Get Updates
Get notified of breaking news, exclusive insights, and must-see stories!

ಅಮೆರಿಕದಲ್ಲಿ 100 ವಾಹನಗಳ ಮಧ್ಯೆ ಭಾರಿ ಅಪಘಾತ: 5 ಮಂದಿ ಸಾವು

ಟೆಕ್ಸಾಸ್‌,ಫೆಬ್ರವರಿ 12: ಅಮೆರಿಕದ ಟೆಕ್ಸಾಸ್‌ನಲ್ಲಿ 100 ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ಘಟನೆಯನ್ನು ಐವರು ಪ್ರಾಣ ಕಳೆದುಕೊಂಡಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಕಾರು, ಟ್ರಕ್‌ ಸೇರಿ ಒಟ್ಟು 100 ವಾಹನಗಳು ಪರಸ್ಪರ ಏಕಕಾಲದಲ್ಲಿ ಡಿಕ್ಕಿ ಹೊಡೆದುಕೊಂಡಿವೆ ಎಂದು ಟೆಕ್ಸಾಸ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರಲ್ಲಿ ಅನೇಕರು ಗಂಭೀರವಾಗಿದ್ದಾರೆ. ಇನ್ನು ಘಟನೆ ಮಾಹಿತಿ ಸಿಕ್ಕಿ ಸ್ಥಳಕ್ಕೆ 24 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ವಾಹನಗಳ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೆಚ್ಚಿಬೀಳಿಸುವಂತಿದೆ.

At Least Five Dead In 100-Car Pileup On Icy Texas Freeway

ಚಳಿಯಿಂದಾಗಿ ಅಮೆರಿಕದ ಹಲವು ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದೆ. ಹಾಗೆಯೇ ಜತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯೂ ಕೂಡ ಬರುತ್ತಿದೆ. ವಾತಾವರಣವು ಮಂಜಿನಿಂದ ಕೂಡಿದ್ದು, ವಾಹನಗಳು ಕಾಣದಷ್ಟು ಮಟ್ಟಿಗೆ ಮಂಜು ಕವಿದಿದೆ.

ಟ್ರಕ್ ಒಂದು ವೇಗವಾಗಿ ಬಂದಿದ್ದರಿಂದ ಸಾಲಾಗಿ ನಿಂತಿದ್ದ ಕಾರುಗಳಿಗೆ ‌ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮಕ್ಕೆ ಕಾರುಗಳು ಸಿನಿಮೀಯ ರೀತಿಯಲ್ಲಿ ಹಾರಿ ಹೋಗುವ ದೃಶ್ಯವಿದೆ. ಈ ಮೊದಲ ಅಪಘಾತದನಂತರ ಉಳಿದ ಒಂದೊಂದೆ ವಾಹನಗಳು ಬಂದು ನಿಂತಿರುವ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ವೇಗದಲ್ಲಿದ್ದ ವಾಹನಗಳು ನೇರವಾಗಿ ಕೆಲ ವಾಹನಗಳ ಮೇಲೆ ಹಾರಿ ಹೋಗಿ ಕುಳಿತು ಕೆಳಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಈ ಭಾಗದಲ್ಲಿ ಇಷ್ಟು ಹಿಮಪಾತ ಹಾಗೂ ಕೆಟ್ಟ ರೀತಿಯ ವಾತವರಣವನ್ನು ನಾವು ಇದೇ ಮೊದಲು ನೋಡುತ್ತಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡ ಕನಿಷ್ಠ 30 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+