ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರೂರು ಶ್ರೀಗಳ ಮರಣದ ಬಗ್ಗೆ ಕೆಎಂಸಿಯಿಂದ ಪತ್ರಿಕಾ ಹೇಳಿಕೆ

By Mahesh
|
Google Oneindia Kannada News

Recommended Video

Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಮರಣದ ಬಗ್ಗೆ ಆಸ್ಪತ್ರೆಯಿಂದ ಹೊರಬಂದ ಪತ್ರಿಕಾ ಹೇಳಿಕೆ

ಮಣಿಪಾಲ, ಜುಲೈ 19: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಗುರುವಾರ ಬೆಳಗ್ಗೆ ಕೊನೆಯುಸಿರೆಳಿದಿದ್ದಾರೆ. ಸ್ವಾಮೀಜಿಗಳನ್ನು ಆಸ್ಪತ್ರೆಗೆ ಸೇರಿದಾಗಿನಿಂದ ಮೃತಪಟ್ಟ ತನಕದ ಆರೋಗ್ಯ ತಪಾಸಣೆ ಮಾಹಿತಿಯನ್ನು ಆಸ್ಪತ್ರೆ ಇಂದು ಪ್ರಕಟಿಸಿದೆ.

'ಶ್ರೀರೂರು ಶ್ರೀಗಳು ವಿಷ ಸೇವಿಸಿರುವುದು ನಿಜ, ಫುಡ್ ಪಾಯ್ಸನ್ ಇರಬಹುದು ಅಥವಾ ಬಲವಂತ ವಿಷ ಪ್ರಾಶನವಾಗಿರಬಹುದು, ಈ ಸಮಯಕ್ಕೆ ಯಾವುದನ್ನು ಖಚಿತವಾಗಿ ಹೇಳಲಾಗದು, ಪೊಲೀಸರ ಕಣ್ಗಾವಲಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಈ ಬಗ್ಗೆ ತಿಳಯಲಿದೆ ' ಎಂದು ಕೆಎಂಸಿ ಡಾ. ಅವಿನಾಶ್ ಶೆಟ್ಟಿ ಅವರು ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆಗೂ ಮುನ್ನ ತಕ್ಷಣದ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Kasturba Hospital, Manipal press release on Lakshmivara teertha Seer death

Breaking: ಶೀರೂರು ಶ್ರೀಗಳ ವಕೀಲರಿಂದ ಸ್ಫೋಟಕ ಮಾಹಿತಿBreaking: ಶೀರೂರು ಶ್ರೀಗಳ ವಕೀಲರಿಂದ ಸ್ಫೋಟಕ ಮಾಹಿತಿ

ಇದಾದ ಬಳಿಕ ಕೆಎಂಸಿ ಹೊರಡಿಸಿರುವ ಅಧಿಕೃತ ಪತ್ರಿಕಾ ಹೇಳಿಕೆ ಇಲ್ಲಿದೆ:

ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರನ್ನು ಮಣಿಪಾಲ್ ನ ಕಸ್ತೂರ್ಬಾ ಆಸ್ಪತ್ರೆಗೆ ಜುಲೈ 18, 2018ರ ಮಧ್ಯರಾತ್ರಿ 1.05 ಗಂಟೆ ಸುಮಾರಿಗೆ ಕರೆತರಲಾಗಿದೆ. ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರ

ಅವರನ್ನು ಇಲ್ಲಿಗೆ ಕರೆ ತಂದಾಗ ವಿಷಮ ಪರಿಸ್ಥಿತಿಯಲ್ಲಿದ್ದರು. ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಇತ್ತು. ಇದಕ್ಕೂ ಮುನ್ನ ಅವರಿಗೆ ಅಮಶಂಕೆ ತೊಂದರೆ ಇತ್ತು. ತಕ್ಷಣದ ಚಿಕಿತ್ಸೆ ನೀಡಿ ಅವರನ್ನು ಅಡ್ಮಿಟ್ ಮಾಡಿಕೊಳ್ಳಲಾಯಿತು.

Kasturba Hospital, Manipal press release on Lakshmivara teertha Seer death

ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು, ನೆಫ್ರೋಲಾಜಿ, ಗ್ಯಾಸ್ಟ್ರೋಎಂಟೆರೋಲೊಜಿಸ್ಟ್, ತುರ್ತು ನಿಗಾ ಪರಿಸ್ಥಿತಿ ತಜ್ಞರ ಅಭಿಪ್ರಾಯದಂತೆ, ವೆಂಟಿಲೇಟರ್ ವ್ಯವಸ್ಥೆ ಒದಗಿಸಲಾಯಿತು. ಡಯಾಲಿಸಸ್ ಹಾಗೂ ರಕ್ತ ಶುದ್ಧಿ ಕಾರ್ಯ ಕೈಗೊಳ್ಳಲಾಯಿತು.

ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!

ಆಹಾರ ವಿಷವಾಗಿ ದೇಹ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಸಂಶ್ಯ ಬಂದಿದ್ದರಿಂದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಯಿತು. ಆದರೆ, ಸ್ವಾಮೀಜಿಗಳ ದೇಹ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗಲಿಲ್ಲ, ನಮ್ಮ ವೈದ್ಯಕೀಯ ತಂಡದ ಸತತ ಪ್ರಯತ್ನದ ನಡುವೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಅವರು ಮೃತರಾದರು ಎಂದು ತಿಳಿಸುತ್ತೇವೆ.

English summary
Kasturba Hospital, Manipal releases a press note on Shiroor Seer Lakshmivara teertha Swamiji's death. He was declared death at 8.30 AM on July 19,2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X