ಇತರೆ ರಾಜ್ಯಗಳಂತೆ ಕೇರಳದಲ್ಲಿ ಕೋವಿಡ್‌ ಪ್ರಕರಣ ಕುಸಿದಿಲ್ಲವೇಕೆ?

ತಿರುವನಂತಪುರಂ, ಜು.09: ಕಳೆದ 25 ದಿನಗಳಲ್ಲಿ ಕೇರಳದಲ್ಲಿ 10,000 ರಿಂದ 15,000 ರವರೆಗೆ ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಕೇರಳವೂ ಒಂದಾಗಿದೆ. ಜುಲೈ 8 ರಂದು, 13,772 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ದೇಶದ ಇತರ ಅನೇಕ ಭಾಗಗಳಲ್ಲಿ, ದೈನಂದಿನ ಕೊರೊನಾ ಪ್ರಕರಣಗಳು ಸ್ಥಿರವಾಗಿ ಕುಸಿಯುತ್ತಿದೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಆದರೆ ಜುಲೈ 8 ರಂದು 9,083 ಕೊರೊನಾ ಪ್ರಕರಣಗಳು ವರದಿಯಾಗಿದೆ. ಆದರೆ ಕೇರಳದಲ್ಲಿ ಮಾತ್ರ ಕೊರೊನಾ ಪ್ರಕರಣಗಳು ಏರಿಕೆ ಕಂಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಜುಲೈ 8 ರವರೆಗೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳು (1,17,869) ಇದ್ದು ನಂತರದ ಸ್ಥಾನದಲ್ಲಿ ಕೇರಳ (1,08,400) ಇವೆ. ಆದಾಗ್ಯೂ, ಹಿಂದಿನ ದಿನದ ಡೇಟಾವನ್ನು ಹೋಲಿಸಿದರೆ, ಮಹಾರಾಷ್ಟ್ರದ ಒಟ್ಟು ಸಕ್ರಿಯ ಕೋವಿಡ್ ಪ್ರರಕಣಗಳು 333 ರಷ್ಟು ಏರಿಕೆಯಾಗಿದೆ. ಆದರೆ ಕೇರಳದ ಸಕ್ರಿಯ ಪ್ರಕರಣಗಳು 3,823 ರಷ್ಟು ಏರಿಕೆಯಾಗಿದೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕೇರಳದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಚೇತರಿಕೆ ಹೆಚ್ಚಾಗಿದೆ ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ.

 ಕೇರಳದಲ್ಲಿ ಕೋವಿಡ್‌ ಪ್ರಕರಣ ಕುಸಿಯದಿರಲು ಕಾರಣವೇನು?

ಕೇರಳದಲ್ಲಿ ಕೋವಿಡ್‌ ಪ್ರಕರಣ ಕುಸಿಯದಿರಲು ಕಾರಣವೇನು?

ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದರೂ ಇತರ ರಾಜ್ಯಗಳಲ್ಲಿ ಪ್ರಕರಣ ಇಳಿಕೆ ಕಾಣುತ್ತಿದೆ. ಉದಾಹರಣೆಗೆ, ಮೇ 1 ಮತ್ತು 7 ರ ನಡುವೆ, ದೇಶಾದ್ಯಂತ ಸೋಂಕು ಉತ್ತುಂಗದಲ್ಲಿದ್ದಾಗ, ಕರ್ನಾಟಕ ಮತ್ತು ಕೇರಳದಲ್ಲಿ ಕ್ರಮವಾಗಿ ಸರಾಸರಿ 46,045 ಮತ್ತು 36,239 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳಲ್ಲಿ, ಜೂನ್ 30 ಮತ್ತು ಜುಲೈ 6 ರ ನಡುವೆ, ಕರ್ನಾಟಕ ಮತ್ತು ಕೇರಳದಲ್ಲಿ ಕ್ರಮವಾಗಿ ಸರಾಸರಿ 2,646 ಮತ್ತು 12,226 ಪ್ರಕರಣಗಳು ದಾಖಲಾಗಿವೆ. ಇನ್ನು ಕೇರಳದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಗೆ ತಜ್ಞರು ಕಾರಣವನ್ನು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಜಯಪ್ರಕಾಶ್ ಮುಲಿಯಿಲ್, ಕೇರಳದಲ್ಲಿ ಪತ್ತೆಯಾಗದ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಇರಬೇಕು ಹಾಗೂ ಎರಡು ಜನರ ವರ್ತನೆಯಿಂದಾಗಿ ಆಗಿರಬಹುದು. ಕೇರಳದಲ್ಲಿನ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಹೊಂದಿರುವಾಗ ಅದನ್ನು ಮರೆಮಾಚುವ ಬದಲು ತಾವು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಆಸ್ಪತ್ರೆಗೆ ದಾಖಲಾಗುವುದಿಲ್ಲ, ಆದರೆ ಕೊರೊನಾ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ," ಎಂದು ಹೇಳಿದ್ದಾರೆ.

 ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?

ಕೋವಿಡ್‌ ದತ್ತಾಂಶಗಳ ಮಾತನಾಡಿರುವ ಪಾಲಕ್ಕಾಡ್ ಮೂಲದ ಆಂತರಿಕ ಔಷಧ ತಜ್ಞ ಡಾ.ಅರುಣ್ ಎನ್.ಎಂ, ಕೇರಳ ಮತ್ತು ಇತರ ರಾಜ್ಯಗಳಲ್ಲಿನ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಕೆಲವು ಹೋಲಿಕೆಗಳನ್ನು ತೋರಿಸಿದ್ದಾರೆ. 2020 ರ ಸೆಪ್ಟೆಂಬರ್ ನಂತರ ಕೇರಳದಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಈ ಸಂದರ್ಭದಲ್ಲಿ ಇತರ ರಾಜ್ಯಗಳು ದೈನಂದಿನ ಸೋಂಕುಗಳ ಕುಸಿತವಾಗಿದ್ದವು. "ಮೊದಲ ಅಲೆಯಲ್ಲಿ ಇತರ ರಾಜ್ಯಗಳಂತೆ ಕೇರಳದಲ್ಲೂ ಶೀಘ್ರವಾಗಿ ಏರಿಕೆಯಾಗಿದೆ. ಎರಡನೇ ಅಲೆಯಲ್ಲೂ ಅದೇ ಆಗುತ್ತಿದೆ. ಮೊದಲ ಅಲೆಯಲ್ಲಿ, ಕೇರಳದ ದೈನಂದಿನ ಕೋವಿಡ್‌ ಪ್ರಕರಣಗಳು 2020 ನವೆಂಬರ್ 2021 ರ ಜನವರಿಯವರೆಗೆ ಸುಮಾರು 5,000 ದಿಂದ 6,000 ರವರೆಗೆ ಇದ್ದವು. ಮಾರ್ಚ್ ವೇಳೆಗೆ ದೈನಂದಿನ ಪ್ರಕರಣಗಳು 2,000 ವ್ಯಾಪ್ತಿಗೆ ಇಳಿದವು," ಎಂದು ಡಾ ಅರುಣ್ ವಿವರಿಸುತ್ತಾರೆ.

 ಸಫಲವಾಗಿ ನಿಭಾಯಿಸುತ್ತದೆ ಕೇರಳ ಆರೋಗ್ಯ ವ್ಯವಸ್ಥೆ

ಸಫಲವಾಗಿ ನಿಭಾಯಿಸುತ್ತದೆ ಕೇರಳ ಆರೋಗ್ಯ ವ್ಯವಸ್ಥೆ

"ಕೇರಳದ ಆರೋಗ್ಯ ವ್ಯವಸ್ಥೆಯು ಇದನ್ನು ಸಫಲವಾಗಿ ನಿಭಾಯಿಸಬಲ್ಲದು," ಎಂದು ಡಾ. ಮುಲಿಯಿಲ್ ಹೇಳುತ್ತಾರೆ. ಕೇರಳದ ಆರೋಗ್ಯ ವ್ಯವಸ್ಥೆಯು ಈ ಪರಿಸ್ಥಿತಿಯನ್ನು ನಿಭಾಯಿಸಬಲ್ಲದು. ಕೇರಳಕ್ಕೆ ಆ ಸಾಮರ್ಥ್ಯವಿದೆ. ಅದಕ್ಕೆ ಈ ಹಿಂದಿನ ಎಲ್ಲಾ ಆರೋಗ್ಯ ವ್ಯವಸ್ಥೆಯ ನಿರ್ವಹಣೆಯೇ ಕಾರಣ ಎಂದು ಹೇಳಿದ್ದಾರೆ. ಕೇರಳದಲ್ಲಿ, ಪುನರಾವರ್ತಿತ ಸೋಂಕುಗಳು ಹೆಚ್ಚು ಇಲ್ಲ, ಆದರೆ ಇಲ್ಲಿ ಹೆಚ್ಚಾಗಿ ಹೊಸ ಸೋಂಕುಗಳು ದಾಖಲಾಗುತ್ತಿವೆ ಎಂದು ಕೂಡಾ ಹೇಳಿದ್ದಾರೆ.

Recommended Video

    ಟೀಂ ಇಂಡಿಯಾದ 3 ಆಟಗಾರರಿಗೆ ಇದೆ ಕೊನೆ ಅವಕಾಶ | Oneindia Kannada
     ಎಚ್ಚರವೂ ಅಗತ್ಯ

    ಎಚ್ಚರವೂ ಅಗತ್ಯ

    ಏತನ್ಮಧ್ಯೆ ಪ್ರಕರಣಗಳು ಏರಿಕೆಯಾಗುವುದರ ಬಗ್ಗೆ ತಜ್ಞರು ಕಳವಳಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಸಮಯದಲ್ಲಿ ಮುಂದಿನ ಅಲೆಗೂ ಮುನ್ನ ಗರಿಷ್ಠ ಸಂಖ್ಯೆಯ ಜನಸಂಖ್ಯೆಗೆ ಲಸಿಕೆ ಹಾಕಲು ಸಾಧ್ಯವಾದರೆ, ಅದು ನಮಗೆ ಪ್ರಯೋಜನಕಾರಿಯಾಗಲಿದೆ," ಎಂದು ತಜ್ಞರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಲಾಕ್‌ಡೌನ್ ನಿರ್ಬಂಧಗಳು ಮತ್ತು ವಿಶ್ರಾಂತಿಗಳನ್ನು ಹೆಚ್ಚು ವೈಜ್ಞಾನಿಕವಾಗಿ ಜಾರಿಗೆ ತರಬೇಕು ಎಂದು ತಜ್ಞರು ಒತ್ತಿ ಹೇಳಿದ್ದಾರೆ. ಕೇರಳದಲ್ಲಿ ದೈಹಿಕ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದು ಕೊಂಚ ಕಡಿಮೆಯಾಗುತ್ತಿದೆ ಎಂದಿದ್ದಾರೆ.

    (ಒನ್‌ಇಂಡಿಯಾ ಸುದ್ದಿ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+