'ಮೋದಿ ಅವರದು ತಮ್ಮ ಗೆಳೆಯರಿಗೆ ಗರಿಷ್ಠ ಆದಾಯ ಖಾತ್ರಿ'
ಕೊಚ್ಚಿ (ಕೇರಳ), ಜನವರಿ 29: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹದಿನೈದು ಮಂದಿ ಸದಸ್ಯರಿಗೆ ಗರಿಷ್ಠ ಆದಾಯದ ಖಾತ್ರಿ ಒದಗಿಸಿದ್ದಾರೆ. ನೀವು ಅನಿಲ್ ಅಂಬಾನಿಯಾದರೆ ನಿಮಗೆ ಗರಿಷ್ಠ ಆದಾಯ ಗಳಿಸುವ ಖಾತ್ರಿ ಇರುತ್ತದೆ. ನಾವು ಎಲ್ಲ ಭಾರತೀಯರಿಗೂ ಕನಿಷ್ಠ ಆದಾಯದ ಖಾತ್ರಿ ನೀಡಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾವು ಚುನಾವಣೆ ಗೆದ್ದ ಮೂರು ರಾಜ್ಯಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ಕಳೆದ ಐದು ವರ್ಷಗಳಲ್ಲಿ ರೈತರ ವಿರುದ್ಧ ನರೇಂದ್ರ ಮೋದಿ ಅವರ ಸರಕಾರ ಮಾಡಿದ ಅಪರಾಧಗಳನ್ನು ಸರಿಪಡಿಸುವುದಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಪ್ರತಿ ಚುನಾವಣೆಯಲ್ಲೂ ನಾವು ಇದನ್ನು ಖಾತ್ರಿ ಪಡಿಸಿಕೊಳ್ಳುತ್ತೇವೆ. ಮಹಿಳೆಯರು ಹಾಗೂ ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ನಾಯಕತ್ವದ ಸ್ಥಾನದಲ್ಲಿ ಮಹಿಳೆಯರನ್ನು ನೋಡಲು ಬಯಸುತ್ತೇವೆ. ಕೇರಳದ ನಾಯಕರಿಗೆ ಅಪಾರವಾದ ಸಾಮರ್ಥ್ಯ ಇದೆ ಎಂಬುದು ನನಗೆ ಗೊತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications