ಕೇರಳದಲ್ಲಿ ಕೊರೊನಾ ವೈರಸ್‌ಗೆ ಮೊದಲ ಸಾವು

ತಿರುವನಂತಪುರಂ, ಮಾರ್ಚ್ 28: ಕೇರಳದಲ್ಲಿ ಕೊರೊನಾ ವೈರಸ್ ಮೊದಲ ಬಲಿ ಪಡೆದಿದೆ.

Recommended Video

      ಜೂನ್ ವರೆಗೂ ಮುಂದುವರೆಯಲಿದೆ ಲಾಕ್ ಡೌನ್ | Netherland | Lockdown till | june | Oneindia kannada

      69 ವರ್ಷದ ವ್ಯಕ್ತಿ ಎರ್ನಾಕುಲಮ್‌ನಲ್ಲಿ ಮೃತಪಟ್ಟಿದ್ದಾರೆ. ಅವರು ಮಾರ್ಚ್ 16ರಂದು ದುಬೈನಿಂದ ಕೇರಳಕ್ಕೆ ಆಗಮಿಸಿದ್ದರು. ಮಾರ್ಚ್ 23ರಂದು ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

      ಕೇರಳದಲ್ಲಿ ಇದುವರೆಗೆ 176 ಮಂದಿಗೆ ಕೊರೊನಾ ಸೋಂಕು ತಗುಲಿದೆ. ದೇಶದಲ್ಲಿ ಇದುವರೆಗೆ 20 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ. ಮೃತರಿಗೆ ಹೃದಯ ಸಂಬಂಧಿ ತೊಂದರೆ ಇತ್ತು.

      Kerala Reports First Death Of Coronavirus

      ಅವರ ಕುಟುಂಬದವರನ್ನೂ ಪರೀಕ್ಷೆಗೊಳಪಡಿಸಲಾಗಿದೆ ಎಂದು ಕೇರಳ ಸಚಿವ ವಿಎಸ್ ಸುನಿಲ್ ಕುಮಾರ್ ತಿಳಿಸಿದ್ದಾರೆ.

      ಶುಕ್ರವಾರವಷ್ಟೇ ಕರ್ನಾಟಕದ ತುಮಕೂರಿನಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದರು. ಅವರಿಗೆ ದೆಹಲಿಗೆ ಹೋಗಿ ಬರುವಾಗ ವೈರಸ್ ಗುಣಲಕ್ಷಣಗಳು ಕಾಣಿಸಿಕೊಂಡಿತ್ತು.

      ಇದೀಗ ಅವರ ಮನೆಯ ಕೆಲಸದವರು ಸೇರಿ ಕುಟುಂಬದವರಿಗೆಲ್ಲಾ ಸೋಂಕು ಹರಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಒಂದೇ ದಿನ 6ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+