ಪತ್ತೆಯಾಗಿರುವ ಬೋಟ್ ಅವಶೇಷ ನಾಪತ್ತೆಯಾದ ಸುವರ್ಣ ತ್ರಿಭುಜದ್ದಲ್ಲ!

ಉಡುಪಿ, ಫೆಬ್ರವರಿ 07: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ 7 ಮಂದಿ ಮೀನುಗಾರರು ನಾಪತ್ತೆಯಾಗಿ 53 ದಿನಗಳು ಕಳೆದಿವೆ. ಆದರೆ ಮೀನುಗಾರರ ಸುಳಿವು ಈವರೆಗೆ ಸಿಕ್ಕಿಲ್ಲ. ಈ 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ನ ಕುರುಹು ಕೂಡ ಈವರೆಗೆ ಪತ್ತೆಯಾಗಿಲ್ಲ.

ಈ ನಡುವೆ ಮಹಾರಾಷ್ಟ್ರದ ಮಾಲ್ವಾಣ್ ಸಮೀಪ ಮೀನುಗಾರರಿಗೆ ಸಮುದ್ರದಲ್ಲಿ ಬೋಟ್ ಒಂದರ ಕ್ಯಾಬಿನ್ ನ ಮೇಲ್ಛಾವಣಿ ಸಿಕ್ಕಿತ್ತು.

ಇದು ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನ ಅವಶೇಷ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಇದು ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆಯನ್ನು ಕಾರವಾರ ಮೂಲದ ಮೀನುಗಾರರು ವ್ಯಕ್ತಪಡಿಸಿದ್ದರು.

53 days passed no clue about 7 missing fisherman of Malpe

ಈ ಹಿನ್ನೆಲೆಯಲ್ಲಿ ಆಳ ಸಮುದ್ರದಲ್ಲಿ ಪತ್ತೆಯಾಗಿದ್ದ ಬೋಟ್ ಕ್ಯಾಬಿನ್ ಮೇಲ್ಛಾವಣಿಯ ಅವಶೇಷದ ಚಿತ್ರವನ್ನು ನಾಪತ್ತೆಯಾಗಿರುವ ಮೀನುಗಾರರ ಸಂಬಂಧಿಗಳಿಗೆ ಕಳುಹಿಸಲಾಗಿತ್ತು. ಆದರೆ ಚಿತ್ರವನ್ನು ಕೂಲಂಕುಶವಾಗಿ ಪರಿಶೀಲಿಸಿ ಮೀನುಗಾರರ ಸಂಬಂಧಿಗಳು ಪತ್ತೆಯಾಗಿರುವ ಬೋಟ್ ಅವಶೇಷ ಸುವರ್ಣ ತ್ರಿಭುಜ ಬೋಟ್ ನದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

53 days passed no clue about 7 missing fisherman of Malpe

ಈ ನಡುವೆ ಮೀನುಗಾರರಿಗಾಗಿ ಶೋಧಕಾರ್ಯ ನಡೆಸುತ್ತಿರುವ ನೌಕಾಪಡೆಗೆ ಸಮುದ್ರದ ಆಳದಲ್ಲಿ ಸಿಕ್ಕಿರುವ ವಸ್ತು ಯಾವುದೆಂದು ಇದುವರೆಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಡಿಸೆಂಬರ್ 13 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮಲ್ಪೆ ಮೀನುಗಾರರು ಎಲ್ಲಿ ಹೋದರು? ಏನಾದರು? ಎಂಬುದೇ ಇನ್ನೂ ನಿಗೂಢವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+