ತಿರುವನಂತಪುರ; ಒಂದು ವಾರ ಹೊಸ ಮಾದರಿಯ ಲಾಕ್ ಡೌನ್
ತಿರುವನಂತಪುರಂ, ಜುಲೈ 06 : ಕೇರಳ ರಾಜ್ಯದ ತಿರುವನಂತಪುರದಲ್ಲಿ ಹೊಸ ಮಾದರಿಯ ಲಾಕ್ ಡೌನ್ ಸೋಮವಾರದಿಂದ ಜಾರಿಗೆ ಬಂದಿದೆ. ಒಂದು ವಾರಗಳ ಕಾಲ ಈ ಮಾದರಿಯ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಹಲವು ವಿನಾಯಿತಿಗಳನ್ನು ಕಡಿತಗೊಳಿಸಲಾಗಿದೆ.
Recommended Video
ಸೋಮವಾರ ಬೆಳಗ್ಗೆ 6 ಗಂಟೆಯಿಂದ ಹೊಸ ಮಾದರಿ ಲಾಕ್ ಡೌನ್ ತಿರುವನಂತಪುರಂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ಬಂದಿದೆ. ಪೊಲೀಸರು ರಸ್ತೆಗೆ ಇಳಿದಿದ್ದು, ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಗಾಗಿ ಜನರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಲಾಕ್ ಡೌನ್‌ನಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಹಲವಾರು ರಸ್ತೆಗಳನ್ನು ಬಂದ್ ಮಾಡಲಾಗಿದೆ. ನಗರಕ್ಕೆ ಬರಲು ಮತ್ತು ಹೋಗಲು ಒಂದು ರಸ್ತೆಯನ್ನು ಮಾತ್ರ ತೆರೆಯಲಾಗಿದೆ.

ಕೇರಳ ಸರ್ಕಾರ ಭಾನುವಾರ ಹೊರಡಿಸಿದ ಹೊಸ ಮಾರ್ಗಸೂಚಿ ಅನ್ವಯ ಈ ಲಾಕ್ ಡೌನ್ ಜಾರಿಗೆ ಬಂದಿದೆ. ಒಂದು ವಾರಗಳ ಕಾಲ ಈ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಜನರು ಸಹಕಾರ ನೀಡಬೇಕು ಎಂದು ಮಹಾನಗರ ಪಾಲಿಕೆ ಮನವಿ ಮಾಡಿದೆ.

ತಿರುವನಂತಪುರದಲ್ಲಿ ಇದುವರೆಗೂ 284 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಕೊರೊನಾ ವೈರಸ್ ನಿಯಂತ್ರಣದಲ್ಲಿ ಹೊಸ ಹೊಸ ಕ್ರಮಗಳ ಜೊತೆಗೆ ಕೇರಳ ಸರ್ಕಾರ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ.












Click it and Unblock the Notifications