ವಿಜಯಪುರ-ಬೆಂಗಳೂರು ರೈಲಿಗೆ ಚಾಲನೆ, ನಿಲ್ದಾಣಗಳು

ವಿಜಯಪುರ, ಅಕ್ಟೋಬರ್ 22 : ವಿಜಯಪುರ-ಯಶವಂತಪುರ ನಡುವಿನ ಎಕ್ಸ್‌ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಡಿಸೆಂಬರ್ 21ರ ತನಕ ಪ್ರಾಯೋಗಿಕವಾಗಿ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ವಿಜಯಪುರ ರೈಲು ನಿಲ್ದಾಣದಲ್ಲಿ ಮಂಗಳವಾರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಇದರಿಂದಾಗಿ ಬಹಳ ದಿನಗಳ ಬೇಡಿಕೆ ಈಡೇರಿದಂತಾಗಿದೆ.

Recommended Video

      Lok Sabha Elections 2019: 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ಜಿದ್ದಾಜಿದ್ದಿನ ಕಣವಾದ 6 ಕ್ಷೇತ್ರಗಳು

      ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಸಂಚಾರ ನಡೆಸಲಿದೆ. ಡಿಸೆಂಬರ್ 21ರ ತನಕ ರೈಲು ಸಂಚಾರ ನಡೆಸಲಿದ್ದು, ಬಳಿಕ ಜನರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

      Vijayapura Yeshwantpur Train Service Launched

      ವೇಳಾಪಟ್ಟಿ : ವಿಜಯಪುರ ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಪ್ರತಿದಿನ ರೈಲು ಸಂಚಾರನಡೆಸಲಿದೆ. ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕಡೂರು, ಅರಸೀಕೆರೆ, ದಾವಣಗರೆ, ತುಮಕೂರು ನಿಲ್ದಾಣದಲ್ಲಿ ನಿಲ್ಲಲಿದೆ.

      ನಿಲ್ದಾಣಗಳು : ವಿಜಯಪುರ ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಪ್ರತಿದಿನ ರೈಲು ಸಂಚಾರನಡೆಸಲಿದೆ. ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕಡೂರು, ಅರಸೀಕೆರೆ, ದಾವಣಗರೆ, ತುಮಕೂರು ನಿಲ್ದಾಣದಲ್ಲಿ ನಿಲ್ಲಲಿದೆ.

      ವೇಳಾಪಟ್ಟಿ : ವಿಜಯಪುರದಿಂದ ಪ್ರತಿನಿತ್ಯ ಮಧ್ಯಾಹ್ನ 1 ಗಂಟೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ 4.15ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.45ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 8.30ಕ್ಕೆ ವಿಜಯಪುರಕ್ಕೆ ಆಗಮಿಸಲಿದೆ.

      ಎಕ್ಸ್‌ಪ್ರೆಸ್ ರೈಲಿನಲ್ಲಿ 2 ಟೈರ್ ಹವಾನಿಯಂತ್ರಿತ ಬೋಗಿ 1, 3 ಟೈರ್ ಹವಾನಿಯಂತ್ರಿತ ಬೋಗಿ 1, ಸ್ಲೀಪರ್ ಕ್ಲಾಸ್ 8, 2 ಸಾಮಾನ್ಯ ದರ್ಜೆ ಬೋಗಿಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+