ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

ವಿಜಯಪುರ, ಜನವರಿ 30 : ಹುಬ್ಬಳ್ಳಿ-ವಿಜಯಪುರ ನಡುವೆ ಇಂಟರ್ ಸಿಟಿ ರೈಲು ಸಂಚಾರ ಆರಂಭವಾಗಬೇಕು ಎಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಫೆಬ್ರವರಿ 15ರಿಂದ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.

ಬೆಳಗಾವಿ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಫೆಬ್ರವರಿ 15ರಿಂದ ಹುಬ್ಬಳ್ಳಿ-ವಿಜಯಪುರ ನಡುವೆ ಇಂಟರ್ ಸಿಟಿ ರೈಲು ಸಂಚಾರ ಆರಂಭವಾಗಲಿದೆ" ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಹುಬ್ಬಳ್ಳಿ-ವಿಜಯಪುರ ನಡುವೆ ಇಂಟರ್ ಸಿಟಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಸಭೆ ನಡೆಸಿ ರೈಲು ಸಂಚಾರ ಆರಂಭಿಸಲು ಸಚಿವರು ಸೂಚನೆ ನೀಡಿದ್ದರು.

Hubballi Vijayapura Intercity Rail From February 15

9 ಮಾರ್ಗಗಳ ವಿದ್ಯುದೀಕರಣ: ನೈಋತ್ಯ ರೈಲ್ವೆ 9 ಮಾರ್ಗಗಳ ವಿದ್ಯುದೀಕರಣಕ್ಕೆ ಯೋಜನೆ ರೂಪಿಸುತ್ತಿದೆ. 2023ರೊಳಗೆ ಕರ್ನಾಟಕದ 1,728 ಕಿ. ಮೀ. ಉದ್ದದ ಮಾರ್ಗವನ್ನು ವಿದ್ಯುದೀಕರಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಮಾರ್ಗಗಳಲ್ಲಿ ಸಂಚಾರ ನಡೆಸುವ ರೈಲುಗಳ ವೇಗ ಹೆಚ್ಚಾಗಲಿದೆ. ರೈಲ್ವೆ ಇಲಾಖೆಗೆ ಡೀಸೆಲ್ ಸಹ ಉಳಿತಾಯವಾಗಲಿದೆ. 1728 ಕಿ. ಮೀ. ಉದ್ದದ ಮಾರ್ಗದ ಪೈಕಿ ಗದಗ-ಹೊಟಗಿ ಮಾರ್ಗದ 93 ಕಿ. ಮೀ. ಉದ್ದದ ಮಾರ್ಗವನ್ನು ವಿದ್ಯುದೀಕರಣಗೊಳಿಸಲು 2019ರಲ್ಲಿಯೇ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.

ವಿದ್ಯುದೀಕರಣಗೊಳ್ಳುವ ಮಾರ್ಗಗಳು

* ಗದಗ-ಹೊಟಗಿ (284 ಕಿ. ಮೀ)
* ಚಿಕ್ಕಬಣಾವರ-ಹುಬ್ಬಳ್ಳಿ (456 ಕಿ. ಮೀ.)
* ಚಿಕ್ಕಬಣಾವರ-ಹಾಸನ (166 ಕಿ. ಮೀ.)
* ಮೈಸೂರು-ಚಾಮರಾಜನಗರ (60 ಕಿ. ಮೀ.)
* ಕಡೂರು-ಚಿಕ್ಕಮಗಳೂರು (46 ಕಿ. ಮೀ)
* ಬೀರೂರು-ತಾಳಗುಪ್ಪ (161 ಕಿ. ಮೀ.)
* ಬಂಗಾರಪೇಟೆ-ಯಲಹಂಕ (149 ಕಿ. ಮೀ.)
* ಹೊಸಪೇಟೆ-ಸ್ವಾಮಿಹಳ್ಳಿ (59 ಕಿ. ಮೀ.)
* ಮೈಸೂರು-ಹಾಸನ-ಮಂಗಳೂರು (347 ಕಿ. ಮೀ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+