ದೇಶದಲ್ಲಿ ಆಮ್ಲಜನಕಕ್ಕೆ ಹಾಹಾಕಾರ; ಕೇರಳದಲ್ಲಿ ಮಾತ್ರ ಅಭಾವವಿಲ್ಲ ಏಕೆ?

ತಿರುವನಂತಪುರಂ, ಏಪ್ರಿಲ್ 28: ಇಡೀ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಕಾಡುತ್ತಿದೆ. ಜೊತೆಗೆ ವೈದ್ಯಕೀಯ ಆಮ್ಲಜನಕಕ್ಕೆ ತೀವ್ರ ಅಭಾವ ಸೃಷ್ಟಿಯಾಗಿದ್ದು, ಹಲವು ರಾಜ್ಯಗಳು ಕೇಂದ್ರದ ಮೊರೆಹೋಗಿವೆ.

ಸಾವಿರಾರು ಕೊರೊನಾ ರೋಗಿಗಳು ಆಮ್ಲಜನಕಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ದೇಶದ ಪರಿಸ್ಥಿತಿ ಹೀಗಿರುವಾಗ ಕೇರಳದಲ್ಲಿ ಮಾತ್ರ ಚಿತ್ರಣ ಭಿನ್ನವಾಗಿದೆ. ದೇಶದ ಬಹುಪಾಲು ರಾಜ್ಯಗಳಲ್ಲಿ ಆಮ್ಲಜನಕ ಕೊರತೆ ಇದ್ದರೂ, ಕೇರಳದಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ಅಷ್ಟೇ ಅಲ್ಲದೇ ತನ್ನ ನೆರೆ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಕೇರಳ ಆಮ್ಲಜನಕ ಪೂರೈಕೆ ಮಾಡುತ್ತಿದೆ. ಆಮ್ಲಜನಕಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ದೆಹಲಿಗೂ ಆಮ್ಲಜನಕ ಪೂರೈಸುವುದಾಗಿ ಕೇರಳ ಸರ್ಕಾರ ತಿಳಿಸಿದೆ. ಮುಂದೆ ಓದಿ...

 ವರ್ಷದಲ್ಲಿ ಬೇರೆಯಾದ ಚಿತ್ರಣ

ವರ್ಷದಲ್ಲಿ ಬೇರೆಯಾದ ಚಿತ್ರಣ

ಕೇರಳದಲ್ಲಿ ವರ್ಷದ ಹಿಂದಿನ ಚಿತ್ರಣ ಹೀಗಿರಲಿಲ್ಲ. 2019ರವರೆಗೂ ಕೇರಳ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕದ ಮೇಲೆ ದ್ರವ ರೂಪದ ವೈದ್ಯಕೀಯ ಆಮ್ಲಜನಕಕ್ಕೆ ಅವಲಂಬಿತವಾಗಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯದ್ದೇ ಇದೆ. ಕೇರಳದಲ್ಲಿನ ಆಮ್ಲಜನಕ ಉತ್ಪಾದನಾ ಘಟಕಗಳು ರಾಜ್ಯಕ್ಕೆ ಬೇಕಾದಷ್ಟು ಆಮ್ಲಜನಕವನ್ನು ಪೂರೈಸುತ್ತಿವೆ.

 ಕೇರಳವನ್ನೂ ಕಾಡುತ್ತಿದೆ ಕೊರೊನಾ ಎರಡನೇ ಅಲೆ

ಕೇರಳವನ್ನೂ ಕಾಡುತ್ತಿದೆ ಕೊರೊನಾ ಎರಡನೇ ಅಲೆ

ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವುದು ಕೇರಳದಲ್ಲಿ. ಕೊರೊನಾ ಎರಡನೇ ಅಲೆ ಕೇರಳವನ್ನೂ ಅತಿಯಾಗಿಯೇ ಕಾಡುತ್ತಿದೆ. ಸಕ್ರಿಯ ಪ್ರಕರಣಗಳಲ್ಲಿ ಸದ್ಯಕ್ಕೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ನಂತರ ಕೇರಳ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇಲ್ಲಿನ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 100 ಟನ್ ವೈದ್ಯಕೀಯ ಆಮ್ಲಜನಕದ ಅಗತ್ಯವಿದ್ದು, 204 ಟನ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

 ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುವುದಾಗಿ ತಿಳಿಸಿದ್ದ ಕಾರ್ಯಪಡೆ

ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುವುದಾಗಿ ತಿಳಿಸಿದ್ದ ಕಾರ್ಯಪಡೆ

ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 2020ರಲ್ಲಿ ಮೊದಲ ಪ್ರಕರಣ ಕಂಡುಬಂದಿತ್ತು. ಚೀನಾದ ವುಹಾನ್‌ನಿಂದ ಕೇರಳಕ್ಕೆ ಮರಳಿದವರಲ್ಲಿ ಸೋಂಕು ಕಂಡುಬಂದಿತ್ತು. ಕಳೆದ ಮಾರ್ಚ್‌ನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು, ಕೊರೊನಾ ಕಾರ್ಯಪಡೆ ಸಿದ್ಧಗೊಳಿಸಲಾಗಿತ್ತು. ಭವಿಷ್ಯದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುವುದಾಗಿ ಕಾರ್ಯಪಡೆ ತಿಳಿಸಿತ್ತು.

ಕೊರೊನಾ ನಿರ್ವಹಣೆ ಕುರಿತು ತನ್ನ ಹಿಂದಿನ ಅನುಭವಗಳಿಂದ ಅರಿತುಕೊಂಡಿರುವ ಕೇರಳ ಸರ್ಕಾರ, ಆಕ್ಸಿಜನ್ ಬೆಂಬಲಿತ ಐಸಿಯು ಬೆಡ್‌ಗಳ ಸಂಖ್ಯೆಯನ್ನು ಏರಿಸಿದೆ. ಈಗ ಕೇರಳದ ಬಹುಪಾಲು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಂಬಲಿತ ಹಾಸಿಗೆಗಳಿವೆ.

 60% ಆಮ್ಲಜನಕ ಉತ್ಪಾದನೆ ಹೆಚ್ಚಿಸಿದ ಕೇರಳ

60% ಆಮ್ಲಜನಕ ಉತ್ಪಾದನೆ ಹೆಚ್ಚಿಸಿದ ಕೇರಳ

ಸದ್ಯಕ್ಕೆ ಕೇರಳದಲ್ಲಿ ಈಗ 23 ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಎರಡು ವರ್ಷಗಳ ಹಿಂದೆ ಈ ಘಟಕಗಳು ನಿರ್ಮಿತವಾಗಿವೆ. ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕೇರಳ ಆಮ್ಲಜನಕ ಉತ್ಪಾದನೆಯನ್ನು 60% ಹೆಚ್ಚಿಸಿತ್ತು. ಸಾರ್ವಜನಿಕ ವಲಯ ಘಟಕ, ಕೇರಳ ಮಿನರಲ್ ಹಾಗೂ ಮೆಟಲ್ ಲಿಮಿಟೆಡ್, ಐನಾಕ್ಸ್‌, ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದವು.

ಆಮ್ಲಜನಕ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಸದ್ಯಕ್ಕೆ ರಾಜ್ಯದಲ್ಲಿನ ಎಲ್ಲಾ ಘಟಕಗಳು 100% ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ವಾರಗಳಲ್ಲಿ ಆಮ್ಲಜನಕಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+