ಎಚ್ಚರ: ಯಾವುದೇ ಲಕ್ಷಣವಿಲ್ಲ, ಆದರೂ ಕೊರೊನಾ ಪಾಸಿಟಿವ್

ತಿರುವನಂತಪುರಂ, ಏಪ್ರಿಲ್ 7: ಇಬ್ಬರಿಗೆ ಕೊರೊನಾ ವೈರಸ್‌ನ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ವೇಳೆ ಪಾಸಿಟಿವ್ ಬಂದಿದ್ದು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ.

ಹೌದು ಸಾಮಾನ್ಯವಾಗಿ ಕೆಮ್ಮು, ಶೀತ, ಕಫ, ಜ್ವರ ಕೊವಿಡ್ 19 ರೋಗದ ಲಕ್ಷಣವಾಗಿದೆ. ಆದರೆ ಈ ಯುವಕನಿಗೆ ಅದ್ಯಾವ ಲಕ್ಷಣವೂ ಕಂಡುಬಂದಿಲ್ಲ.

ತಿರುವನಂತಪುರಂನಿಂದ 100 ಕಿ.ಮೀ ದೂರದಲ್ಲಿರುವ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.ಓರ್ವ 60 ವರ್ಷದ ವ್ಯಕ್ತಿಯಾಗಿದ್ದು ದುಬೈನಿಂದ ಪಟ್ಟಣಂತಿಟ್ಟಕ್ಕೆ ಬಂದವರಾಗಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿಯಾಗಿದ್ದು ದೆಹಲಿಯಿಂದ ಊರಿಗೆ ಬಂದಿದ್ದರು. ಆದರೆ ಇವರಿಗೆ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಬೇರೆ ಕಡೆಯಿಂದ ಬಂದಿದ್ದ ಕಾರಣ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು.

Man With No Corona Symptoms Test Positive In Kerala

ಎಷ್ಟೋ ಮಂದಿ ಹೀಗೆ ಕೊರೊನಾ ಲಕ್ಷಣವಿಲ್ಲದವರ ಜೊತೆಗೆ ಸಂಪರ್ಕದಲ್ಲಿದ್ದು ಅವರ ಪ್ರಾಣವನ್ನು ಅಪಾಯಕ್ಕೆ ಸಿಲುಕುವಂತೆ ಮಾಡಿಕೊಳ್ಳುತ್ತಿದ್ದಾರೆ. 14 ದಿನಗಳು ಕ್ವಾರಂಟೈನ್‌ನಲ್ಲಿದ್ದರೂ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. 60 ವರ್ಷದ ವ್ಯಕ್ತಿ ಮಾರ್ಚ್ 19 ರಿಂದ ಏಪ್ರಿಲ್ 6ರವರೆಗೆ ಕ್ವಾರಂಟೈನ್‌ನಲ್ಲಿದ್ದರು. ಯಾವುದೇ ಲಕ್ಷಣ ಕಾಣಿಸಿಕೊಳ್ಳದ ಕಾರಣ ಮನೆಗೆ ಹಿಂದಿರುಗಿದ್ದರು.

ವಿದ್ಯಾರ್ಥಿ ಮಾರ್ಚ್ 15ರಂದು ರೈಲಿನ ಮೂಲಕ ಊರಿಗೆ ಬಂದಿದ್ದ. ಮನೆಗೆ ಬಸ್‌ನಲ್ಲಿ ಬಂದಿದ್ದ, ಬಳಿಕ ಏಪ್ರಿಲ್ 4ರವರೆಗೆ ಆಸ್ಪತ್ರೆಯಲ್ಲಿಟ್ಟುಕೊಳ್ಳಳಾಗಿತ್ತು. ಇಷ್ಟು ದಿನಗಳ ಬಳಿಕ ಈಗ ಕೊರೊನಾ ಪಾಸಿಟಿವ್ ಬಂದಿದೆ.

ಭಾರತದಲ್ಲಿ ಒಟ್ಟು 4421 ಕೊರೊನಾ ಪ್ರಕರಣಗಳಿವೆ. 114 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 327 ಮಂದಿ ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ 58 ಮಂದಿ ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+