Breaking: ಕೇರಳದಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ, ಆ.02: ಕೇರಳ ರಾಜ್ಯದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಮಂಗಳವಾರ ವರದಿಯಾಗಿದೆ. ರಾಜ್ಯದಲ್ಲಿ ದಾಖಲಾದ 5ನೇ ಮಂಕಿಪಾಕ್ಸ್ ಪ್ರಕರಣವಿದಾಗಿದೆ.

30 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಪತ್ತೆಯಾಗಿದ್ದು, ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಯುಎಇಯಿಂದ ಜುಲೈ 27 ರಂದು ಕೋಝಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಮಂಗಳವಾರ ಕೇರಳದಲ್ಲಿ ಪತ್ತೆಯಾದ ಪ್ರಕರಣ ಸೇರಿ ಭಾರತದಲ್ಲಿ ಇದುವರೆಗೂ ದಾಖಲಾದ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

Kerala reported fifth monkeypox case on Tuesday

ಕೇರಳದಲ್ಲಿ ಹೊಸ ಮಂಕಿಪಾಕ್ಸ್ ಪ್ರಕರಣ ವರದಿಯಾಗಿರುವ ಬೆನ್ನಲ್ಲೇ ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಇದು ಹೊಸ ರೋಗವಲ್ಲ, ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

Recommended Video

      Team India ಆಟಗಾರರು ಅರ್ಶದೀಪ್ ಜೆರ್ಸಿ ತೊಡಲು ಇದೇ ಕಾರಣ | *Cricket | OneIndia Kannada

      ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿ ಭಾರತವು ಹಂತ-ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಭರವಸೆ ನೀಡಿದರು. "ನಾವು ಕೊರೊನಾ ವೈರಸ್‌ನಿಂದ ಅತ್ಯುತ್ತಮ ಪಾಠಗಳನ್ನು ಕಲಿತಿದ್ದೇವೆ. ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರದಿಂದ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

      "ಭಾರತ ಮತ್ತು ಪ್ರಪಂಚಕ್ಕೆ ಮಂಕಿಪಾಕ್ಸ್ ಹೊಸ ರೋಗವಲ್ಲ. 1970 ರಿಂದ ಆಫ್ರಿಕಾದಿಂದ ಹಿಡಿದು ಜಗತ್ತಿನಲ್ಲಿ ಬಹಳಷ್ಟು ಪ್ರಕರಣಗಳು ಕಂಡುಬಂದಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ವಿಶೇಷ ಗಮನ ಹರಿಸಿದೆ. ಭಾರತದಲ್ಲೂ ಮಾನಿಟರಿಂಗ್ ಆರಂಭವಾಗಿದೆ'' ಎಂದರು.

      WHO ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ ಆಗಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್. ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿದ್ದರೂ ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿದೆ.

      ಮಂಕಿಪಾಕ್ಸ್ ವಿಶಿಷ್ಟವಾಗಿ ಜ್ವರ, ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಸ್ವಯಂ-ಸೀಮಿತ ರೋಗವಾಗಿದ್ದು, ರೋಗಲಕ್ಷಣಗಳು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+