ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು

ಅಮೆರಿಕದಲ್ಲಿ ಅಂಚೆ ಮತದಾನದ ಬಗ್ಗೆ ನೂರಾರು ಪ್ರಶ್ನೆಗಳು ಎದ್ದಿರುವಾಗಲೇ, 5 ಮಿಲಿಯನ್‌ಗೂ ಹೆಚ್ಚು ಅಮೆರಿಕನ್ನರು ಅವಧಿಪೂರ್ವ ಮತದಾನ ಮಾಡಿದ್ದಾರೆ. ಕೊರೊನಾ ಮಹಾಮಾರಿ ಅಮೆರಿಕದಲ್ಲಿ ಅಟ್ಟಹಾಸ ಮೆರೆಯುತ್ತಿದೆ. 81 ಲಕ್ಷ ಜನರಿಗೆ ಡೆಡ್ಲಿ ಕೊರೊನಾ ಕನ್ಫರ್ಮ್ ಆಗಿದ್ದು, 2 ಲಕ್ಷ 21 ಸಾವಿರ ಅಮೆರಿಕನ್ನರು ಬಲಿಯಾಗಿದ್ದಾರೆ. ಪರಿಸ್ಥಿತಿ ಇಷ್ಟು ಸಂದಿಗ್ಧವಾಗಿದ್ದರೂ ಮತದಾರ ಪ್ರಭು ನಿರಾಸನಾಗಿಲ್ಲ. ಅಮೆರಿಕದಲ್ಲಿ ಈ ಬಾರಿ ಕೇವಲ ಚುನಾವಣೆ ನಡೆಯುತ್ತಿಲ್ಲ, ಮಾಡು ಇಲ್ಲವೆ ಮಡಿ ಹೋರಾಟ ನಡೆಯುತ್ತಿದೆ.

ಒಂದೆಡೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದು ಬದಿಯಲ್ಲಿ ಜೋ ಬಿಡೆನ್ ಅಧ್ಯಕ್ಷ ಪದವಿಗಾಗಿ ಕಾದಾಡುತ್ತಿದ್ದಾರೆ. ನವೆಂಬರ್ 3ರಂದು ಸಾರ್ವತ್ರಿಕ ಮದಾನ ನಡೆಯಲಿದೆ. ಆದರೆ 'ಕೊರೊನಾ' ಕಾರಣ ಅಂಚೆ ಮತದಾನದ ಮೂಲಕ ಈ ಬಾರಿ ಚುನಾವಣೆ ನಡೆಯಲಿದೆ. ಕೆಲವು ರಾಜ್ಯಗಳಲ್ಲಿ ನವೆಂಬರ್ 3ರಂದು ಉಂಟಾಗಬಹುದಾದ ಜನಸಂದಣಿ ತಪ್ಪಿಸಲು ಅವಧಿಪೂರ್ವ ಅಂಚೆ ಮತದಾನಕ್ಕೆ ಒತ್ತು ನೀಡಲಾಗಿದೆ.

ಪರಿಣಾಮ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮತದಾರರು ವೋಟ್ ಹಾಕಿದ್ದು, ನವೆಂಬರ್ 3ಕ್ಕೂ ಮೊದಲು 10 ಮಿಲಿಯನ್ ಅಂದರೆ 10 ಲಕ್ಷ ಅಮೆರಿಕನ್ನರು ಅವಧಿಪೂರ್ವ ಮತದಾನ ಮಾಡುವ ಸಾಧ್ಯತೆ ಇದೆ.

ಅಂಚೆ ಮತದಾನಕ್ಕೆ ಬಹುದೊಡ್ಡ ಇತಿಹಾಸವಿದೆ..!

ಅಂಚೆ ಮತದಾನಕ್ಕೆ ಬಹುದೊಡ್ಡ ಇತಿಹಾಸವಿದೆ..!

ಭಾರತದಲ್ಲೂ ಅಂಚೆ ಮತದಾನ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಚೆ ಮತದಾನ ವಿಶಿಷ್ಟ ಸ್ಥಾನ ಪಡೆದಿದೆ. ಏಕೆಂದರೆ ಯಾವುದೋ ಕೆಲಸದ ನಿಮಿತ್ತ, ಇನ್ಯಾವುದೋ ಊರಲ್ಲಿ ಇರುವವರು ಇಲ್ಲ ಸಕಾಲಕ್ಕೆ ಸ್ವಕ್ಷೇತ್ರಕ್ಕೆ ಬಂದು ಮತಹಾಕಲು ಸಾಧ್ಯವಾಗದಿರುವ ಸರ್ಕಾರಿ ನೌಕರರು (or) ಸೈನಿಕರಿಗೆ ಅಂಚೆ ಮತದಾನ ಸಹಕಾರಿ. ಆದರೆ ಟ್ರಂಪ್ ಇದನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು, ಅಂಚೆ ಮತದಾನ ಪದ್ಧತಿಯ ಕುರಿತು ನೂರಾರು ಆರೋಪ ಮಾಡಿದ್ದರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷದವರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಕೆಲ ದಿನಗಳ ಹಿಂದೆ ಟ್ರಂಪ್ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿ ಮಾಡಿತ್ತು. ನವೆಂಬರ್ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಗ್ಯಾರಂಟಿ ಕೊಡಲ್ಲ ಎಂದಿದ್ದ ಟ್ರಂಪ್ ವಿರುದ್ಧ ಅಮೆರಿಕದ ರಾಜಕೀಯ ನಾಯಕರು ಪಕ್ಷಾತೀತವಾಗಿ ತಿರುಗಿಬಿದ್ದಿದ್ದರು. ನೇರವಾಗಿ ಅಂಚೆ ಮತದಾನವನ್ನೇ ಟಾರ್ಗೆಟ್ ಮಾಡಿದ್ದ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರು. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದಿದ್ದ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಊಹಿಸಿದ್ದರು.

ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದ ಸ್ವಪಕ್ಷೀಯರು..!

ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದ ಸ್ವಪಕ್ಷೀಯರು..!

ಅಮೆರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ದೇಶ. ಅಲ್ಲಿ ಪಕ್ಷಕ್ಕಿಂತ ಪ್ರಜಾಪ್ರಭುತ್ವದ ಮೌಲ್ಯ, ಸಿದ್ಧಾಂತ ಮುಖ್ಯ. ಹೀಗಾಗಿ ಟ್ರಂಪ್ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಎಂದು ಸ್ವತಃ ಟ್ರಂಪ್ ಪಕ್ಷದವರೇ ಟೀಕಿಸಿದ್ದರು. ರಿಪಬ್ಲಿಕನ್ ಪಕ್ಷದ ಮಿಟ್ ರೊಮ್ನಿ ಟ್ರಂಪ್‌ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಟ್ರಂಪ್‌ ಹೇಳಿಕೆ ಊಹಿಸಲು ಕೂಡ ಸಾಧ್ಯವಿಲ್ಲ, ಇದನ್ನ ಒಪ್ಪಲು ಆಗಲ್ಲ ಎಂದಿದ್ದಾರೆ. ಶಾಂತಿಯುತ ಅಧಿಕಾರ ಹಸ್ತಾಂತರ ಪ್ರಜಾಪ್ರಭುತ್ವದ ಮೂಲ ತತ್ವ ಎಂದು ಮಿಟ್ ರೊಮ್ನಿ ಟ್ರಂಪ್‌ಗೆ ಡೆಮಾಕ್ರಸಿ ಪಾಠ ಮಾಡಿದ್ದರು.

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

ಟ್ರಂಪ್ ಹೇಳುವ ಪ್ರಕಾರ ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ನಡುವೆಯೂ ಡೆಮಾಕ್ರಟಿಕ್ ಲೀಡರ್ಸ್ ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಮಾತ್ರ ಅಂಚೆ ಮತದಾನ ಬಿಲ್‌ಕುಲ್ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದಾರೆ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ.

ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ. ಹೀಗಾಗಿಯೇ ಟ್ರಂಪ್ ಅಂಚೆ ಮತದಾನದ ವಿರುದ್ಧ ಮಾತನಾಡುವ ಮೂಲಕ ಹೊಸ ಕ್ಯಾತೆ ತೆಗೆದಿದ್ದರು ಎಂಬುದು ವಿಪಕ್ಷ ನಾಯಕರ ಆರೋಪವಾಗಿತ್ತು. ಈ ವಾದ, ವಿವಾದ ಹಾಗೂ ಬೇಕು-ಬೇಡಗಳ ನಡುವೆಯೂ ಅಂಚೆ ಮತದಾನ ಮುನ್ನಡೆದಿದ್ದು, ಅಮೆರಿಕ ಅಧ್ಯಕ್ಷರ ಆಯ್ಕೆಗೆ ಕೌಂಟ್‌ಡೌನ್ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+