ಜಗತ್ತಿಗೆ ಚೀನಾ ದೊಡ್ಡಣ್ಣ..? ಸೋತು ಹೋಯಿತಾ ಅಮೆರಿಕ..?

ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಮತ್ತೆ ಗುಡುಗಿದ್ದಾರೆ. ಟ್ರಂಪ್ ಮಾಡಿದ ಎಡವಟ್ಟುಗಳಿಂದ ಅಮೆರಿಕದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ ಎಂದು ಒಬಾಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಒಬಾಮಾ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಪ್ರತಿಬಾರಿ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್ಸ್ V/ S ಡೆಮಾಕ್ರಟಿಕ್ ಎನ್ನುವಂತಿತ್ತು. ಆದರೆ 2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ V/ S ಟ್ರಂಪ್ ವಿರೋಧಿಗಳು ಎನ್ನುವಂತೆ ಬಿಂಬಿತವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಟ್ರಂಪ್‌ಗೆ ಸ್ವಂತ ಪಕ್ಷದಲ್ಲೇ ವಿರೋಧಿಗಳು ಹುಟ್ಟಿಕೊಂಡಿರುವುದು. ಇಷ್ಟೆಲ್ಲದರ ಮಧ್ಯೆ ಅಮೆರಿಕದ 44ನೇ ಅಧ್ಯಕ್ಷ ಒಬಾಮಾ ಕೂಡ ಟ್ರಂಪ್ ವಿರುದ್ಧ ಅಖಾಡ ಪ್ರವೇಶಿಸಿದ್ದಾರೆ.

ಜಗತ್ತಿನಲ್ಲಿ ಅಮೆರಿಕ ಎಂದರೆ ಉನ್ನತ ಭಾವನೆ ಇದೆ, ಗೌರವ ಇದೆ. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ಘನತೆ ದಿನದಿನಕ್ಕೂ ಕುಸಿಯುತ್ತಾ ಸಾಗಿದೆ. ಇದಕ್ಕೆಲ್ಲಾ ಡೊನಾಲ್ಡ್ ಟ್ರಂಪ್ ವರ್ತನೆ, ಅವರು ಕೈಗೊಳ್ಳುತ್ತಿರುವ ವಿವಾದಾತ್ಮಕ ಕ್ರಮಗಳೇ ಕಾರಣ ಎಂದು ಒಬಾಮಾ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಬಾಮಾ ಹೇಳಿಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕಿಚ್ಚುಹಚ್ಚಿದೆ.

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಜಗತ್ತಿಗೆ ತೊಂದರೆ ಆದರೆ ಮಾಸ್ಕೋ ಬೇಕಿಲ್ಲ..!

ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಈಗ ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಅಮೆರಿಕದ ವಿರೋಧಿಗಳಿಗೆ ಅದೇನು ಬೇಕೋ ಹಾಗೇ ಟ್ರಂಪ್ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಕೊರೊನಾ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ.

ಇದೆಲ್ಲದರ ಪರಿಣಾಮ ಅಮೆರಿಕ ಮಾನ ಹರಾಜಾಗಿದೆ ಎಂದು ಒಬಾಮಾ ಆರೋಪಿಸಿದ್ದಾರೆ. ಅಲ್ಲದೆ ಟ್ರಂಪ್‌ಗೆ ತಮ್ಮ ಕ್ರಮ ಹಾಗೂ ತಾವು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ಇರುವುದಿಲ್ಲ ಎಂದು ಒಬಾಮಾ ಆರೋಪಿಸಿದ್ದಾರೆ. ಇದೆಲ್ಲದರ ಪರಿಣಾಮ ರಷ್ಯಾ ಹಾಗೂ ಚೀನಾ ಜಗತ್ತಿನ ಚುಕ್ಕಾಣಿಗೆ ಹಿಡಿಯಲು ಹವಣಿಸುತ್ತಿವೆ ಎಂದು ಒಬಾಮಾ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಮೆರಿಕದ ಜೊತೆಗೆ ಇತರ ದೇಶಗಳ ಸಂಬಂಧ ಹಾಳಾಗಲು ಟ್ರಂಪ್ ಕಾರಣ ಎಂದು ಒಬಾಮಾ ಹೇಳಿದ್ದಾರೆ.

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಕೈಬಿಟ್ಟು ಹೋಗುತ್ತಿದೆಯಾ ಯೂರೋಪ್..?

ಹೌದು, ಒಬಾಮಾ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಆಘಾತಕಾರಿ ಸತ್ಯಗಳು ಹೊರಬೀಳುತ್ತವೆ. ಇದುವರೆಗೂ ಯುರೋಪ್ ಅಮೆರಿಕದ ನೆರಳಲ್ಲೇ ಬೆಳೆಯಲು ಇಚ್ಛಿಸುತ್ತಿತ್ತು. ಅದರಲ್ಲೂ 2ನೇ ಮಹಾಯುದ್ಧ ಮುಗಿದ ಬಳಿಕ ಅಮೆರಿಕ ಯುರೋಪ್ ದೇಶಗಳ ಪಾಲಿಗೆ ನಿಜವಾದ ಹೀರೋ ಆಗಿತ್ತು.

ಬ್ರಿಟನ್ ಪತನವಾದ ಬಳಿಕ ಅಮೆರಿಕ ಜಗತ್ತಿನ ಪರ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಿದೆ. ಅದರಲ್ಲೂ ಯುರೋಪ್ ಪಾಲಿಗೆ ವಿಲನ್ ಆಗಿದ್ದ ಹಿಟ್ಲರ್‌ನ ಅಂತ್ಯವೂ ಅಮೆರಿಕದ ಸಹಾಯದಿಂದಲೇ ಆಗಿದ್ದು. ಇಷ್ಟೆಲ್ಲಾ ಇದ್ದರೂ ಕೆಲ ವರ್ಷಗಳಿಂದ ಯುರೋಪ್ ರಾಷ್ಟ್ರಗಳು ಅಮೆರಿಕದ ಸ್ನೇಹ ಮರೆಯುತ್ತಿವೆ. ಅಲ್ಲದೆ ಚೀನಾಗೆ ಹತ್ತಿರವಾಗುತ್ತಿವೆ. ಇದಕ್ಕೆಲ್ಲಾ ತಾಜಾ ಉದಾಹರಣೆ ಚೀನಾ ಯುರೋಪ್ ದೇಶಗಳಲ್ಲಿ ಮಾಡುತ್ತಿರುವ ಹೂಡಿಕೆ ಹಾಗೂ ಸಹಾಯದ ನೆಪ ಹೇಳುತ್ತಾ ಯುರೋಪ್ ರಾಷ್ಟ್ರಗಳಿಗೆ ಹತ್ತಿರವಾಗುತ್ತಿರುವ ಪರಿ ಅಮೆರಿಕನ್ನರಲ್ಲಿ ಆತಂಕ ಮೂಡಿಸುತ್ತಿದೆ.

ಜರ್ಮನಿಯಿಂದ ಹೊರಬಂದ ಅಮೆರಿಕ ಸೇನೆ

ಜರ್ಮನಿಯಿಂದ ಹೊರಬಂದ ಅಮೆರಿಕ ಸೇನೆ

ಟ್ರಂಪ್ ಮೇಲೆ ಅಮೆರಿಕದ ನಾಯಕರು ಕೆಂಡವಾಗಲು ಪ್ರಮುಖ ಕಾರಣ ಈ ಘಟನೆ. ಅಂದಹಾಗೆ ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಒಂದು ಘೋಷಣೆ ಹೊರಡಿಸಿದ್ದರು. ಜರ್ಮನಿಯಲ್ಲಿ ಬೀಡುಬಿಟ್ಟ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಘೋಷಣೆ ಮಾಡಿದ್ದರು.

ಆದರೆ ರಷ್ಯಾ ಜರ್ಮನಿಯ ಮೇಲೆ ಮತ್ತೆ ದಾಳಿ ಮಾಡಿ, ಅದನ್ನು ವಶಕ್ಕೆ ಪಡೆಯಬಹುದು ಎಂಬ ಭಯದಿಂದಲೇ ಅಲ್ಲಿ ಅಮೆರಿಕ ಸೇನೆಯನ್ನು ರಕ್ಷಣೆಗೆ ಇಡಲಾಗಿತ್ತು. ಇದು ಇಂದು, ನಿನ್ನೆಯ ಮಾತಲ್ಲ ಹತ್ತಾರು ವರ್ಷಗಳಿಂದ ಜರ್ಮನಿ ರಕ್ಷಣೆಗಾಗಿಯೇ ಅಮೆರಿಕದ ಸೇನಾ ತುಕಡಿಯನ್ನ ಜರ್ಮನಿಯಲ್ಲಿ ನಿಯೋಜಿಸಲಾಗಿದೆ. ಇದಕ್ಕೆ ಜರ್ಮನಿ ಶುಲ್ಕ ಕಟ್ಟುತ್ತಿತ್ತು. ಸಾವಿರಾರು ಕೋಟಿ ಹಣವನ್ನ ಸೇವೆಗೆ ಪ್ರತಿಯಾಗಿ ನೀಡುತ್ತಿತ್ತು. ಆದರೆ ಕೊರೊನಾ ಕಾರಣ ಜರ್ಮನಿ ಹಳೇ ಬಾಕಿ ನೀಡಲು ಆಗಿರಲಿಲ್ಲ. ಇದನ್ನೇ ದಾಳ ಮಾಡಿಕೊಂಡ ಟ್ರಂಪ್ ಜರ್ಮನಿಯಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಲು ನಿರ್ಧಾರ ಕೈಗೊಂಡಿದ್ದರು. ಇದರ ವಿರುದ್ಧ ಟ್ರಂಪ್‌ಗೆ ಸ್ವಪಕ್ಷೀಯರೇ ಬೆವರಿಳಿಸಿದ್ದರು.

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಅವರು ಪಸ್ತಾಪಿಸಿದ್ದಾರೆ.

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಒಬಾಮಾ ಹೀಗೆ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಇದೇ ರೀತಿ ಟ್ರಂಪ್‌ಗೆ ಬೆವರಿಳಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಬಳಿಕ ಒಬಾಮಾ ಇದೀಗ ಮತ್ತೆ ಟ್ರಂಪ್ ವಿರುದ್ಧ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+