ಕಣ್ಣೂರು: ಬಸ್ ಹತ್ತಲು ಹೋಗಿ ಬಿದ್ದು 6 ತಿಂಗಳ ಗರ್ಭಿಣಿ ಸಾವು

ತಿರುವನಂತಪುರಂ, ಸೆಪ್ಟೆಂಬರ್04: ಬಸ್ ಹತ್ತಲು ಹೋಗಿ ಆಯತಪ್ಪಿ ಬಿದ್ದು 6 ತಿಂಗಳ ಗರ್ಭಿಣಿ ಮೃತಪಟ್ಟರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ದಿವ್ಯಾ (27) ಮೃತ ನರ್ಸ್. ದಿವ್ಯಾ ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದಿವ್ಯಾ ಮನೆಯ ಸಮೀಪವಿರುವ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ದಿವ್ಯಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆಗ ಬಸ್ ಕೆಲವು ಮೀಟರ್ ಮುಂದೆ ಹೋಗಿ ನಿಲ್ಲಿಸಿದೆ. ಆಗ ನರ್ಸ್ ಬಸ್ಸಿನ ಕಡೆಗೆ ಓಡಿ ಹೋಗುತ್ತಿದ್ದಾಗ ರಸ್ತೆಯ ಮೇಲೆ ಬಿದ್ದಿದ್ದಾರೆ. ಬಸ್ ನಿಲ್ದಾಣದ ಬಳಿ ಡ್ರಾಪ್ ಮಾಡಲು ಬಂದಿದ್ದ ಪತಿ ವಿನು ಎದುರೇ ಬಿದ್ದಿದ್ದಾರೆ. ತಕ್ಷಣ ಪತಿ ವಿನು ಸ್ಥಳದಲ್ಲಿದ್ದವರ ಸಹಾಯದಿಂದ ದಿವ್ಯಾರನ್ನು ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲಿಯೇ ದಿವ್ಯಾ ಮೃತಪಟ್ಟಿದ್ದರು.

 Pregnant Woman Dies After She Falls Down While Trying To Catch Bus

ಸದ್ಯಕ್ಕೆ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿವ್ಯಾ ಪ್ರತಿದಿನ ಒಂದೇ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಬಸ್ ನಿಲ್ದಾಣಕ್ಕೆ ಪತಿ ವಿನು ಬೈಕ್ ಅಥವಾ ಕಾರಿನಲ್ಲಿ ಡ್ರಾಪ್ ಮಾಡುತ್ತಿದ್ದು, ನಂತರ ಬಸ್ ಹತ್ತಿ ಆಸ್ಪತ್ರೆಗೆ ಹೋಗುತ್ತಿದ್ದರು. ಸದ್ಯಕ್ಕೆ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ. . ಕೋವಿಡ್ 19 ಪರೀಕ್ಷೆಯನ್ನು ನಡೆಸಿದ ನಂತರ ಅಂತ್ಯಕ್ರಿಯೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ದಿವ್ಯಾ ತಲೆಗೆ ತೀವ್ರವಾಗಿ ಗಾಯವಾಗಿದ್ದಕ್ಕೆ ಮೃತಪಟ್ಟಿದ್ದಾರೆ. ಆದರೆ ಆಕೆಯ ತಲೆಗೆ ಹೇಗೆ ಪೆಟ್ಟಾಯಿತು ಎಂಬುದು ಸ್ಪಷ್ಟವಾಗಿಲ್ಲ. ಕೆಳಗೆ ಬಿದ್ದಾಗ ಬಸ್ಸಿಗೆ ತಲೆ ಹೊಡೆಯಿತಾ ಅಥವಾ ರಸ್ತೆಯ ಮೇಲೆ ಬಿದ್ದಿದ್ದರಿಂದ ಪೆಟ್ಟಾಯಿತ ಎಂಬುದು ತಿಳಿದುಬಂದಿಲ್ಲ.

ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದೇವೆ. ಅದರಲ್ಲೂ ಸ್ಪಷ್ಟವಾಗಿ ಕಾಣಿಸಿಲಿಲ್ಲ. ಹೀಗಾಗಿ ಬಸ್ ಪ್ರಯಾಣಿಕರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+