'ಲವ್ ಯು ಪಾಕ್ ಆರ್ಮಿ' ಎಂದು ಫೇಸ್ಬುಕ್ ಪೋಸ್ಟ್ ಹಾಕಿದ ತಾಳಿಕೋಟೆ ಯುವಕ
ವಿಜಯಪುರ, ಫೆಬ್ರವರಿ 25: ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬೆನ್ನಲ್ಲೇ, ವಿಜಯಪುರದಲ್ಲಿ ಇಂತಹದೇ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಯುವಕನೊಬ್ಬ 'ಲವ್ ಯೂ ಪಾಕ್ ಆರ್ಮಿ' ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ.
ಪಾಕ್ ಆರ್ಮಿ ಪರವಾಗಿ ತಾಳಿಕೋಟಿ ಯುವಕನ ಪೋಸ್ಟ್ ಹಾಕಿದ್ದಾನೆ. ತಾಳಿಕೋಟಿ ಯುವಕ ಶೇರ್ ಮಾಡಿದ ಬರಹ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ತಾಳಿಕೋಟೆ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್, 'ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಆತ ತಾಳಿಕೋಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾನೆ' ಎಂದು ಹೇಳಿದರು.

ಫೆ.22 ರಂದು ಎ ಟು ಝಡ್ ಖಾತೆಯಲ್ಲಿ ಲವ್ ಯೂ ಪಾಕ್ ಆರ್ಮಿ ಎಂದು ತಾಳಿಕೋಟೆಯ ಮೇರು ಬ್ಯಾಗವಾಟ್ ಬರೆದಿದ್ದ. ಬಳಿಕ ಅದೇ ಹೆಸರಿನಲ್ಲಿರುವ ಪೋಸ್ಟ್‌ನ್ನು ಮೇರು ಬ್ಯಾಗವಾಟ್ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ.
ಪಾಕ್ ಪರ ಪೋಸ್ಟ್ ಶೇರ್ ಮಾಡಿದ್ದ ಮೇರು ಬ್ಯಾಗವಾಟನನ್ನು ತಾಳಿಕೋಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications