ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮ ಲಾಠಿಗಳಿಗೆ ನಾವು ಹೆದರುವುದಿಲ್ಲ': ಕೇರಳದಲ್ಲಿ ಮೋದಿ ಹೇಳಿಕೆ

|
Google Oneindia Kannada News

ಪಾಲಕ್ಕಾಡ್, ಮಾರ್ಚ್ 30: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಪಾಲಕ್ಕಾಡ್‌ಗೆ ಮಂಗಳವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಅವರ ಪರ ಪ್ರಚಾರ ನಡೆಸಿದರು.

'ಮುಂದಿನ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ನಿಮ್ಮ ಆಶೀರ್ವಾದ ನೀಡುವಂತೆ ಕೇಳಲು ಇಂದು ನಾನು ನಿಮ್ಮ ನಡುವೆ ಇದ್ದೇನೆ. ಕೇರಳದಲ್ಲಿನ ಪ್ರಸ್ತುತ ಸನ್ನಿವೇಶಕ್ಕಿಂತ ವಿಭಿನ್ನ ಸ್ಥಿತಿ ನಿರ್ಮಿಸುವ ದೃಷ್ಟಿಕೋನದೊಂದಿಗೆ ನಾನು ಇಲ್ಲಿದ್ದೇನೆ' ಎಂದ ಅವರು ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧಪಕ್ಷ ಯುಡಿಎಫ್ ವಿರುದ್ಧ ವಾಗ್ದಾಳಿ ನಡೆಸಿದರು.

'ಬೆಳ್ಳಿಯ ಕೆಲವು ತುಣುಕುಗಳಿಗಾಗಿ ಏಸುಕ್ರಿಸ್ತನಿಗೆ ಜುಡಾಸ್ ದ್ರೋಹ ಮಾಡಿದರು. ಅದೇ ರೀತಿ ಚಿನ್ನದ ಕೆಲವು ತುಣುಕುಗಳಿಗಾಗಿ ಎಲ್‌ಡಿಎಫ್ ಕೇರಳಕ್ಕೆ ದ್ರೋಹ ಎಸಗಿದೆ' ಎಂದು ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಉಲ್ಲೇಖಿಸಿ ಪ್ರಧಾನಿ ಟೀಕಿಸಿದರು.

ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪದ ಬಳಸಿದ ಮಾಜಿ ಸಂಸದರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪದ ಬಳಸಿದ ಮಾಜಿ ಸಂಸದ

ಕೇರಳ ರಾಜಕಾರಣದ ಅತ್ಯಂತ ಕೆಟ್ಟ ರಹಸ್ಯವೆಂದರೆ ಹಲವು ವರ್ಷಗಳಿಂದ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಇದ್ದ ಸ್ನೇಹಪೂರ್ವಕ ಒಪ್ಪಂದ. ಇದೇನು ಮ್ಯಾಚ್ ಫಿಕ್ಸಿಂಗ್? ಎಂದು ಈಗ ಮೊದಲ ಬಾರಿ ಮತ ಹಾಕುವವರು ಪ್ರಶ್ನಿಸುತ್ತಿದ್ದಾರೆ. ಯುಡಿಎಫ್ ಮತ್ತು ಎಲ್‌ಡಿಎಫ್ ಎರಡೂ ತಮ್ಮನ್ನು ಹೇಗೆ ತಪ್ಪುದಾರಿಗೆ ಎಳೆದಿವೆ ಎಂಬುದನ್ನು ಜನರು ಈಗ ನೋಡುತ್ತಿದ್ದಾರೆ ಎಂದು ಹೇಳಿದರು. ಮುಂದೆ ಓದಿ.

ಎಡಪಕ್ಷಗಳ ಜತೆ ಕಾಂಗ್ರೆಸ್ ಮೈತ್ರಿ

ಎಡಪಕ್ಷಗಳ ಜತೆ ಕಾಂಗ್ರೆಸ್ ಮೈತ್ರಿ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದಾಗಿವೆ. ಯುಪಿಎ 1ರ ಅವಧಿಯಲ್ಲಿಯೂ ಅವರು ದೆಹಲಿಯಲ್ಲಿ ಆಡಳಿತ ನಡೆಸಿದ್ದರು. ಯುಪಿಎ-2ರ ಅವಧಿಯಲ್ಲಿ ಎಡಪಕ್ಷವು ವಿಚಾರ ಆಧಾರಿತ ಬೆಂಬಲವನ್ನು ಕಾಂಗ್ರೆಸ್‌ಗೆ ನೀಡಿತ್ತು. ಆದರೆ ಕೇರಳದಲ್ಲಿ ಈಗ ಚುನಾವಣೆ ವೇಳೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶ್ರೀಧರನ್ ಕೇರಳದ ನೈಜ ಮಗ

ಶ್ರೀಧರನ್ ಕೇರಳದ ನೈಜ ಮಗ

'ಮೆಟ್ರೋ ಮ್ಯಾನ್' ಶ್ರೀಧರನ್ ಅವರು, ಭಾರತವನ್ನು ಆಧುನಿಕಗೊಳಿಸಲು ಮತ್ತು ಸಂರ್ಪಕವನ್ನು ಸುಧಾರಿಸಲು ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. ಕೇರಳದ ಪ್ರಗತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಅವರನ್ನು ಎಲ್ಲ ವರ್ಗದವರೂ ಮೆಚ್ಚಿಕೊಳ್ಳುತ್ತಾರೆ. ಕೇರಳದ ನೈಜ ಮಗನಾದ ಅವರು ಅಧಿಕಾರದಾಚೆ ಆಲೋಚಿಸುತ್ತಾರೆ. ಕೇರಳದ ತಮ್ಮ ಬದ್ಧತೆಗಾಗಿ ದೃಢವಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಕೇರಳ ಸಿಎಂ ಮತ್ತು ಪ್ರಧಾನಿ ಮೋದಿ ನಡುವೆ ರಹಸ್ಯ ಒಪ್ಪಂದ: ಕಾಂಗ್ರೆಸ್ ಆರೋಪಕೇರಳ ಸಿಎಂ ಮತ್ತು ಪ್ರಧಾನಿ ಮೋದಿ ನಡುವೆ ರಹಸ್ಯ ಒಪ್ಪಂದ: ಕಾಂಗ್ರೆಸ್ ಆರೋಪ

ಎಂಎಸ್‌ಪಿ ನೀಡಿದ್ದು ನಮ್ಮ ಸರ್ಕಾರ

ಎಂಎಸ್‌ಪಿ ನೀಡಿದ್ದು ನಮ್ಮ ಸರ್ಕಾರ

ಕೃಷಿಯ ಬೆಳವಣಿಗೆ ಮತ್ತು ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅನೇಕ ವರ್ಷಗಳಿಂದ ಹಿಂದಿನ ಸರ್ಕಾರಗಳು ಎಂಎಸ್‌ಪಿ ಹೆಚ್ಚಳದ ಭರವಸೆ ನೀಡುತ್ತಿದ್ದವು. ಆದರೆ ರೈತರಿಗೆ ಎಂಎಸ್‌ಪಿ ಏರಿಕೆಯ ಗೌರವವನ್ನು ನೀಡಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

ಕೇರಳ ಮತ್ತು ಪ್ರವಾಸೋದ್ಯಮ ಬಹಳ ಸಮೀಪದ ನಂಟು ಹೊಂದಿವೆ. ಆದರೆ ಬೇಸರದ ಸಂಗತಿಯೆಂದರೆ ಎಲ್‌ಡಿಎಫ್ ಮತ್ತು ಯುಡಿಎಫ್‌ಗಳು ಇಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚೇನೂ ಮಾಡಿಲ್ಲ. ನಾವು ಬೆಳವಣಿಗೆಗೆ ಮೂಲ ಆಧಾರವನ್ನಾಗಿ ತಂತ್ರಜ್ಞಾನವನ್ನು ಬಳಸಲು ಬಯಸುತ್ತೇವೆ.

ನಾವು ಸುಮ್ಮನಿರುವುದಿಲ್ಲ

ನಾವು ಸುಮ್ಮನಿರುವುದಿಲ್ಲ

ನಿಮ್ಮ ಲಾಠಿಗಳು ನಮ್ಮನ್ನು ಹೆದರಿಸಲಾರವು ಎಂದು ಎಲ್‌ಡಿಎಫ್ ಮತ್ತು ಯುಡಿಎಫ್‌ಗಳಿಗೆ ನಾನು ಹೇಳಲು ಬಯಸುತ್ತೇನೆ. ನೀವು ನಮ್ಮ ಸಂಸ್ಕೃತಿಯನ್ನು ನಿಂದಿಸಿದರೆ ನಾವು ಮೂಕ ಪ್ರೇಕ್ಷಕರಾಗಿರುವುದಿಲ್ಲ. ನಮ್ಮ ರಾಜ್ಯ ಅಧ್ಯಕ್ಷ ಸುರೇಂದ್ರನ್ ಅವರನ್ನು ಕೇರಳ ಸರ್ಕಾರ ಬಂಧಿಸಿ ಕೆಟ್ಟದಾಗಿ ನಡೆಸಿಕೊಂಡಿತು. ಅವರು ಮಾಡಿದ ಅಪರಾಧವೇನು? ಅವರು ಕೇರಳದ ಸಂಪ್ರದಾಯಗಳ ಪರವಾಗಿ ಮಾತನಾಡಿದ್ದಷ್ಟೇ ಎಂದು ಮೋದಿ ಕಿಡಿಕಾರಿದರು.

Recommended Video

Delhi capitals ತಂಡದ ನಾಯಕನ ಘೋಷಣೆ ಇಂದು | Oneindia Kannada
ಮಾಸ್ಟರಲ್ ಪ್ಲ್ಯಾನ್ ಸಿದ್ಧ

ಮಾಸ್ಟರಲ್ ಪ್ಲ್ಯಾನ್ ಸಿದ್ಧ

ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್, 'ಈ ಕ್ಷೇತ್ರಕ್ಕೆ ನಾನು ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದೇನೆ. ದಿನದ 24 ಗಂಟೆಯು ನೀರು ಪೂರೈಕೆ, ತ್ಯಾಜ್ಯದ ಸಮರ್ಪಕ ಮರುಬಳಕೆ ಯೋಜನೆ, ಮುಂದಿನ ಐದು ವರ್ಷಗಳಲ್ಲಿ 25 ಲಕ್ಷ ಮರಗಳನ್ನು ಬೆಳೆಸುವುದು ಇದರಲ್ಲಿ ಸೇರಿವೆ' ಎಂದು ತಿಳಿಸಿದರು.

English summary
kerala assembly election 2021: PM Narendra Modi has campaigned for Palakkad BJP canidate Metro Man E Sreedharan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X