ಪ್ರೀತಿಗೆ ಒಪ್ಪದ ಯುವತಿ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹೊತ್ತಿಸಿದ ಯುವಕ

ತಿರುವಲ್ಲ (ಕೇರಳ), ಮಾರ್ಚ್ 12: ಯುವತಿ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹತ್ತಿಸಿದ ಹದಿನೆಂಟು ವರ್ಷದ ಯುವಕನನ್ನು ಮಂಗಳವಾರ ಕೇರಳ ಪೊಲೀಸರು ಬಂಧಿಸಿದ್ದಾರೆ. ಅಜಿನ್ ರೆಜಿ ಮಾಥ್ಯೂ ಆರೋಪಿ. ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ ಕಾರಣಕ್ಕೆ ರೇಡಿಯಾಲಜಿ ವಿದ್ಯಾರ್ಥಿನಿ -ಹದಿನೆಂಟರ ಹರೆಯದ ಯುವತಿ ಮೇಲೆ ಆತ ಸಿಟ್ಟಾಗಿದ್ದ.

ಈ ಘಟನೆಯು ಪಥನಂಥಿಟ್ಟ ಜಿಲ್ಲೆಯ ತಿರುವಲ್ಲ ಪಟ್ಟಣದಲ್ಲಿ ನಡೆದಿದೆ. ಯುವಕ ಹಾಗೂ ಯುವತಿ ಒಟ್ಟಿಗೆ ನಡೆದು ಹೋಗುತ್ತಿದ್ದರು. ಯುವಕ ದಿಢೀರನೆ ಪೆಟ್ರೋಲ್ ನ ಬಾಟಲ್ ತೆರೆದು, ಆಕೆಯ ಮೇಲೆ ಸುರಿದು, ಬೆಂಕಿ ಹೊತ್ತಿಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆ ಯುವತಿಯು ಶೇಕಡಾ ಅರವತ್ತರಷ್ತು ಸುಟ್ಟು ಹೋಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

Mathew

ಆರೋಪಿ ಅಜಿನ್ ರೆಜಿ ಮಾಥ್ಯೂ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಹಾಗೂ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದ ವೇಳೆ ಸ್ಥಳದಲ್ಲಿ ಇದ್ದ ಅನೇಕರು ದಿಗ್ಭ್ರಾಂತರಾಗಿದ್ದು, ಮಾಥ್ಯೂಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+