ವೇದಿಕೆಯಲ್ಲಿ ಮಗಳ ಬಗ್ಗೆಯೇ ಅನುಚಿತವಾಗಿ ಮಾತನಾಡಿದ ಟ್ರಂಪ್
ವಾಷಿಂಗ್ಟನ್, ಜು.1: ಪುತ್ರಿ ಇವಾಂಕಾ ಟ್ರಂಪ್ ಹಾಗೂ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋರನ್ನು ಅತ್ಯುತ್ತಮ ದಂಪತಿ ಎಂದು ಸಂಬೋಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಉತ್ತರ ಕೊರಿಯಾ ಅಧ್ಯಕ್ಷ ಕಿಮ್-ಜಾಂಗ್-ಉನ್ ಭೇಟಿ ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್ ಅಸಾಧ್ಯವಾದ ಈ ಭೇಟಿಯನ್ನು ಪಾಂಪಿಯೋ ಹಾಗೂ ಇವಾಂಕಾ ಸಾಧ್ಯವಾಗಿಸಿದ್ದಾರೆ. ಇವರಿಬ್ಬರು ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದ ಟ್ರಂಪ್ ವೇದಿಕೆಗೆ ಬರುವಂತೆ ಆಹ್ವಾನಿಸಿದರು.
ಅವರಿಬ್ಬರು ವೇದಿಕೆಗೆ ಬರುತ್ತಿದ್ದಂತೆ ಇವರಿಬ್ಬರು ಅತ್ಯುತ್ತಮ ದಂಪತಿ ಅಷ್ಟೇ ಸುಂದರವಾಗಿದ್ದಾರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಕೊರಿಯಾ ಅಧ್ಯಕ್ಷ ಒಬ್ಬರನ್ನು ಉತ್ತರ ಕೊರಿಯಾದಲ್ಲೇ ಅಮೆರಿಕದ ಅಧ್ಯಕ್ಷರೊಬ್ಬರು ಭೇಟಿ ಮಾಡುತ್ತಿರುವುದು ಇದೇ ಮೊದಲಬಾರಿಯಾಗಿದೆ.

ಇಂತಹ ಐತಿಹಾಸಿಕ ಕ್ಷಣಕ್ಕೆ ಟ್ರಂಪ್ ಕಾರಣರಾಗಿದ್ದಾರೆ. ಈ ವಿಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಸಂದರ್ಭದಲ್ಲಿ ಟ್ರಂಪ್ ಈ ರೀತಿ ಎಡವಟ್ಟು ಮಾಡಿದ್ದಾರೆ.












Click it and Unblock the Notifications