Get Updates
Get notified of breaking news, exclusive insights, and must-see stories!

ಕೊಚ್ಚಿ: ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ

ಕೊಚ್ಚಿ, ಮೇ 18: ನಟಿ, ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯೂ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಚಕ್ಕರಪರಂಬು ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್ ಮೃತಪಟ್ಟಿದ್ದಾರೆ. ಶೆರಿನ್ ಸಾವಿಗೆ ಮಾಡೆಲಿಂಗ್ ಕ್ಷೇತ್ರದ ಸೆಲೆಬ್ರಿಟಿಗಳು, ಆಪ್ತರು ಆಘಾತ ವ್ಯಕ್ತಪಡಿಸಿದ್ದಾರೆ.

26 ವರ್ಷ ವಯಸ್ಸಿನ ಶೆರಿನ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಮೊದಲಿಗೆ ನೋಡಿದ ಆಕೆಯ ರೂಂಮೇಟ್, ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆಳಪ್ಪುಳ ಜಿಲ್ಲೆ ಮೂಲದ ಶೆರಿನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದರು. ಪ್ರಾಥಮಿಕ ತನಿಖೆ ಬಳಿಕ ಮಾನಸಿಕ ಒತ್ತಡ ಎದುರಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚಕ್ಕರಪರಂಬು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ವರ್ಷ ರೇಡಿಯೋ ಜಾಕಿ, ರೂಪದರ್ಶಿ ಮಂಗಳಮುಖಿ ಅನನ್ಯ ಕುಮಾರಿ ಅಲೆಕ್ಸ್ ಕೂಡಾ ಕೊಚ್ಚಿಯ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಇದೇ ರೀತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Transwoman, Model found dead in apartment in Kerala


ಮೇ 12 ರಂದು, ಕೋಳಿಕ್ಕೋಡ್‌ನ ಯುವ ಮಾಡೆಲ್ ಮತ್ತು ನಟಿ ಸಹನಾ ತನ್ನ 21 ನೇ ಹುಟ್ಟುಹಬ್ಬದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬೆನ್ನಲ್ಲೇ ಶೆರಿನ ಸಾವಿನ ಸುದ್ದಿ ಬಂದಿದೆ. ಈ ಹಿಂದೆ ಅನನ್ಯ ಸಾವು ಕೇರಳವನ್ನು ಕಂಗೆಡಿಸಿತ್ತು. ಆಕೆಯ ಸಾವಿನ ಕುರಿತು ಸತ್ಯಶೋಧನೆಯ ವರದಿಯು ಖಾಸಗಿ ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತ್ತು ಮತ್ತು ರಾಜ್ಯದಲ್ಲಿ ಟ್ರಾನ್ಸ್ ವ್ಯಕ್ತಿಗಳಿಗೆ ಮತ್ತು ವೈದ್ಯಕೀಯ ವೃತ್ತಿಪರರು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲು ಉತ್ತಮ ಆರೋಗ್ಯವನ್ನು ಬಯಸಿದೆ. ಸತ್ಯಶೋಧನಾ ತಂಡವು ಅನನ್ಯ ಎರಡನೇ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದು, ಸಾವಿನ ಬಗ್ಗೆ ಪೊಲೀಸ್ ತನಿಖೆ ಕಳಪೆಯಾಗಿದೆ ಎಂದು ತಿಳಿಸಿತ್ತು.

ಕೇರಳ ಆತ್ಮಹತ್ಯಾ ತಡೆ ಸಹಾಯವಾಣಿ:

Maithri: 0484 2540530

Chaithram: 0484 2361161

Both are 24-hour helpline numbers.

Recommended Video

      ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

      Aasara offers support to individuals and families during an emotional crisis, for those dealing with mental health issues and suicidal ideation, and to those undergoing trauma after the suicide of a loved one.

      24x7 Helpline: 9820466726

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+