‘ಕೊರೊನಾ’ ಸಂಕಷ್ಟದಲ್ಲಿರುವ ಜನರಿಗೆ 66 ಲಕ್ಷ ಕೋಟಿ ರೂಪಾಯಿ ಪರಿಹಾರ

1 ಕೋಟಿ 84 ಲಕ್ಷ ಸೋಂಕಿತರು, ಬರೋಬ್ಬರಿ 3 ಲಕ್ಷ 27 ಸಾವಿರ ಜನರ ಸಾವು. ಅಷ್ಟಕ್ಕೂ ಇದು ಈವರೆಗೆ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಉಂಟಾದ ಸಾವು, ನೋವಿನ ಅಂಕಿ-ಅಂಶ. 'ಕೊರೊನಾ' ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ. ಕೊರೊನಾ ವೈರಸ್ ಬಂದಪ್ಪಳಿಸಿದ ನಂತರ ವಿಶ್ವದ ದೊಡ್ಡಣ್ಣನ ಬುಡವೇ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ.

ಈ ಹೊತ್ತಲ್ಲೇ ಅಮೆರಿಕ ಅಲರ್ಟ್ ಆಗಿದ್ದು, ತನ್ನ ಆರ್ಥಿಕತೆಗೆ ಬಲ ನೀಡಲು ಮುಂದಾಗಿದೆ. ಸೋತು ಸೊರಗಿದ ಅಮೆರಿಕದ ಆರ್ಥಿಕ ಸ್ಥಿತಿಗೆ ಪುನಶ್ಚೇತನ ನೀಡಲು ಸುಮಾರು 66 ಲಕ್ಷ ಕೋಟಿ ವೆಚ್ಚದ ಪ್ಯಾಕೇಜ್‌ಗೆ ಗ್ರೀನ್‌ ಸಿಗ್ನಲ್ ಕೊಡಲಾಗಿದೆ. ಅಮೆರಿಕದ ಸಂಸತ್ ಈ ಬೃಹತ್ ಮೊತ್ತದ ಪ್ಯಾಕೇಜ್‌ಗೆ ಅನುಮತಿ ನೀಡಿದೆ. 66 ಲಕ್ಷ ಕೋಟಿ ಮೊತ್ತದ ಈ ಪ್ಯಾಕೇಜ್ ಅಮೆರಿಕದ ಜನರಿಗೆ ಉಸಿರು ನೀಡಲಿದೆ.

ಕೋಟ್ಯಂತರ ಜನರಿಗೆ ನೆರವಾಗಲಿದ್ದು, ಪಾತಾಳ ಸೇರಿದ ಉದ್ಯಮಗಳಿಗೆ ಬಲ ನೀಡಲಿದೆ. ಸಂಸತ್ ನೆರವು ಸಿಕ್ಕ ಹಿನ್ನೆಲೆಯಲ್ಲಿ ಈ ಶಾಸನಕ್ಕೆ ಅಧ್ಯಕ್ಷ ಟ್ರಂಪ್‌ ಅಂಕಿತ ಹಾಕಬೇಕಿದೆ. ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುವ ಹೊತ್ತಲ್ಲಿ ಟ್ರಂಪ್‌ಗೆ ಮಹತ್ವದ ಜವಾಬ್ದಾರಿ ಸಿಕ್ಕಂತಾಗಿದೆ.

ಕೆಲಸ ಇಲ್ಲದೆ ಬೀದಿಗೆ ಬಿದ್ದ ಜನ

ಕೆಲಸ ಇಲ್ಲದೆ ಬೀದಿಗೆ ಬಿದ್ದ ಜನ

ಹೊರಗಿಂದ ನೋಡುವ ಜನರಿಗೆ ಅಮೆರಿಕ ಶ್ರೀಮಂತ ದೇಶ, ಬಡತನ ಇಲ್ಲವೇ ಇಲ್ಲ ಎಂಬಂತೆ ಕಾಣುತ್ತದೆ. ಆದರೆ ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತು ಅಮೆರಿಕದ ಆರ್ಥಿಕ ಸ್ಥಿತಿಗೆ ಒಪ್ಪುತ್ತದೆ. ಅಮೆರಿಕದ ಸ್ಥಿತಿ ಬಗ್ಗೆ ಹೊರಗಿನಿಂದ ಊಹೆ ಮಾಡಿಕೊಳ್ಳುವ ಜನರಿಗೆ ಅಲ್ಲಿ ಎಲ್ಲವೂ ನೆಟ್ಟಗಿದೆ ಎಂಬಂತೆ ಕಂಡರೂ, ಪರಿಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ. ಅಮೆರಿಕದಲ್ಲಿ ಇಂದಿಗೂ ಕೋಟ್ಯಂತರ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಬೇರೆ ಬಂದು ಅಪ್ಪಳಿಸಿದ್ದು, ಹತ್ತಾರು ಕೋಟಿ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಜನರು ಕೆಲಸ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ಈ ಹಿಂದೆ ಟ್ರಂಪ್ ಡಿಸೆಂಬರ್ ಒಳಗಾಗಿ ವ್ಯಾಕ್ಸಿನ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಇದರ ಹಿಂದೆ ಚಳಿ ಹತ್ತಿರವಾಗುತ್ತಿದೆ ಎಂಬ ಮುನ್ಸೂಚನೆ ಕೂಡ ಇತ್ತು. ಆದರೆ ಟ್ರಂಪ್ ಭರವಸೆ ಈಡೇರಿಲ್ಲ, ಟ್ರಂಪ್ ಊಹೆ ಸುಳ್ಳಾಗಿ ಹೋಗಿದೆ. ಇಷ್ಟೆಲ್ಲದರ ಮಧ್ಯೆ 2 ಲಕ್ಷ 29 ಸಾವಿರ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಚಳಿಗಾಲ ಅಮೆರಿಕದ ನೆಲಕ್ಕೆ ಬಂದಪ್ಪಳಿಸುತ್ತಿರುವ ಈ ಕಾಲಘಟ್ಟದಲ್ಲಿ ಆ ಭಗವಂತನೇ ಅಲ್ಲಿನ ನಿವಾಸಿಗಳನ್ನು ಕಾಪಾಡಬೇಕು. ಮಾಮೂಲಿ ಚಳಿ ಇದ್ದಾಗಲೇ ಜನ ನೂರಾರು ರೋಗಿಗಳಿಗೆ ತುತ್ತಾಗುತ್ತಿದ್ದರು. ಆದರೆ ಈಗ ಬಂಪರ್ ಗಿಫ್ಟ್ ಎಂಬಂತೆ ಕೊರೊನಾ ಬಂದೆರಗಿದ್ದು, ದೊಡ್ಡಣ್ಣನ ನಾಡು ಸಂದಿಗ್ಧ ಸ್ಥಿತಿಯಲ್ಲಿ ಸುಧಾರಿಸಿಕೊಳ್ಳಲು ಕೂಡ ಸಾಧ್ಯವಾಗದೆ ನಲುಗಿ ಹೋಗಿದೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಟ್ರಂಪ್ ಎಡವಟ್ಟಿನಿಂದ ಸಮಸ್ಯೆ ಉಲ್ಬಣ

ಟ್ರಂಪ್ ಎಡವಟ್ಟಿನಿಂದ ಸಮಸ್ಯೆ ಉಲ್ಬಣ

ಅಮೆರಿಕದ ಇಂದಿನ ಸ್ಥಿತಿಗೆ ನಿರ್ಗಮಿತ ಅಧ್ಯಕ್ಷ ಟ್ರಂಪ್ ನೇರ ಕಾರಣ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಡೊನಾಲ್ಡ್ ಟ್ರಂಪ್ ಅಮೆರಿಕದ ನಾಯಕನಾಗಿ, ಅಮೆರಿಕನ್ನರಿಗೆ ಸರಿಯಾಗಿ ಮಾರ್ಗದರ್ಶನವನ್ನ ನೀಡುವ ಬದಲು, ದಾರಿ ತಪ್ಪಿಸಿದ್ದರು. ಮಾಸ್ಕ್ ಬೇಡ, ವ್ಯಾಕ್ಸಿನ್ ಅಗತ್ಯವಿಲ್ಲ ಎಂಬಂತಹ ಹೇಳಿಕೆ ನೀಡುತ್ತಾ ಅಮೆರಿಕನ್ನರು ದಾರಿತಪ್ಪುವಂತೆ ಮಾಡಿದ್ರು. ಇದರಿಂದ ಅಮೆರಿಕದಲ್ಲಿ ಭಯಾನಕ ವಾತಾವರಣ ಎದುರಾಗಿದೆ. ಲಕ್ಷಾಂತರ ಜನರ ಸಾವಿಗೆ ಟ್ರಂಪ್ ಕಾರಣ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಆರ್ಥಿಕ ಪುನಶ್ಚೇತನಕ್ಕೆ ಲಕ್ಷ ಲಕ್ಷ ಕೋಟಿ ರೂಪಾಯಿ ಸುರಿಯುತ್ತಿದ್ದು, ಅಮೆರಿಕದ ಆರ್ಥಿಕ ಸ್ಥಿತಿ ಎಷ್ಟು ಬೇಗ ಸುಧಾರಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+