Vijayapura Lok Sabha Result: ಬಿಜೆಪಿಯ ರಮೇಶ್ ಜಿಗಜಿಣಗಿಗೆ 75,778 ಮತಗಳ ಅಂತರದಿಂದ ಭರ್ಜರಿ ಜಯ
ವಿಜಯಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಅಲಗೂರ ಅವರ ವಿರುದ್ಧ ರಮೇಶ್ 75,778 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ರಮೇಶ್ ಜಿಗಜಣಗಿ ಗೆಲುವು ದಾಖಲಿಸುತ್ತಿದ್ದಂತೆ ಅವರ ನಿವಾಸ, ಬಿಜೆಪಿ ಜಿಲ್ಲಾ ಕಚೇರಿ, ಗಾಂಧಿ ಚೌಕ್ ಬಳಿ ಕಾರ್ಯಕರ್ತರು ವಿಜುಯೋತ್ಸವ ಆಚರಿಸಿದರು. 18ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ 6,69,055 ಮತಗಳನ್ನು ಪಡೆದು ಗೆಲುವು ದಾಖಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಜು 5,93,277 ಮತಗಳನ್ನು ಪಡೆದು ಸೋಲು ಕಂಡರು.

1998ರಲ್ಲಿ ಈ ಕ್ಷೇತ್ರದಲ್ಲಿ ಕೊನೆಯ ಬಾರಿಗೆ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆಗ ಎಂಬಿ ಪಾಟೀಲ್ ಲೋಕಸಭೆ ಪ್ರವೇಸಿಸಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಈ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಂತೆ ಕಾಣುತ್ತಿದೆ. ಲಿಂಗಾಯತ ಹಾಗೂ ಎಸ್ಸಿ, ಎಸ್‌ಟಿ ಮತಗಳೇ ನಿರ್ಣಾಯಕವಾಗಿವೆ.
ರಮೇಶ್ ಜಿಗಜಣಗಿ ಹಾಗೂ ರಾಜು ಅಲಗೂರ ನಡುವೆ ಗೆಲುವಿಗೆ ಫೈಟ್
ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಣಗಿ 15629 ಮತಗಳ ಮುನ್ನಡೆ
- ಅಂಚೆ ಮತದಾನ ಏಣಿಕೆ ಆರಂಭ
ನಾಲ್ಕನೇ ಬಾರಿ ಲೋಕಸಭೆ ಪ್ರವೇಶಿಸುವ ವಿಶ್ವಾಸದಲ್ಲಿ ರಮೇಶ್ ಜಿಗಜಣಗಿ












Click it and Unblock the Notifications