ಹೊಸ ವರ್ಷದ ಮೊದಲ ದಿನ ಪಾರ್ಕಿನಲ್ಲಿ ಬೆತ್ತಲಾಗಿ ಓಡಾಡಿದ ಯುವಕ
ವಿಜಯಪುರ, ಜನವರಿ 1: ಹೊಸ ವರ್ಷ ಮೊದಲ ದಿನವೇ ವಿಜಯಪುರ ಜನರಿಗೆ ಶಾಕ್ ಕಾದಿತ್ತು. ನಗರದ ಜನ ಉದ್ಯಾನಕ್ಕೆ ವಾಕಿಂಗ್ ಎಂದ ಹೋದರೆ ಯುವಕನೋರ್ವ ಬೆತ್ತಲಾಗಿ ಓಡಾಡುವ ದೃಶ್ಯ ಎಲ್ಲರಿಗೂ ಮುಜುಗರ ಸೃಷ್ಟಿಸಿದೆ.
ಯುವಕನೋರ್ವನು ವಿವಸ್ತ್ರನಾಗಿ ಪಾರ್ಕಿನಲ್ಲಿ ಓಡಾಡುತ್ತಿರುವುದು, ಬೆಳಗಿನ ಜಾವ ಜಾಗಿಂಗ್, ವಾಕಿಂಗ್‌ಗೆ ಹೋದ ಜನರ ಕಣ್ಣಿಗೆ ಬಿದ್ದಿದೆ.
ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆತನು ಯಾರು ಎಂದು ತಿಳಿಯಲು ನಡೆಸಿದ ಪ್ರಯತ್ನವೂ ಪ್ರಯೋಜನವಾಗಿಲ್ಲ.

ಎಣ್ಣೆಯ ಅಮಲಿನಲ್ಲಿ ಈ ರೀತಿಯಾಡಿದ್ದಾನೋ ಅಥವಾ ಮಾನಸಿಕ ಅಸ್ವಸ್ಥನೋ ಎಂದು ಖಾತ್ರಿಯಾಗಿಲ್ಲ. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ತಡವಾಗಿ ಬಂದ ಕಾರಣ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ವಿಜಯಪುರದ ಜಿಲ್ಲಾಡಳಿತ ಕಚೇರಿ ಮುಂಭಾಗದ ಕರಿಮುದ್ದೀಮ ಮಸೀದಿ ಬಳಿ ಘಟನೆ ನಡೆದಿದೆ. ಬಟ್ಟೆ ತೊಟ್ಟುಕೋ ಎಂದು ಹೇಳಿದರೂ ಆರಂಭದಲ್ಲಿ ನಿರಾಕರಿಸಿ, ಬಳಿಕ ಒತ್ತಾಯದ ಮೇರೆಗೆ ರಟ್ಟಿನ ಡಬ್ಬ ಸುತ್ತಿಕೊಂಡಿದ್ದಾನೆ.












Click it and Unblock the Notifications