ಅಮೆರಿಕದಲ್ಲಿ ವೀಸಾ ಹಗರಣ: ಎಂಟು ಭಾರತೀಯರ ಬಂಧನ, ನೂರಾರು ಮಂದಿಗೆ ಸಂಕಷ್ಟ

ಡೆಟ್ರಾಯಿಟ್, ಜನವರಿ 31: ವಿದೇಶಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡುತ್ತಿದ್ದ ವಿಶ್ವವಿದ್ಯಾಲಯದ ಅತಿ ದೊಡ್ಡ ಹಗರಣವೊಂದು ಅಮೆರಿಕದ ತನಿಖಾ ಸಂಸ್ಥೆ ಬಯಲು ಮಾಡಿದ್ದು, ನೂರಾರು ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಒಂದೋ ಕ್ರಿಮಿನಲ್ ಪ್ರಕರಣ ದಾಖಲಾಗಬಹುದು. ಅಥವಾ ಗಡೀಪಾರು ಮಾಡುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ ಎಂಟು ಭಾರತೀಯರನ್ನು ಅಮೆರಿಕ ಕಾನೂನು ಜಾರಿ ಸಂಸ್ಥೆ ಬಂಧಿಸಿದ್ದು, ಎರಡು ದಿನಗಳಿಂದ ಹಲವು ಕಡೆ ದಾಳಿ ನಡೆಸಲಾಗಿದೆ ಎಂದು ಡೆಟ್ರಾಯಿಟ್ ನ್ಯೂಸ್ ಎಂಬ ದೈನಿಕ ವರದಿ ಮಾಡಿದೆ.

ಅರ್ಹತೆಯೇ ಇಲ್ಲದ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲೇ ಉಳಿಯಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ಎಂಟು ಮಂದಿಯು ವಿದ್ಯಾರ್ಥಿ ವೀಸಾದ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ನಕಲಿ ದಾಖಲಾತಿಗಳನ್ನು ಬಳಸುತ್ತಿದ್ದರು ಎಂದು ವಲಸೆ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

8 Indians caught in Visa scam in US

ಮಿಸ್ಸೌರಿ, ನ್ಯೂಜೆರ್ಸಿ, ನ್ಯೂಯಾರ್ಕ್, ಜಾರ್ಜಿಯಾ, ಒಹಿಯೋ, ಟೆಕ್ಸಾಸ್ ನಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಭರತ್ ಕಾಕಿರೆಡ್ಡಿ, ಅಸ್ವಂತ್ ನೂನೆ, ಸುರೇಶ್ ರೆಡ್ಡಿ ಖಂಡಾಲ, ಫಣಿದೀಪ್ ಕರಂತಿ, ಪ್ರೇಮ್ ಕುಮ ರಾಮ್ ಪೀಸಾ, ಸಂತೋಷ್ ರೆಡ್ಡಿ ಸಾಮ, ಅವಿನಾಶ್ ತಕ್ಕಲ್ಲಪಲ್ಲಿ, ನವೀನ್ ಪ್ರತಿಪತಿ ಬಂಧಿತರು.

ಫಾರ್ಮಿಂಗ್ ಟನ್ ಹೆಸರಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಶಿಕ್ಷಣ ಸಂಸ್ಥೆ ಹೆಸರು ಬಳಸಿದ್ದಾರೆ. ಅಲ್ಲಿ ಯಾವುದೇ ತರಗತಿಯೂ ಇಲ್ಲ, ಉಪನ್ಯಾಸಕ ಸಿಬ್ಬಂದಿಯೂ ಇಲ್ಲ. ಬಹಳ ಮಂದಿ ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾ ಪಡೆಯಲು ಈ ಮಧ್ಯವರ್ತಿಗಳ ಜಾಲಕ್ಕೆ ಬಿದ್ದಿದ್ದಾರೆ. ಹಾಗೆ ಮೋಸ ಹೋದವರ ಪೈಕಿ ಹೆಚ್ಚಿನ ಸಂಖ್ಯೆಯವರು ಭಾರತೀಯ ವಿದ್ಯಾರ್ಥಿಗಳು. ಇನ್ನು ಹೀಗೆ ನೋಂದಣಿ ಮಾಡಿಕೊಂಡ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+