Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ದಿಢೀರ್ ಇಳಿಕೆ

Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ (ಏಪ್ರಿಲ್‌ 29) ನಡೆದ ಉಂಡೆ ಕೊಬ್ಬರಿ ಹರಾಜಿನಲ್ಲಿ ಬೆಲೆಯು ಕಳೆದ ವಾರಕ್ಕಿಂತ ಸ್ವಲ್ಪ ಇಳಿಮುಖವಾಗಿದೆ. ಹಾಗಾದ್ರೆ ಎಷ್ಟಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತಿಪಟೂರು ಎಪಿಎಂಸಿಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಉಂಡೆ ಕೊಬ್ಬರಿಯ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಲ್‌ಗೆ 34,069 ರೂಪಾಯಿಗಳಿಗೆ ಬಂದು ನಿಂತಿದೆ. ಕಳೆದ ವಾರದ ಏಪ್ರಿಲ್ 13ರ ಹರಾಜಿನಲ್ಲಿ ಬೆಲೆಯು ಬರೋಬ್ಬರಿ 38,000 ರೂಪಾಯಿಗಳ ಗಡಿ ದಾಟಿ ರೈತರಲ್ಲಿ ದೊಡ್ಡ ಮಟ್ಟದ ಭರವಸೆ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಬೆಲೆ ಕ್ರಮೇಣ ಇಳಿಕೆಯಾಗುತ್ತಾ ಸಾಗಿದ್ದು, ಏಪ್ರಿಲ್ 23ರಂದು 35,994 ರೂಪಾಯಿಗಳಿದ್ದ ಬೆಲೆ ಈಗ ಮತ್ತಷ್ಟು ತಗ್ಗಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

Copra Price Falls in Tiptur APMC Latest Rates Drop After Touching Rs 38 000 Know Statistics Detail

ಮಾರುಕಟ್ಟೆಯ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕನಿಷ್ಠ ಬೆಲೆಯು 31,000 ರೂಪಾಯಿ ದಾಖಲಾಗಿದ್ದರೆ, ಮಾದರಿ ಬೆಲೆಯು 32,000 ರೂಪಾಯಿ, ಗರಿಷ್ಠ 34,069 ರೂಪಾಯಿದೆ ಮಾರಾಟವಾಗಿದೆ. ಕಳೆದ ವಾರದ ಭರ್ಜರಿ ಏರಿಕೆಯಿಂದ ಸಂತಸಗೊಂಡಿದ್ದ ತೆಂಗು ಬೆಳೆಗಾರರಿಗೆ ಈ ಅಲ್ಪ ಬೆಲೆ ಕುಸಿತವು ಕೊಂಚ ಆತಂಕ ತಂದಿದೆ. ಪ್ರಸ್ತುತ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಪ್ರಮಾಣದಲ್ಲಿನ ವ್ಯತ್ಯಾಸವು ಈ ಬೆಲೆ ಬದಲಾವಣೆಗೆ ಪ್ರಮುಖ ಕಾರಣ ಎಂದು ಹಲವರು ಹೇಳುವ ಮಾತಾಗಿದೆ.

ಪ್ರಸ್ತುತ ಕ್ವಿಂಟಲ್‌ ಕೊಬ್ಬರಿ ಧಾರಣೆ ಎಷ್ಟಿದೆ?

* ಗರಿಷ್ಠ ದರ: 34,069 ರೂಪಾಯಿಗೆ ಮಾರಾಟವಾಗಿದೆ.

* ಕನಿಷ್ಠ ದರ: 31,000 ರೂಪಾಯಿ

* ಮಾದರಿ ಬೆಲೆ: 32,000 ರೂಪಾಯಿ

ಏಪ್ರಿಲ್ 13ರ ಸುಮಾರಿಗೆ ಬೆಲೆಯು ಭರ್ಜರಿ ಏರಿಕೆ ಕಂಡು ಕ್ವಿಂಟಲ್‌ಗೆ 38,000 ರೂಪಾಯಿ ಗಡಿ ತಲುಪಿತ್ತು. ಆ ಸಮಯದಲ್ಲಿ ಬೆಲೆ ಏರಿಕೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದರು. ಏಪ್ರಿಲ್ 23ರಂದು 35,994 ರೂಪಾಯಿರ ಇದ್ದ ಬೆಲೆ ಇದೀಗ ಏಪ್ರಿಲ್ 27ರ ಹರಾಜಿನಲ್ಲಿ 34,069 ರೂಪಾಯಿಗೆ ಇಳಿಕೆಯಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಹಂತ ಹಂತವಾಗಿ ಕೊಬ್ಬರಿ ಬೆಲೆಯಲ್ಲಿ ಇಳಿಕೆ

ಕಳೆದ ವಾರವಷ್ಟೇ 38,000 ರೂಪಾಯಿವರೆಗೆ ಏರಿಕೆ ಕಂಡಿದ್ದ ಬೆಲೆಯು ಈಗ ಹಂತ ಹಂತವಾಗಿ ಇಳಿಕೆ ಆಗುತ್ತಿದೆ. ಮಾರುಕಟ್ಟೆಯಲ್ಲಿನ ಈ ಏರಿಳಿತವು ತೆಂಗು ಬೆಳೆಗಾರರಲ್ಲಿ ತುಸು ಆತಂಕ ಮೂಡಿಸಿದೆ. ಆದರೂ, ಕಳೆದ ವರ್ಷದ ಅಲ್ಪ ದರಗಳಿಗೆ ಹೋಲಿಸಿದರೆ ಪ್ರಸ್ತುತ ಬೆಲೆಯು ಉತ್ತಮವಾಗಿದೆ ಎಂದು ಹಲವರು ಹೇಳುತ್ತಿದ್ಧಾರೆ.

ಮಾಹಿತಿ ಪ್ರಕಾರ, ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೊಬ್ಬರಿ ವಹಿವಾಟಿಗೆ ವಿಶ್ವದರ್ಜೆಯ ಮಾರುಕಟ್ಟೆಯಾಗಿದೆ. ಇಲ್ಲಿನ ಬೆಲೆಯೇ ದೇಶದ ಇತರ ಭಾಗಗಳ ಕೊಬ್ಬರಿ ದರವನ್ನು ನಿರ್ಧರಿಸುತ್ತದೆ. ಮಾರುಕಟ್ಟೆಗೆ ಬರುವ ಕೊಬ್ಬರಿಯ ಪ್ರಮಾಣ, ಉತ್ತರ ಭಾರತದ ರಾಜ್ಯಗಳ ಬೇಡಿಕೆ ಮತ್ತು ಹಬ್ಬಗಳ ಸಮಯದಲ್ಲಿ ದರದಲ್ಲಿ ಏರಿಳಿತ ಕಾಣುತ್ತದೆ. ಇದೀಗ ಸದ್ಯ ಇಳಿಕೆಯಾಗಿದ್ದು, ಇದರಿಂದ ತೆಂಗು ಬೆಳೆಗಾರರಲ್ಲಿ ತುಸು ಆತಂಕ ಹೆಚ್ಚಿದೆ. ಮತ್ತೊಂದೆಡೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಭರವಸೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+