ಸಾವಿನಲ್ಲೂ 'ವಿಶ್ವದ ದೊಡ್ಡಣ್ಣ' ಮುಂದು, ಇಟಲಿ ಹಿಂದಿಕ್ಕಿದ ಅಮೆರಿಕ

ವಾಷಿಂಗ್ಟನ್, ಏಪ್ರಿಲ್ 12: ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಅಮೆರಿಕ ವಿಶ್ವಕ್ಕೆ ದೊಡ್ಡಣ್ಣ ಎಂದು ಗುರುತಿಸಿಕೊಂಡಿದೆ. ಇದೀಗ ಕೊರೊನಾ ಸಾವಿನಲ್ಲೂ ಆ ಮಾತು ಅಮೆರಿಕ ಪಾಲಾಗಿದೆ. ಹೌದು, ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಅತಿ ಹೆಚ್ಚು ಸಾವನ್ನಪ್ಪಿರುವುದು ಅಮೆರಿಕ ದೇಶದಲ್ಲಿ.

ಚೀನಾದಲ್ಲಿ ಸೃಷ್ಟಿಯಾದ ಈ ವೈರಸ್‌ ಆರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚೀನಿಗರ ಪ್ರಾಣವನ್ನು ಕಿತ್ತುಕೊಂಡಿತು. ಚೀನಾ ಇದರಿಂದ ತುಸು ಚೇತರಿಕೆ ಕಂಡ ಬಳಿಕ ಕೊರೊನಾ ಕಣ್ಣ ಬಿದ್ದಿದ್ದು ಇಟಲಿ ದೇಶದ ಮೇಲೆ. ಇಟಲಿಯಲ್ಲಿ ಮಾರಣಹೋಮವೇ ನಡೆದುಹೋಗಿದೆ. ಇಟಲಿ ಜೊತೆ ಸ್ಪೇನ್ ದೇಶವೂ ಸ್ಮಶಾನವಾಗಿದೆ.

ಇದೀಗ, ಇಟಲಿ ಮತ್ತು ಸ್ಪೇನ್‌ ದೇಶಗಳನ್ನು ಹಿಂದಿಕ್ಕಿರುವ ಅಮೆರಿಕಾದಲ್ಲಿ ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುಂದೆ ಓದಿ....

ಅಮೆರಿಕದಲ್ಲಿ 20 ಸಾವಿರ ಸಾವು

ಅಮೆರಿಕದಲ್ಲಿ 20 ಸಾವಿರ ಸಾವು

ಕೊರೊನಾ ವೈರಸ್‌ ಕಾಟಕ್ಕೆ ಅಮೆರಿಕ ತತ್ತರಿಸಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ ಗಮನಿಸಿದರೆ ಅಮೆರಿಕ ಬಹುದೊಡ್ಡ ತಲೆದಂಡ ಅನುಭವಿಸಲಿದೆ ಎಂಬ ಆತಂಕ ಕಾಡುತ್ತಿದೆ. ಹೌದು, ಜಗತ್ತಿನಾದ್ಯಂತ ಒಟ್ಟು 17.8 ಲಕ್ಷ (1,780,440) ಸೋಂಕಿತರು ವರದಿಯಾಗಿದ್ದರೆ, ಅಮೆರಿಕ ಒಂದರಲ್ಲೇ 5.3 ಲಕ್ಷ 532,879) ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 20 ಸಾವಿರ ಜನರು ಮೃತಪಟ್ಟಿದ್ದಾರೆ.

ಇಟಲಿ ಹಿಂದಿಕ್ಕಿದ ಅಮೆರಿಕ

ಇಟಲಿ ಹಿಂದಿಕ್ಕಿದ ಅಮೆರಿಕ

ನಿನ್ನೆಯವರೆಗೂ ಕೊರೊನಾ ಸಾವಿನ ಸಂಖ್ಯೆಯಲ್ಲಿ ಇಟಲಿ ದೇಶ ಮೊದಲಿತ್ತು. ಆದ್ರೀಗ, ಇಟಲಿಯಲ್ಲಿ ಹಿಂದಿಕ್ಕಿರುವ ಅಮೆರಿಕ, ಸಾವಿನಲ್ಲೂ ತಾನೇ ವಿಶ್ವಕ್ಕೆ ದೊಡ್ಡಣ್ಣ ಎಂದು ತೋರಿಸುತ್ತಿದೆ. ಇಟಲಿಯಲ್ಲಿ ಒಟ್ಟು ಸೋಂಕಿತರು 152,271, ಆದರೆ ಸಾವಿನ ಸಂಖ್ಯೆ 19,468 ಆಗಿದೆ. ಈಗ ಅಮೆರಿಕದಲ್ಲಿ 20,577 ಜನರು ಕೊರೊನಾಗೆ ಬಲಿಯಾಗಿದ್ದಾರೆ.

24 ಗಂಟೆಯಲ್ಲಿ ಎಷ್ಟು ಸಾವು

24 ಗಂಟೆಯಲ್ಲಿ ಎಷ್ಟು ಸಾವು

ಅಮೆರಿಕದಲ್ಲಿ ಕಳೆದ ಒಂದು ವಾರದಿಂದ 24 ಗಂಟೆಗೆ 2 ಸಾವಿರ ಜನರು ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲೂ 1830ಕ್ಕೂ ಅಧಿಕ ಜನರು ಮೃತಪಟ್ಟಿರುವ ಬಗ್ಗೆ ವರದಿಗಳು ಬಂದಿದೆ. 30,003 ಹೊಸ ಸೋಂಕಿತರ ಪತ್ತೆಯಾಗಿದ್ದರು ಎನ್ನಲಾಗಿದೆ.

ನ್ಯೂಯಾರ್ಕ್ ಕಥೆ ಏನು?

ನ್ಯೂಯಾರ್ಕ್ ಕಥೆ ಏನು?

ಅಮೆರಿಕದಲ್ಲಿ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನ್ಯೂಯಾರ್ಕ್ ನಗರ. ಈ ಒಂದೇ ನಗರದಲ್ಲಿ 1,81,144 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8,627 ಜನರು ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ಬಿಟ್ಟರೆ ನ್ಯೂ ಜೆರ್ಸಿಯಲ್ಲಿ 2183 ಜನರು ಸಾನ್ನಪ್ಪಿದ್ದಾರೆ.

ವಿಶ್ವದ ಅಂಕಿ ಅಂಶ ಏನಿದೆ?

ವಿಶ್ವದ ಅಂಕಿ ಅಂಶ ಏನಿದೆ?

ಜಗತ್ತಿನಾದ್ಯಂತ ಒಟ್ಟು 1,780,440 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 108,834 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 404,393 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಅಮೆರಿಕದಲ್ಲಿ 20,577 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿ ದೇಶದಲ್ಲಿ 19,468 ಜನರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+