ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ
ವಾಷಿಂಗ್ಟನ್, ನವೆಂಬರ್ 5: ಇರಾನ್ ಮೇಲಿನ ನಿರ್ಬಂಧ ಜಾರಿಯಾದ ಬಳಿಕವೂ ಅಲ್ಲಿಂದ ತೈಲ ಖರೀದಿ ಮುಂದುವರಿಸುವುದಕ್ಕೆ ಭಾರತ ಸೇರಿಂದತೆ ಎಂಟು ದೇಶಗಳಿಗೆ ಅವಕಾಶ ನೀಡಿರುವುದಾಗಿ ಅಮೆರಿಕ ಅಧಿಕೃತವಾಗಿ ತಿಳಿಸಿದೆ.
ಭಾರತ, ಚೀನಾ, ಜಪಾನ್, ಇಟಲಿ, ಗ್ರೀಸ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಟರ್ಕಿಗಳಿಗೆ ತೈಲ ಖರೀದಿಯ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ತಿಳಿಸಿದ್ದಾರೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ವಿಶೇಷ ಸಂದರ್ಭ ಮತ್ತು ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗದಂತೆ ತಡೆಯಲು ನಿಷೇಧದದಿಂದ ಈ ಎಂಟು ದೇಶಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.
We have decided to issue temporary allotments to a handful of countries due to specific circumstances. The US will be granting these exemptions to China, India, Italy, Greece, Japan, South Korea, Taiwan & Turkey: Mike Pompeo, US Secretary of State pic.twitter.com/SFYYQqHLRZ
— ANI (@ANI) 5 November 2018
ಮಧ್ಯಪ್ರಾಚ್ಯ ಮತ್ತು ಜಗತ್ತಿನ ಇತರೆಡೆ ನಡೆಯುತ್ತಿರುವ ಹಿಂಸಾಚಾರದ ಚಟುವಟಿಕೆಗಳಿಗೆ ಪ್ರಚೋದನೆ ನೀಡಲು ಅನುದಾನ ನೀಡುತ್ತಿರುವ ಇರಾನ್ ಆಡಳಿತಕ್ಕೆ ಕಡಿವಾಣ ಹಾಕುವುದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದ್ದಾರೆ.












Click it and Unblock the Notifications