ಕೊರೊನಾ ಕಾಣಿಸಿಕೊಂಡ ಮರು ದಿನವೇ ಮೃತಪಟ್ಟ ರೋಗಿ!

ವಿಜಯಪುರ, ಮೇ 5: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕಿಗೆ ಮತ್ತೊಂದು ಸಾವು ಸಂಭವಿಸಿದೆ. ವಿಜಯಪುರದಲ್ಲಿ ಕೊರೊನಾ ಪೀಡಿತ ಮಹಿಳೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. P 640, 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ವಿಚಿತ್ರವೆಂದರೆ ಈ ಮಹಿಳೆಯಲ್ಲಿ ನಿನ್ನೆಯಷ್ಟೇ ಸೋಂಕು ಕಾಣಿಸಿಕೊಂಡಿತ್ತು. ಕಳೆದು ಮೂರ್ನಾಲ್ಕು ದಿನಗಳಿಂದ ಅಸ್ತಮಾಕ್ಕೆ ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿನ್ನೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿತ್ತು.

ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ 3 ಕ್ಕೇರಿದಂತಾಗಿದೆ. ಅಸ್ತಮಾ, ಶ್ವಾಸಕೋಶ ತೊಂದರೆ ಬೊಜ್ಜು ಸೇರಿದಂತೆ ಹಲವು ಕಾಯಿಲೆಯಿಂದ ಮಹಿಳೆ ಬಳಲುತ್ತಿದ್ದರು. ಈ ಮಹಿಳೆ P228 ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದ್ದರು.

1 More Death In Karnataka For Deadly Covid19

ರೋಗಿಯ ಕುಟುಂಬಸ್ಥರ ಸಹಕಾರದೊಂದಿಗೆ ಶಿಷ್ಠಾಚಾರದಂತೆ ಮೃತರ ಅಂತ್ಯ ಸಂಸ್ಕಾರವನ್ನು ಜಿಲ್ಲಾಡಳಿ ನೆರವೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+