊರೊನಾ ವೈರಸ್ ಪ್ರಕರಣದಲ್ಲಿ ಕೂಡ ಎರಡನೇ ಹಂತದಲ್ಲಿ ಪ್ರಕರಣಗಳು ಮತ್ತಷ್ಟು ಗಂಭೀರವಾಗುವ ಸಾಧ್ಯತೆಗಳಿವೆ.

80 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

80 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

ಅಮೆರಿಕದಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ 44,845 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. 24 ಗಂಟೆಗಳಲ್ಲಿ 2700 ಮಂದಿ ಸಾವನ್ನಪ್ಪಿದ್ದಾರೆ.

ಒಂದೇ ಸಮಯದಲ್ಲಿ ಎರಡು ರೋಗಗಳು ಬಂದರೆ ಅಪಾಯ

ಒಂದೇ ಸಮಯದಲ್ಲಿ ಎರಡು ರೋಗಗಳು ಬಂದರೆ ಅಪಾಯ

ಸಾಮಾನ್ಯವಾಗಿ ಅಮೆರಿಕದಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಫ್ಲೂ ಬಂದು ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಕೊರೊನಾ ವೈರಸ್ ಕೂಡ ಮತ್ತೆ ಅದೇ ಸಂದರ್ಭದಲ್ಲಿ ಬಂದರೆ ಜನರನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದಲೂ ಪ್ರಯೋಜನವಾಗುತ್ತಿಲ್ಲ

ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದಲೂ ಪ್ರಯೋಜನವಾಗುತ್ತಿಲ್ಲ

ಲಾಕ್‌ಡೌನ್ ಮಾಡಿರುವುದರಿಂದ ಸರ್ಕಾರದ ವಿರುದ್ಧ ಈಗಾಗಲೇ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಕೊರೊನಾ ವೈರಸ್‌ಗೆ ಮಲೇರಿಯಾ ಔಷಧವನ್ನು ನೀಡಲಾಗುತ್ತಿದ್ದು ಅದರಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿಲ್ಲ.

ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಿದರೂ ಕೂಡ ಶೇ.28 ರಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+