ಕೋತಿ ಜೊತೆ ಉಪಹಾರ ಹಂಚಿಕೊಂಡ ಶಾಸಕ ಸುರೇಶ್ ಬಾಬು!

ತುಮಕೂರು, ಮೇ 13 : ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಗೆ ಶನಿವಾರ ವಿಶೇಷವಾಗಿತ್ತು. ಮನೆಗೆ ಬಂದಿದ್ಧ ವಿಶೇಷ ವ್ಯಕ್ತಿಯ ಜೊತೆ ಉಪಹಾರ ಸೇವಿಸುವ ಮೂಲಕ ಅವರು ಮತದಾನದ ದಿನವನ್ನು ಆರಂಭಿಸಿದರು.

ಶನಿವಾರ ಕೋತಿಯೊಂದು ಸುರೇಶ್ ಬಾಬು ಅವರ ಮನೆಯೊಳಗೆ ಪ್ರವೇಶಿಸಲು ಪ್ರಯತ್ನ ನಡೆಸಿತು. ಸುರೇಶ್ ಬಾಬು ಅವರ ಬೆಂಬಲಿಗರು ಕೋತಿ ಮನೆಯೊಳಗೆ ಪ್ರವೇಶಿಸಿದರೆ ಶುಭ ಎಂದು ಅದನ್ನು ಮನೆಯೊಳಗೆ ಬಿಟ್ಟರು.

ಸುರೇಶ್ ಬಾಬು ಅವರು ಉಪಹಾರ ಸೇವಿಸುವಾಗ ಆಗಮಿಸಿದ ಕೋತಿ ಟೇಬಲ್ ಮೇಲೆ ಕುಳಿತುಕೊಂಡಿತು. ಸುರೇಶ್ ಬಾಬು ಅವರು ಮುದ್ದೆ ಸವಿಯುತ್ತಿದ್ದರು. ಮುದ್ದೆ ಮತ್ತು ಸೊಪ್ಪಿನ ಪಲ್ಯವನ್ನು ಕೋತಿಗೆ ನೀಡಿದರು.

Karnataka elections : JDS MLA shared breakfast with monkey

ಮುದ್ದೆಯನ್ನು ಅದು ಚಪ್ಪರಿಸಿ ತಿನ್ನಲಿಲ್ಲ. ಆದ್ದರಿಂದ, ಉಪ್ಪಿಟ್ಟು ತರಿಸಿ ತಿನ್ನಿಸಿದರು. ಕೋತಿ ಸಂತಸದಿಂದ ಸುರೇಶ್ ಬಾಬು ಅವರು ತಿನ್ನಿಸಿದ ಉಪ್ಪಿಟ್ಟು ತಿಂದಿತು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಎದುರಾಗಿತ್ತು. ಬಿಜೆಪಿಯಿಂದ ಜೆ.ಸಿ.ಮಧುಸ್ವಾಮಿ, ಕಾಂಗ್ರೆಸ್‌ನಿಂದ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಎದುರಾಳಿಗಳಾಗಿದ್ದರು.

ಈಗ ಮತದಾನ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮತದಾದನ ದಿನ ಕೋತಿ ಮನೆಗೆ ಬಂದಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಗೆ ಶುಭ ತರಲಿದೆಯೇ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+