ಅಮೆರಿಕದ ಮನೆಯಲ್ಲಿ ಗುಂಡಿನ ದಾಳಿ: ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ
ವಾಷಿಂಗ್ಟನ್, ನವೆಂಬರ್ 23: ಅಮೆರಿಕದ ಈಶಾನ್ಯ ಇಂಡಿಯಾನಾದ ಮನೆಯೊಂದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಈ ದಾಳಿ ನಡೆದಿದ್ದು, ಘಟನೆಯಲ್ಲಿ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಫೋರ್ಟ್ ವೈಯ್ನ್‌ನ ದಕ್ಷಿಣ ಭಾಗದಲ್ಲಿರುವ ಮನೆಯಿಂದ ಪೊಲೀಸರಿಗೆ ರಾತ್ರಿ 10.30ರ ಸಮಯಕ್ಕೆ ಕರೆ ಬಂದಿತ್ತು. ಕೂಡಲೇ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಒಬ್ಬರ ಮೃತದೇಹ ಮನೆಯ ಹೊರಗೆ ಕಾಣಿಸಿದರೆ ಉಳಿದ ನಾಲ್ವರು ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಾಯಗೊಂಡ ಇನ್ನಿಬ್ಬರು ಪುರುಷರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.
ಗುಂಡಿನ ದಾಳಿಗೆ ಒಳಗಾದವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಯಾವುದೇ ಶಂಕಿತರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಮನೆಯ ಸುತ್ತಲೂ ಜನರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಆ ಕುಟುಂಬದವರ ಸಂಬಂಧಿಕರು ಮತ್ತು ಸ್ನೇಹಿತರು ಅಲ್ಲಿ ನೆರೆದಿದ್ದಾರೆ.












Click it and Unblock the Notifications