ಇರುಮುಡಿಯಿಲ್ಲದೆ ಮೆಟ್ಟಲೇರಿ ಶಬರಿಮಲೆ ಸಂಪ್ರದಾಯ ಮುರಿದ ಆರೆಸ್ಸೆಸ್ ಮುಖಂಡ

ತಿರುವನಂತಪುರಂ, ನವೆಂಬರ್ 6: ಋತುಮತಿಯಾಗುವ ವಯಸ್ಸಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶಿಸಬಾರದು ಎಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಆರೆಸ್ಸೆಸ್ ಮುಖಂಡರೊಬ್ಬರು ಸ್ವತಃ ಅಲ್ಲಿನ ಸಂಪ್ರದಾಯ ಮುರಿದಿರುವುದು ಫೋಟೊಗಳಲ್ಲಿ ಪತ್ತೆಯಾಗಿದೆ.

ಮುಟ್ಟಾಗುವ ವಯಸ್ಸಿನ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಭಾಗಕ್ಕೆ ಬರುವಂತಿಲ್ಲ. ಹಾಗೆ ಪ್ರವೇಶ ಪಡೆಯುವುದು ಸಂಪ್ರದಾಯಕ್ಕೆ ವಿರುದ್ಧ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಆದರೆ, ಆರೆಸ್ಸೆಸ್ ಮುಖಂಡ ವಲ್ಸನ್ ತಿಲಂಕೇರಿ ಇರುಮುಡಿ ಇಲ್ಲದೆಯೇ ಪವಿತ್ರ ಮೆಟ್ಟಿಲಿನಲ್ಲಿ ಕಾಣಿಸಿಕೊಂಡಿದ್ದಾರೆ.

RSS man violate tradition of idumudi kettu ayyappa holy steps sabarimala

ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳಲು ಪವಿತ್ರ 18 ಮೆಟ್ಟಿಲುಗಳನ್ನು ಏರಬೇಕು. ಆಗ ನೆತ್ತಿಯ ಮೇಲೆ ಇರುಮುಡಿ ಗಂಟನ್ನು ಇರಿಸಿಕೊಳ್ಳುವುದು ಕಡ್ಡಾಯ ಆಚರಣೆ. ಇರುಮುಡಿ ಇಲ್ಲದೆ ಇದ್ದರೆ 18 ಮೆಟ್ಟಿಲನ್ನು ಏರಲು ಅವಕಾಶವಿಲ್ಲ.

ಆದರೆ, ಶಬರಿಮಲೆಯೊಳಗೆ ಮಹಿಳೆಯರು ಪ್ರವೇಶ ಪಡೆಯುವುದನ್ನು ವಿರೋಧಿಸಿ ವಲ್ಸನ್ ಪ್ರತಿಭಟನೆ ನಡೆಸುವಾಗ ಮೆಟ್ಟಿಲಿನ ಮೇಲೆ ಇರುಮುಡಿ ಇಲ್ಲದೆ ಸಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ದೇವಸ್ಥಾನದ ಒಳಗೆ 52 ವರ್ಷದ ಮಹಿಳೆ ಲಲಿತಾ ಎಂಬುವವರನ್ನು ಪೂಜೆ ಸಲ್ಲಿಸಲು ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು. ಪೂಜೆ ಬಳಿಕ ಲಲಿತಾ ಅವರು ಅಸ್ವಸ್ಥಗೊಂಡಿದ್ದರು. ಈ ವೇಳೆ ವಲ್ಸನ್ ಅವರೊಂದಿಗೆ ಪೊಲೀಸರು ಕೂಡ ಚರ್ಚೆ ನಡೆಸಿದ್ದರು ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+