ಹೆಬ್ಬಾವಿನಿಂದ ಸತ್ತ ಮಹಿಳೆ ಇದ್ದ ಮನೆಯಲ್ಲಿ 140 ಹಾವು ಪತ್ತೆ!

ವಾಷಿಂಗ್ಟನ್, ನವೆಂಬರ್ 02: ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನು ಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು.

American Woman Died After a Python wrapped around her neck

ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು ಕೊಟ್ಟಿದ್ದರು. ಈ ಹಾವುಗಳನ್ನು ನೋಡಿಕೊಂಡು ಹೋಗುವುದಕ್ಕೆಂದು ಬಂದಿದ್ದ ಲಾರಾ ಅವರನ್ನು ಹೆಬ್ಬಾವೊಂದು ಇದ್ದಕ್ಕಿದ್ದಂತೆ ಸುತ್ತಿಕೊಂಡಿತ್ತು. ಮೊದಲಿಗೆ ಆಟ ಎಂದುಕೊಂಡರೆ ಅದು ಎಷ್ಟೇ ಪ್ರಯತ್ನಿಸಿದರೂ ಅವರ ದೇಹವನ್ನು ಬಿಡದೆ, ಗಟ್ಟಿಯಾಗಿ ಸುತ್ತಿಕೊಂಡ ಪರಿಣಾಮ ಅವರು ಮರಣವನ್ನಪ್ಪಿದರು.

ಹಾವುಗಳಲ್ಲಿ ಹೆಬ್ಬಾವುಗಳು ಮಾತ್ರವೇ ವಿಷಕಾರಿಯಲ್ಲ. ಆದರೆ ಅವು ಮನುಷ್ಯರನ್ನೂ ನುಂಗಬಲ್ಲವು ಮತ್ತು ತಮ್ಮ ದೇಹದಿಂದ ಸುತ್ತಿಕೊಂಡು ಉಸಿರುಗಟ್ಟಿಸಿ ಕೊಲ್ಲಬಲ್ಲವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+