ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ವೃದ್ಧ ಅತ್ತೆ-ಮಾವನನ್ನು ಮನಬಂದಂತೆ ಥಳಿಸಿದ ಸೊಸೆ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 18 : ಮಹಿಳೆಯೊಬ್ಬಳು ತನ್ನ ಅತ್ತೆ ಮಾವನಿಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ ತೆಂಕನಿಡಿಯೂರು ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಮನೆಯಲ್ಲಿದ್ದ ವೃದ್ಧ ಅತ್ತೆ ಮಾವನಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಎಳೆದಿದ್ದಾಳೆ. ನೆಲಕ್ಕುರುಳಿಸಿ ಕಾಲಿಂದ ಒದ್ದು ಮನಬಂದಂತೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಮೊದಲೇ ವಯೋ ವೃದ್ಧರು ಸೊಸೆಯ ರಂಪಾಟದಿಂದ ರೋಸಿ ಹೋಗಿದ್ದಾರೆ.

Daughter in law tortures her in-laws cruelly in Udupi

ವೆಂಕಟೇಶ್ ಪೈ ಮತ್ತು ವೀಣಾ ಪೈ ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ್ ಪೈ ಮನೆಯಿಂದ ಇನ್ನೊಬ್ಬ ಮಗನಾದ ರಮಾನಾಥ್ ಪೈ ಮನೆಗೆ ಶಿಫ್ಟ್ ಆಗಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೊಸೆ ಅಶ್ವಿನಿ ಪೈ ಮೇಲೆ ದೂರನ್ನು ನೀಡಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕೊಲೆ ಯತ್ನ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಾದ ಬಳಿಕ ಆರೋಪಿ ಅಶ್ವಿನಿ ಪೈ ಮತ್ತು ಪತಿ ಲಕ್ಷ್ಮಣ್ ಪೈ ಈಗ ಮನೆಯಿಂದ ಕಾಣೆಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

ಎರಡು ದಿನಗಳ ಕಾಲ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆಂಕಟೇಶ್ ಪೈ ಮತ್ತು ವೀಣಾ ಪೈ ದಂಪತಿಯ ಮತ್ತಿಬ್ಬರು ಮಕ್ಕಳು ತಮ್ಮ ಜೊತೆ ಇರಿಸಿಕೊಂಡಿದ್ದಾರೆ.

English summary
In a shocking incident Daughter in law tortures her in-laws cruelly for which a case has been registered at Kapu police station in Udupi. Daughter in law is named as Ashwini Pai who is said to be absconding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X