• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರ್ಕಳದಲ್ಲಿ ಕಾಂಗ್ರೆಸ್ ಹೀಗೆ! 'ಕೈ' ಕಮಾಂಡ್ ಬಳಿ ತೂಕದ ಬಟ್ಟು

By ಉಡುಪಿ ಪ್ರತಿನಿಧಿ
|

ಕಾರ್ಕಳ (ಉಡುಪಿ ಜಿಲ್ಲೆ), ಏಪ್ರಿಲ್ 5: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ತೆರೆ ಮರೆಯಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಹರ್ಷ ಮೊಯಿಲಿಗೆ ಟಿಕೆಟ್ ನೀಡಬೇಕು ಎಂದು ಹಠಕ್ಕೆ ಬಿದ್ದಿದ್ದ ವೀರಪ್ಪ ಮೊಯಿಲಿ, ಇದೀಗ ತಣ್ಣಗಾಗಿದ್ದಾರೆ.

ಕಾಸಿದ್ದರೆ ಕಾಂಟ್ರ್ಯಾಕ್ಟರ್ ಗಳಿಗೆ ಕಾಂಗ್ರೆಸ್ ಟಿಕೆಟ್ ಎಂದು ಟ್ವೀಟ್ ಮಾಡಿದ್ದ ವೀರಪ್ಪ ಮೊಯಿಲಿ, ಆ ನಂತರ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಆದರೆ ತಮ್ಮ ಮಗನಿಗೆ ಸಿಗದ ಟಿಕೆಟ್ ವಿರೋಧಿಗೂ ಸಿಗಬಾರದು ಎಂಬ ನಿಲವು ತಳೆದಿರುವ ವೀರಪ್ಪ ಮೊಯಿಲಿ, ಗೋಪಾಲ ಭಂಡಾರಿಗೆ ಟಿಕೆಟ್ ದೊರೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಕಾರ್ಕಳದಲ್ಲಿ ಸುನೀಲ್ ಕುಮಾರ್ ಎದುರಿಸುವ ಕಾಂಗ್ರೆಸ್‌ ಅಭ್ಯರ್ಥಿ ಯಾರು?

ಪ್ರಬಲ ಆಕಾಂಕ್ಷಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಟಿಕೆಟ್ ಗಾಗಿ ಲಾಬಿ ಮಾಡುತ್ತಿದ್ದಾರೆ. ಇದೀಗ ಬೆಂಬಲಿಗರು ಎಂಬ ಬೋರ್ಡ್ ನಲ್ಲಿ ಹಲವರು ಮುನಿಯಾಲು ಉದಯ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಕಾರ್ಕಳ ಭಾಗದಲ್ಲಿ ಕಾಂಗ್ರೆಸ್ ನಿಷ್ಕ್ರಿಯವಾಗಿ ಎರಡು- ಮೂರು ವರ್ಷಗಳೇ ಕಳೆದಿದೆ. ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್ ಹಿರಿಯ ನಾಯಕರು ಮಾಡಿಲ್ಲ. ಕಾರ್ಕಳ ಉಸ್ತುವಾರಿ ಜಿ.ಎ.ಬಾವಾ ಹೆಸರಿಗೆ ಮಾತ್ರ ಇದ್ದಾರೆ. ಕಾಂಗ್ರೆಸ್ ಉಳಿವಿಗಾಗಿ ಕೆಲಸ ಮಾಡುತ್ತಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇನ್ನು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಪ್ರಯತ್ನ ಪಡುತ್ತಿದ್ದರೆ ಅದು ಉದಯ್ ಕುಮಾರ್ ಶೆಟ್ಟಿ. ಕಾಂಗ್ರೆಸ್ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಕಾರ್ಕಳ ಕ್ಷೇತ್ರದಲ್ಲಿ ಕೈ ಪಕ್ಷಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ.

ಆ ಕಾರಣದಿಂದಲೇ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು. ಆ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡುವುದಕ್ಕೆ ಹೈಕಮಾಂಡ್ ಗಮನ ನೀಡಬೇಕು ಎನ್ನುವುದು ಉದಯ್ ಕುಮಾರ್ ಶೆಟ್ಟಿ ಬೆಂಬಲಿಗರ ಆಗ್ರಹವಾಗಿದೆ.

English summary
Karkala assembly constituency in Udupi district is now become very interesting for Congress. Because former chief minister and prominent leader Veerppa Moily wanted ticket for his son Harsha Moily. This issue become controversy after Veerappa Moily's tweet. So, who will get Congress ticket from Karkala. Here is an analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more