ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು, 196 ಕೋಟಿ ಪರಿಹಾರ ಘೋಷಣೆ

|
Google Oneindia Kannada News

ಅಮೆರಿಕದಲ್ಲಿ ತೀವ್ರ ಸಂಚಲನ ಸೃಷ್ಟಿಮಾಡಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಮೆರಿಕ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದ ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ ₹196 ಕೋಟಿ ಅಂದರೆ 27 ಮಿಲಿಯನ್ ಡಾಲರ್‌ ಪರಿಹಾರಕ್ಕೆ ಮಿನಿಯಾಪೊಲಿಸ್‌ನ ನಗರ ಕೌನ್ಸಿಲ್‌ ಒಪ್ಪಿಗೆ ಸೂಚಿಸಿದೆ.

2020ರ ಮೇ 25ರಂದು ಫ್ಲಾಯ್ಡ್‌ ಸಾವಿಗೆ ಮೊದಲು ಬಿಳಿಯ ಪೊಲೀಸ್‌ ಅಧಿಕಾರಿ ಡೆರೆಕ್‌ 9 ನಿಮಿಷಗಳ ಕಾಲ ಮೊಣಕಾಲಿನಿಂದ ಕತ್ತನ್ನು ಒತ್ತಿ ಹಿಡಿದಿದ್ದರು. ಜಾರ್ಜ್ ಫ್ಲಾಯ್ಡ್‌ ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಹೇಳಿದರೂ ಡೆರೆಕ್‌ ಎಂಬ ಜನಾಂಗೀಯ ವಾದಿ ಫ್ಲಾಯ್ಡ್‌ಗೆ ಉಸಿರಾಡಲು ಕೂಡ ಅವಕಾಶ ನೀಡಿರಲಿಲ್ಲ. ನೋಡ ನೋಡುತ್ತಿದ್ದಂತೆ ಫ್ಲಾಯ್ಡ್ ಉಸಿರು ಕಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಅಮೇರಿಕಾದಲ್ಲಿ 1400 ಮಂದಿ ಬಂಧನ.!ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಅಮೇರಿಕಾದಲ್ಲಿ 1400 ಮಂದಿ ಬಂಧನ.!

ಈ ಘಟನೆ ಬಳಿಕ ಇಡೀ ಅಮೆರಿಕ ಅಕ್ಷರಶಃ ರಣರಂಗವಾಗಿತ್ತು. ಜನಾಂಗೀಯ ಸಂಘರ್ಷ ಮೊಳಗಿತ್ತು. ಜನ ಉಗ್ರ ಹೋರಾಟಕ್ಕೆ ಧುಮುಕಿದ್ದರು. ಜಗತ್ತಿನಾದ್ಯಂತ ಗಮನ ಸೆಳೆದಿದ್ದ ಫ್ಲಾಯ್ಡ್ ಸಾವು ಪ್ರಕರಣದಲ್ಲಿ ಬೃಹತ್ ಮೊತ್ತದ ಪರಿಹಾರ ನೀಡಲು ಮಿನಿಯಾಪೊಲಿಸ್‌ನ ನಗರ ಕೌನ್ಸಿಲ್‌ ಒಪ್ಪಿಗೆ ಸೂಚಿಸಿದೆ.

 ಹಿಂಸೆ ಭಯದಲ್ಲೇ ಪರಿಹಾರ..!

ಹಿಂಸೆ ಭಯದಲ್ಲೇ ಪರಿಹಾರ..!

ಫ್ಲಾಯ್ಡ್ ಹತ್ಯೆ ನಂತರ ಅಮೆರಿಕದಲ್ಲಿ ಸಾವಿರಾರು ಕೋಟಿ ನಷ್ಟವಾಗಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಮೊತ್ತದ ಪರಿಹಾರ ಘೋಷಿಸಿದೆ ಮಿನಿಯಾಪೊಲಿಸ್‌ನ ನಗರ ಕೌನ್ಸಿಲ್‌. ಕೋರ್ಟ್ ತೀರ್ಪಿನಲ್ಲೂ ಪರಿಹಾರ ಸಿಗುವ ಸಾಧ್ಯತೆ ಇತ್ತು. ಆದರೆ ಪ್ರತಿಭಟನೆಗಳು ಭುಗಿಲೇಳುವ ಆತಂಕದಲ್ಲಿ ಈಗಲೇ ಪರಿಹಾರ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿ. ಈಗಾಗಲೇ ಫ್ಲಾಯ್ಡ್ ಸಾವು ಸಂಬಂಧ ಕೆಲ ಪೊಲೀಸ್ ಅಧಿಕಾರಿಗಳನ್ನ ಮನೆಗೆ ಕಳುಹಿಸಲಾಗಿದೆ. ಹಾಗೇ ಪ್ರಕರಣದ ರೂವಾರಿ ಡೆರೆಕ್ ಕಂಬಿ ಎಣಿಸುತ್ತಿದ್ದಾನೆ. ಇನ್ನೇನು ಡೆರೆಕ್ ವಿರುದ್ಧ ತೀರ್ಪು ಬರುವ ನಿರೀಕ್ಷೆ ಇದೆ.

ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: 196.2 ಕೋಟಿ ಪರಿಹಾರಕ್ಕೆ ಒಪ್ಪಿಗೆಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: 196.2 ಕೋಟಿ ಪರಿಹಾರಕ್ಕೆ ಒಪ್ಪಿಗೆ

ಇತಿಹಾಸದಲ್ಲೇ ದೊಡ್ಡ ಪರಿಹಾರ..!

ಇತಿಹಾಸದಲ್ಲೇ ದೊಡ್ಡ ಪರಿಹಾರ..!

ಜಾರ್ಜ್ ಫ್ಲಾಯ್ಡ್ ಪ್ರಕರಣ ಟ್ರಂಪ್ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು. ಮತ್ತೊಂದ್ಕಡೆ ಈಗ ಬೈಡನ್ ಆಡಳಿತದ ಸಮಯದಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಿದೆ. ಫ್ಲಾಯ್ಡ್ ಕೇಸ್‌ನಲ್ಲಿ ನೀಡಿರುವ ದೊಡ್ಡ ಮೊತ್ತದ ಪರಿಹಾರ, ವಿಚಾರಣೆ ಪೂರ್ವದಲ್ಲೇ ಇತ್ಯರ್ಥವಾದ ಅತಿ ದೊಡ್ಡ ಪರಿಹಾರ ಎನ್ನಲಾಗಿದೆ.

ಅಟಾರ್ನಿ ಬೆನ್‌ ಕ್ರಂಪ್‌ ಇದರ ಮಾಹಿತಿ ನೀಡಿದ್ದಾರೆ. ಮತ್ತೊಂದ್ಕಡೆ ಫ್ಲಾಯ್ಡ್‌ ಹತ್ಯೆ ಸಂಬಂಧ ಪೊಲೀಸ್‌ ಅಧಿಕಾರಿಗಳ ವಿಚಾರಣೆ ಮುಂದುವರಿಯಲಿದ್ದು, ಪ್ರಕರಣ ಇತ್ಯರ್ಥವಾಗುವವರೆಗೂ ಅಮೆರಿಕದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇರಲಿದೆ. ಹಿಂಸೆ ಭುಗಿಲೇಳದಂತೆ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಕೋರ್ಟ್ ಸುತ್ತ ಸಿಮೆಂಟ್ ಗೋಡೆ..!

ಕೋರ್ಟ್ ಸುತ್ತ ಸಿಮೆಂಟ್ ಗೋಡೆ..!

ಫ್ಲಾಯ್ಡ್ ಕತ್ತಿನ ಮೇಲೆ ಕಾಲಿಟ್ಟು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಡೆರೆಕ್ ಚೌವಿನ್‌ ಪರವಾಗಿ ಈಗ ಹೋರಾಟ ಭುಗಿಲೇಳುವ ಸಾಧ್ಯತೆ ಇದೆ. ಡೆರೆಕ್ ಚೌವಿನ್‌ಗೆ ಶಿಕ್ಷೆಯಾದರೆ ಪರಿಸ್ಥಿತಿ ಮತ್ತೆ ಕೈಮೀರಲಿದೆ. ಈ ಕಾರಣಕ್ಕೆ ಇದೀಗ ವಿಚಾರಣೆ ನಡೆಯುತ್ತಿರುವ ಕೋರ್ಟ್ ಸುತ್ತ ಕಾಂಕ್ರಿಟ್‌ ಗೋಡೆ ಹಾಗೂ ಬೇಲಿ ನಿರ್ಮಾಣ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಪಡೆಯನ್ನು ಕೂಡ ನಿಯೋಜನೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬ್ಲೇಕ್‌ ಎಂಬ ವ್ಯಕ್ತಿ ಮೇಲೆಯೂ ಪೊಲೀಸರು ಸುಖಾಸುಮ್ಮನೆ ಫೈರಿಂಗ್ ಮಾಡಿದ್ದ ಆರೋಪವಿತ್ತು. ಈ ಘಟನೆ ಮಾಸುವ ಮೊದಲೇ ಫ್ಲಾಯ್ಡ್ ತೀರ್ಪಿಗೆ ಕೌಂಟ್‌ಡೌನ್ ಶುರುವಾಗಿದೆ.

 ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಮೊದಲೇ ಕೊರೊನಾ ಕುಲುಮೆಯಲ್ಲಿ ಬೆಂದಿರುವ ವಿಶ್ವದ ದೊಡ್ಡಣ್ಣನಿಗೆ, ಜನಾಂಗೀಯ ಸಂಘರ್ಷ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟ್ರಂಪ್ ಆಡಳಿತ ಜನಾಂಗೀಯ ಸಂಘರ್ಷ ಹಾಗೂ ಗಲಭೆ ನಿಭಾಯಿಸುತ್ತಿದ್ದ ರೀತಿ ಬೆಂಕಿಗೆ ತುಪ್ಪ ಸುರಿದಿತ್ತು. ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ನಡೆದಿಲ್ಲವಾದರೂ ಮತ್ತೆ ಕಿಚ್ಚು ಹೊತ್ತಬಹುದು. ಒಂದು ಕಡೆ ಆರ್ಥಿಕತೆ ಕುಸಿತ, ಮತ್ತೊಂದು ಕಡೆ ಪ್ರಾಕೃತಿಕ ವಿಕೋಪಗಳಿಂದ ಅಮೆರಿಕ ನಲುಗಿದೆ. ಇದೇ ಹೊತ್ತಲ್ಲಿ ಜನಾಂಗೀಯ ಸಂಘರ್ಷ ಕೂಡ ಅಮೆರಿಕದ ಜನರನ್ನು ನಲುಗುವಂತೆ ಮಾಡಿದೆ. ಜಾರ್ಜ್ ಫ್ಲಾಯ್ಡ್ ಸಾವು, ಬ್ಲೇಕ್ ಮೇಲೆ ಫೈರಿಂಗ್ ಹೀಗೆ ಆಫ್ರಿಕನ್-ಅಮೆರಿಕ್ನನರ ಮೇಲೆ ಸಾಲು ಸಾಲು ದಾಳಿಗಳು ನಡೆಯುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ.

English summary
Minneapolis city council agreed to give 27-million-dollar settlement in George Floyd's death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X