ಮಲಮಗಳನ್ನು ಕೊಂದಿದ್ದ ಭಾರತೀಯ ಮಹಿಳೆಗೆ 22 ವರ್ಷದ ಜೈಲು ಶಿಕ್ಷೆ
ನ್ಯೂಯಾರ್ಕ್, ಜೂನ್ 4: ಒಂಬತ್ತು ವರ್ಷದ ಮಲಮಗಳನ್ನು ಕೊಂದ ಭಾರತೀಯ ಮೂಲದ ಮಹಿಳೆಗೆ ಅಮೆರಿಕದಲ್ಲಿ ಇಪ್ಪತ್ತೆರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಹತ್ಯೆ 'ಕಲ್ಪನೆಗೂ ನಿಲುಕದ್ದು' ಎಂದು ಕೋರ್ಟ್ ಹೇಳಿದೆ. ನ್ಯೂಯಾರ್ಕ್ ಕ್ವೀನ್ಸ್ ನ ಐವತ್ತೈದು ವರ್ಷದ ಶಾಮ್ ದಾಯ್ ಅರ್ಜುನ್ ಶಿಕ್ಷೆಗೊಳಗಾದ ಮಹಿಳೆ.
ಕ್ವೀನ್ಸ್ ನ ಸುಪ್ರೀಂ ಕೋರ್ಟ್ ನಲ್ಲಿ ಆಕೆಯನ್ನು ದೋಷಿ ಎಂದು ಕಳೆದ ತಿಂಗಳು ಘೋಷಿಸಲಾಗಿತ್ತು. ಸೋಮವಾರದಂದು ಆಕೆಗೆ ಇಪ್ಪತ್ತೆರಡು ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿದೆ. ಅಪರಾಧಿಯು ಈ ಪ್ರಕರಣದಲ್ಲಿ ಕಥೆಗಳಲ್ಲಿ ಬರುವ ಕ್ರೂರ ಮಲತಾಯಿಯ ಪಾತ್ರಗಳಿಗಿಂತ ಆಚೆಗೆ ಹೋಗಿದ್ದು, ಮಲಮಗಳ ಪುಟ್ಟ ಕುತ್ತಿಗೆಯನ್ನು ಹಿಸುಕಿ ಪ್ರಾಣ ತೆಗೆದಿದ್ದಾಳೆ ಎಂದು ಕೋರ್ಟ್ ನಲ್ಲಿ ಹೇಳಲಾಗಿದೆ.

ಸಂತ್ರಸ್ತೆಯು ಒಂಬತ್ತು ವರ್ಷದ ಅಮಾಯಕಳು. ಅಂಥ ಬಾಲಕಿಯನ್ನು ಕೊಂದ ಈಕೆ ಮತ್ತೆ ಸ್ವಾತಂತ್ರ್ಯ ಕಾಣದಂಥ ಶಿಕ್ಷೆಯನ್ನು ಕೋರ್ಟ್ ವಿಧಿಸುತ್ತದೆ. ಈ ಪ್ರಕರಣದಲ್ಲಿ ಖಾತ್ರಿಗಿಂತ ಹೆಚ್ಚಿನ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಾಮ್ ದಾಯ್ ಅರ್ಜುನ್ ತಮ್ಮ ಮಲಮಗಳನ್ನು ಕೊಂದಿದ್ದಾಗಿ ಸಾಕ್ಷ್ಯ ನುಡಿದಿದ್ದರು.












Click it and Unblock the Notifications