ಯುಎಸ್ ಚುನಾವಣೆ ಹೊಸ ಟ್ರೆಂಟ್: Donald Trump You Are Fired ಸದ್ದು!

ವಾಶಿಂಗ್ಟನ್, ನವೆಂಬರ್.05: ವಿಶ್ವದ ದೊಡ್ಡಣ್ಣ ಅಮೆರಿಕಾದ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂದು ಇಡೀ ಜಗತ್ತು ಎದುರು ನೋಡುತ್ತಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಆಯ್ಕೆ ಆಗುತ್ತಾರೆಯೇ ಅಥವಾ ಡೊನೊಲ್ಡ್ ಟ್ರಂಪ್ ಮರು ಆಯ್ಕೆ ಆಗುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

ಒಂದು ಕಡೆಯಲ್ಲಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಸಂದೇಶಗಳು ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. "Donald Trump You Are Fired" ಎಂಬ ಸಂದೇಶಗಳು ಸಖತ್ ಸದ್ದು ಮಾಡುತ್ತಿವೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 253 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 213 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

ಟ್ರೆಂಡ್ ಸೃಷ್ಟಿ ಮಾಡಿದ್ದು ಯಾರು?

ಅಮೆರಿಕಾ ಸರ್ಕಾರದ ನೀತಿಶಾಸ್ತ್ರ ಕಚೇರಿಯ ಮಾಜಿ ನಿರ್ದೇಶಕ ವಾಲ್ಟರ್ ಶುವಾಬ್, ಈ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಎರಡನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗುವುದಕ್ಕೆ ಬಯಸುತ್ತಿದ್ದಾರೆ. ಮೊದಲ ಅವಧಿಯಲ್ಲಿ ಟ್ರಂಪ್ ನೀಡಿರುವ ಆಡಳಿತ, ಕೋಪದ ಪ್ರವೃತ್ತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಪ್ರಸಕ್ತ ಸನ್ನಿವೇಶದಲ್ಲಿ ಅಮೆರಿಕಾ ಅಧ್ಯಕ್ಷರಾಗಲು ಜೋ ಬಿಡೆನ್ ಉತ್ತಮ ಆಯ್ಕೆ ಆಗುತ್ತಾರೆಯೇ. ಹಾಗಿದ್ದಲ್ಲಿ ಅದಕ್ಕೆ ಕಾರಣವನ್ನು ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. "Donald Trump You Are Fired" ಎಂಬ ಸಾಲು ಬರೆದುಕೊಂಡಿದ್ದು, ಅಭಿಪ್ರಾಯ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಾಲು ಸಾಲು ಟ್ವೀಟ್ ಗಳ ಮೂಲಕ ಟ್ವಿಟರ್ ನಲ್ಲಿ ಡೊನಾಲ್ಡ್ ಟ್ರಂಪ್ ಕುರಿತು ಟ್ರೆಂಡ್ ಸೃಷ್ಟಿಯಾಗುತ್ತಿದೆ.

ನೀವು ಮನೆಗೆ ಹೋಗಿ ಎಂದು ಟ್ವೀಟ್

ಡೊನಾಲ್ಡ್ ಟ್ರಂಪ್ ಅವರೇ ನಿಮ್ಮನ್ನು ವಜಾಗೊಳಿಸಲಾಗಿದೆ. ನೀವು ಮನೆಗೆ ಹೋಗಿ. ಮ್ಯಾನ್ ಹ್ಯಾಟನ್ ನಿಂದ ಹೊರಗೆ ಹೋಗಬೇಡಿ ಎಂದು ವೆಸ್ಟ್ ಇಸ್ ದಿ ಬೆಸ್ಟ್ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ಬಗ್ಗೆ ಕೈವಾನ್ ಶ್ರೋಫ್ ಟ್ವೀಟ್

ಟ್ವಿಟರ್ ನಲ್ಲಿ ಟ್ರಂಪ್ ಯು ಆರ್ ಫೈಯರ್ ಟ್ರೆಂಡ್ ಸೃಷ್ಟಿಯಾಗುತ್ತಿದ್ದಂತೆ ಡೆಮಾಕ್ರಟ್ ರಾಜಕೀಯ ತಜ್ಞ ಕೈವಾನ್ ಶ್ರೋಫ್ ಟ್ವೀಟ್ ಮಾಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ಹಲವು ನಾಯಕರ ಹೆಸರನ್ನು ಉಲ್ಲೇಖಿಸಿದ ಅವರು, ಹೆಸರಿನ ಮುಂದೆ ಯು ಆರ್ ಫೈಯರ್ ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರವೇ ವೈಟ್ ಹೌಸ್ ನಿಂದ ಟ್ರಂಪ್ ಔಟ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಶುಕ್ರವಾರದ ವೇಳೆಗೆ ಹೊರ ಬೀಳಲಿದೆ. ಶುಕ್ರವಾರವೇ ಅವರು ಸರ್ಕಾರಿ ಕಚೇರಿಗಳನ್ನು ಖಾಲಿ ಮಾಡಿಕೊಂಡು ಹೋಗುತ್ತಾರೆ. ಟ್ರಂಪ್ ಯು ಆರ್ ಫೈಯರ್ಡ್ ಎಂದು ಅಬೂಬಕರ್ ಅಲಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+