ಅತ್ಯಾಚಾರದ ವಿಡಿಯೋ ಮಾಡಿದ ಪಕ್ಕದ್ಮನೆ ಪುಂಗವ
ಬೆಂಗಳೂರು, ಡಿಸೆಂಬರ್ , 23: ಮುಗ್ಧ ಯುವತಿಯನ್ನು ಅತ್ಯಾಚಾರ ಮಾಡಿದ್ದು ಅಲ್ಲದೇ ಅದರ ವಿಡಿಯೋ ತುಣುಕನ್ನು ಅಂತರ್ಜಾಲಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಹೇಳಿ ಬ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ಧ ದೂರು ದಾಖಲಾಗಿದೆ.
ಪಕ್ಕದ ಮನೆಯಾತನಿಂದ ತಿಂಗಳ ಕಾಲದಿಂದ ಲೈಂಗಿಕ ಶೋಷಣೆಗೆ ಗುರಿಯಾಗಿದ್ದ ಯುವತಿ ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.ತುಮಕೂರು ಮೂಲದ ಯುವತಿ ದೂರು ನೀಡಿದ್ದು ಲೈಂಗಿಕ ಕಾರ್ಯಕ್ಕೆ ಸಹಕಾರ ನೀಡದಿದ್ದರೆ ನಿನ್ನ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದಾಳೆ.[ರೇಪ್ ಮಾಡಿ ವಾಟ್ಸಪ್ ನಲ್ಲಿ ವಿಡಿಯೋ ಹರಿಬಿಟ್ಟ ಬಾಲಕರು]

ಒಬ್ಬರಿಗೊಬ್ಬರು ಪರಿಚಯವಿದ್ದ ಮಾಯಾ(ಹೆಸರು ಬದಲಿಸಲಾಗಿದೆ) ಎಂಬುವರು ಸತ್ಯ ಎಂಬಾತನ ಮೇಲೆ ದೂರು ಸಲ್ಲಿಕೆ ಮಾಡಿದ್ದು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
24 ವರ್ಷದ ಮಹಿಳೆ ಬೆಂಗಳೂರು ಹೊರವಲಯದ ಪೀಣ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಬಿಇಎಲ್ ಸಂಸ್ಥೆಗೆ ತರಬೇತಿಗೆಂದು ತೆರಳುತ್ತಿದ್ದರು. ಸತ್ಯ ಎಂಬಾತನೂ ಅಲ್ಲಿಗೆ ತರಬೇತಿಗೆ ಆಗಮಿಸುತ್ತಿದ್ದ.['ನನ್ನ ಮಗಳ ಹೆಸರು ಜ್ಯೋತಿ, ನೀವೂ ಹಾಗೆಯೇ ಕರೆಯಿರಿ']
ಮಾಯಳ ದೂರವಾಣಿ ಸಂಖ್ಯೆ ಪಡೆದ ಸತ್ಯ ಆಕೆಗೆ ಅಶ್ಲೀಲ ಸಂದೇಶಗಳನ್ನು ರವಾನೆ ಮಾಡುವುದಕ್ಕೆ ಆರಂಭ ಮಾಡಿದ್ದಾನೆ. ಲೈಂಗಿಕವಾಗಿ ಸಹಕರಿಸಲು ಒತ್ತಡ ಹಾಕಿದ್ದಾನೆ. ಮಾಯಾ ಅವನ ಕರೆಗಳನ್ನು ತಿರಸ್ಕರಿಸಿದ್ದಾಳೆ. ಭಯಭೀತಳಾದ ಯುವತಿ ವಿಷಯವನ್ನು ತುಮಕೂರಿನಲ್ಲಿರುವ ತನ್ನ ಪಾಲಕರಿಗೆ ತಿಳಿಸಿದ್ದಾಳೆ.
ತನ್ನ ವಾಸಸ್ಥಳ ಬದಲಿಸಿದ್ದ ಮಾಯಾಳನ್ನು ಒಂದು ದಿನ ಅಗ್ರಹಾರ ದಾಸರಹಳ್ಳಿಗೆ ಡ್ರಾಪ್ ಮಾಡಿದ ಸತ್ಯ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದನ್ನು ವಿಡಿಯೋ ಚಿತ್ರಿಕರಣ ಮಾಡಿಕೊಂಡು ಸಹಕರಿಸದಿದ್ದರೆ ಅಂತರ್ಜಾಲಕ್ಕೆ ಅಪ್ ಡೇಟ್ ಮಾಡುತ್ತೇನೆ ಎಂದು ಬ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.












Click it and Unblock the Notifications