ವಿಜಯಪುರದಲ್ಲಿ ಎರಡು ಲಾರಿಗಳ ನಡುವೆ ಡಿಕ್ಕಿ: ಮೂರು ಸಾವು
ವಿಜಯಪುರ, ಫೆಬ್ರವರಿ 16: ಲಾರಿಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂರು ಜನ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಹಳ್ಳದ ಗೆಣ್ಣೂರ್ ಕ್ರಾಸ್ ಬಳಿ ನಡೆದಿದೆ. ಇನ್ನು ಅಪಘಾತದಲ್ಲಿ ವಿಜಯಪುರ ಜಿಲ್ಲೆಯ ಅಥರ್ಗಾ ಗ್ರಾಮದ ಕಾಸು ಅಹಿರವಾಡಗಿ, ನಾಗಠಾಣ ಗ್ರಾಮದ ದಾವಲ್ ಮತ್ತು ಮಧ್ಯ ಪ್ರದೇಶ ಮೂಲದ ಜಗದೀಶ ಬಾಮಾ (65) ಎಂಬುವರು ಸಾವನ್ನಪ್ಪಿದ್ದಾರೆ.

ಇನ್ನು ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಬೆಳ್ಳುಳ್ಳಿ ಮತ್ತು ಇತರ ಸಾಮಗ್ರಿ ಸಾಗಿಸುತ್ತಿದ್ದ ಲಾರಿಗೆ, ಹುಬ್ಬಳ್ಳಿ ಕಡೆಯಿಂದ ವಿಜಯಪುರ ಕಡೆಗೆ ಬಂದ ತೆಂಗಿನಕಾಯಿ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications