ಜನವರಿ 9, 10ರಂದು ವಿಜಯಪುರ- ಮಂಗಳೂರು ರೈಲು ಸಂಚಾರ ರದ್ದು, ಏಕೆ?
ಮಂಗಳೂರು, ಜನವರಿ, 08: ದೇವದುರ್ಗ-ಹಾವೇರಿ ಸೆಕ್ಷನ್‌ನಲ್ಲಿ ಹಳಿ ದ್ವಿಗುಣ ಸಂಬಂಧಿಸಿದಂತೆ ಕಾಮಗಾರಿ ನಡೆಯುತ್ತಿದೆ. ಎಂಜಿನಿಯರಿಂಗ್ ಕೆಲಸಗಳಿಂದಾಗಿ ಜನವರಿ 9 ಮತ್ತು 10ರಮದು ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಂಬರ್ 07377 ವಿಜಯಪುರ- ಮಂಗಳೂರು ಜಂಕ್ಷನ್ ದಿನಂಪ್ರತಿ ರೈಲು ಜನವರಿ 9, 10ರಂದು ಎರಡು ದಿನ ರದ್ದಾಗಲಿದೆ. ಹಾಗೂ ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ರೈಲು ಜನವರಿ 10, 11ರಂದು ರದ್ದುಗೊಳ್ಳಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಮಂಗಳೂರಿನಿಂದ ಮಡಗಾಂವ್‌ಗೆ ರೈಲು ಸೇವೆ
ಹಾಗೆಯೇ ಇತ್ತೀಚೆಗಷ್ಟೇ ಮಂಗಳೂರು ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿತ್ತು. ರೈಲು ಸಂಖ್ಯೆ 10107 / 10108 ಮಡಗಾಂವ್ ಜಂಕ್ಷನ್ ರೈಲು ಸೇವೆಗಳನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿತ್ತು. ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ಜಂಕ್ಷನ್‌ವರೆಗೆ ರೈಲು ಸೇವೆ ಪುನಾರಂಭಗೊಳ್ಳಲಿದ್ದು, ಕೆಳಗೆ ನೀಡಿರುವ ವಿವರಗಳ ಪ್ರಕಾರ ಎಕ್ಸ್‌ಪ್ರೆಸ್ ವಾರದ 06 ದಿನಗಳಲ್ಲಿ ಭಾನುವಾರ ಹೊರತುಪಡಿಸಿ ಸಂಚಾರ ಮಾಡಲಿದೆ. ರೈಲು ಸಂಖ್ಯೆ. 10107 / 10108 ಮಡಗಾಂವ್ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್, ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಾರಕ್ಕೆ 6 ದಿನಗಳು ಭಾನುವಾರ ಹೊರತುಪಡಿಸಿ ಓಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿತ್ತು.

ವಿಶೇಷ ರೈಲುಗಳ ಸಂಚಾರ
ಇನ್ನು ಹಾವೇರಿಯಲ್ಲಿ ಜನವರಿ 6ರಿಂದ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಿತ್ತು. ಏಲಕ್ಕಿ ನಗರಿ ಅಂತಲೇ ಹೆಸರುವಾಸಿಯಾಗಿರುವ ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಸಾಹಿತ್ಯ ಸಮ್ಮೇಳನಕ್ಕಾಗಿಯೇ ನೈರುತ್ಯ ರೇಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರನ್ನು ಕೈಗೊಂಡಿತ್ತು. ಹಾಗೆಯೇ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಾಲು ಸಾಲು ರಜೆಗಳು ಇದ್ದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿತ್ತು. ಭಾರಿ ಜನದಟ್ಟಣೆ ಕಡಿಮೆಗೊಳಿಸಲು ಹೆಚ್ಚುವರಿ ಕೋಚ್‌ಗಳನ್ನು ಸೇರಿಸಿತ್ತು.












Click it and Unblock the Notifications