ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆಸ್ತಿಎಷ್ಟು ಗೊತ್ತೆ?
ಉಡುಪಿ ಮಾರ್ಚ್ 23: ಅತ್ಯಂತ ಕತೂಹಲ ಮೂಡಿಸಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದೆ ಶೋಭಾ ಕರಂದ್ಲಾಜೆ ಇಂದು ನಾಮಪತ್ರ ಸಲ್ಲಿದ್ದಾರೆ. ಜ್ಯೋತಿಷಿಗಳ ಸಲಹೆ ಪಡೆದು ಶೋಭಾ ಕರಂದ್ಲಾಜೆ ನಿನ್ನೆ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಸಾರ್ವಜನಿಕವಾಗಿ ಮಾರ್ಚ್ 26 ರಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಮ್ಮುಖದಲ್ಲಿ ಬೆಂಬಲಿಗ ರೊಂದಿಗೆ ಬಂದು ಶೋಭಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ನಾಮಪತ್ರ ಸಲ್ಲಿಕೆ ವೇಳೆ ಶೋಭಾ ಕರಂದ್ಲಾಜೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಆ ಪ್ರಕಾರ ಶೋಭಾ ಕರಂದ್ಲಾಜೆ ಒಟ್ಟು ಆಸ್ತಿ 10.48 ಕೋಟಿ ಎಂದು ಘೋಷಿಸಿದ್ದಾರೆ.

ಈ ಪೈಕಿ ಚರಾಸ್ತಿ- 7.38 ಕೋಟಿ, ಸ್ಥಿರಾಸ್ತಿ- 3.10 ಕೋಟಿ ಎಂದು ಶೋಭಾ ಘೋಷಿಸಿದ್ದಾರೆ. ದಾಖಲೆಗಳ ಪ್ರಕಾರ ಶೋಭಾ ಕರಂದ್ಲಾಜೆ ಅವರಿಗೆ ಗೆ 4.99 ಕೋಟಿ ಸಾಲವಿದೆ. 2014 ರಲ್ಲಿ ಶೋಭಾ ಕರದ್ಲಾಜೆ ಅವರು 7.20 ಕೋಟಿ ಆಸ್ತಿ ಹೊಂದಿದ್ದರು. 5 ವರ್ಷದಲ್ಲಿ 3.27 ಕೋಟಿ ರೂಪಾಯಿ ಏರಿಕೆ ಯಾಗಿದೆ.
ಕರ್ನಾಟಕ ಸಂಸದರಿಗೆ ಅನುದಾನ ಸಿಕ್ಕಿದ್ದೆಷ್ಟು, ಅವರು ಕ್ಷೇತ್ರದಲ್ಲಿ ಖರ್ಚು ಮಾಡಿದ್ದೆಷ್ಟು, ಉಳಿಸಿಕೊಂಡಿದ್ದೆಷ್ಟು?
ಅದಲ್ಲದೇ ಚರಾಸ್ತಿ ಒಂದು ಸಾವಿರ ಗ್ರಾಂ ತೂಕದ 33.05 ಲಕ್ಷದ ಚಿನ್ನದ ಬಿಸ್ಕೆಟ್, 6.40 ಗ್ರಾಂ ಚಿನ್ನಾಭರಣ, ಬೆಳ್ಳಿ ಪರಿಕರ, 12 ಲಕ್ಷ ರುಪಾಯಿಯ ವಿಮೆ, 25 ಸಾವಿರ ಪಾವತಿಸಿ ಬಂದೂಕು ಪರವಾನಿಗೆ ಸೇರಿದಂತೆ 12 ಲಕ್ಷ ರೂಪಾಯಿ ಖಾತೆಯಿಂದ ಕಳ್ಳತನ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
ಗಂಗಾನಗರದಲ್ಲಿರುವ ಫೆಡರಲ್ ಬ್ಯಾಂಕಿನಲ್ಲಿ 29ಲಕ್ಷದ 5ಸಾವಿರ, ಬೆಂಗಳೂರು ಸದಾಶಿವನಗರದ ಕೊಟಕ್ ಮಹೀಂದ್ರ ಬ್ಯಾಂಕಿನಲ್ಲಿ 1ಲಕ್ಷದ 56ಸಾವಿರ, ದಿಲ್ಲಿಯ ಸಂಸದ್ ಭವನದ ಎಸ್ ಬಿಐನಲ್ಲಿ 40 ಲಕ್ಷದ24ಸಾವಿರ ರೂಪಾಯಿ, ಫೆಡರಲ್ ಬ್ಯಾಂಕ್ ಟ್ಯಾಕ್ಸ್ ಸರ್ವರ್ ನಿಖರ ಠೇವಣಿ 3ಲಕ್ಷ ರೂಪಾಯಿ ಎಸ್ ಬಿಐ ಆರ್ ಡಿ- 1ಲಕ್ಷ 65ಸಾವಿರ ರೂಪಾಯಿ, ಎಲ್ ಐಸಿ 11ಲಕ್ಷ, ಕಪಿಲಾ ಮಂಜುಶ್ರೀ ಅಪರೆಲ್ಸ್ ಪ್ರೈ.ಲಿ 4ಕೋಟಿ 1ಲಕ್ಷ ಮುಂಗಡ ಸಂಬಂಧಿಕರಿಂದ ಮುಂಗಡ - 83ಲಕ್ಷದ 17ಸಾವಿರ ರೂಪಾಯಿ, ಇತರರಿಂದ ಮುಂಗಡ 4ಲಕ್ಷ ರೂಪಾಯಿ, ಟೊಯೋಟ ಇನ್ನೋವಾ ಕಾರು, 16ಲಕ್ಷ 31ಸಾವಿರ ರೂಪಾಯಿ , ಹೋಂಡಾ ಆಕ್ಟೀವಾ 73ಸಾವಿರ, ಜೆಡಿಇ ನಲ್ಲಿ ಠೇವಣಿ 71ಕೋಟಿ 48ಲಕ್ಷ, ಕೃಷಿಯೇತರ ಭೂ ಮೌಲ್ಯ 10ಲಕ್ಷ,
2015ರಲ್ಲಿ ಖರೀದಿಸಿದ ಬೆಂಗಳೂರಿನ ಮನೆ ಮೌಲ್ಯ 2ಕೋಟಿ 7ಲಕ್ಷ- ಈಗಿನ ಮಾರುಕಟ್ಟೆ ಮೌಲ್ಯ 3ಕೋಟಿ, ಸಾಲ ಮುಂಗಡ ಆದರ್ಶ ಡೆವಲಪರ್ 4ಕೋಟಿ 99ಲಕ್ಷ ಎಂದು ಶೋಭಾ ಸಲ್ಲಿಸಿರುವ ಧಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications