ಅಮೆಜಾನ್‌ನಲ್ಲಿ ಐಫೋನ್ ಆರ್ಡರ್ ಮಾಡಿದರೆ ಬಂತು ಸೋಪು!
ತಿರುವನಂತಪುರಂ, ಅಕ್ಟೋಬರ್ 25: ಕೇರಳದಲ್ಲಿ ವ್ತಕ್ತಿಯೊಬ್ಬರು ಆ್ಯಪಲ್ ಐಫೋನ್ 12 ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದು ಸೋಪು ಹಾಗೂ ಐದು ರೂಪಾಯಿಯ ನಾಣ್ಯ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಘಟನೆ ಈ ತಿಂಗಳ ಆರಂಭದಲ್ಲಿ ನಡೆದಿದೆ ಎಂದು ಕೂಡಾ ವರದಿಯು ಹೇಳಿದೆ.
ನೂರುಲ್ ಅಮೀನ್ ಎಂಬವರು ಹೆಚ್ಚಾಗಿ ಅಮೆಜಾನ್ ಮೂಲಕ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದರು. ಅಕ್ಟೋಬರ್ 12 ರಂದು ಸುಮಾರು 70,900 ರೂಪಾಯಿ ಮೌಲ್ಯದ ಐಫೋನ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅಮೆಜಾನ್ ಪೇ ಕಾರ್ಡ್ ಅನ್ನು ಬಳಸಿದ್ದರು. ಆದರೆ ಅಕ್ಟೋಬರ್ 15 ರಂದು ಇದು ಡೆಲವರಿ ಆಗಿದೆ. ಆದರೆ 70,900 ರೂಪಾಯಿ ಮೌಲ್ಯದ ಐಫೋನ್ ಬದಲಾಗಿ ಸೋಪು ಹಾಗೂ ನಾಣ್ಯ ಅದರಲ್ಲಿ ಇತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.
ಇನ್ನು ಈ ಹಣವನ್ನು ಅಮೆಜಾನ್ ತನ್ನ ಗ್ರಾಹಕರಿಗೆ ವಾಪಾಸ್ ನೀಡಿದೆ ಎಂದು ಕೂಡಾ ವರದಿ ಆಗಿದೆ. ಹೈದಾರಾಬಾದ್‌ನಿಂದ ಈ ಪ್ಯಾಕೇಜ್ ರವಾನೆಯಾದ ಬಳಿಕ ಒಂದು ದಿನ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ನೂರುಲ್ ಅಮೀನ್ ಅವರಿಗೆ ಅನುಮಾನ ಉಂಟಾಗಿದೆ. ಹೆಚ್ಚಾಗಿ ಅಮೆಜಾನ್ ಅನ್ನು ಬಳಕೆ ಮಾಡಿ ತಿಳಿದಿರುವ ನೂರುಲ್ ಅಮೀನ್ ಆನ್‌ಲೈನ್ ಆರ್ಡರ್ ಮಾಡಿದ ಬಳಿಕ ಅದು ಎಂದು ತಲುಪುತ್ತದೆ ಎಂದು ತಿಳಿದಿದ್ದರು.

ಹೆಚ್ಚಾಗಿ ಹೈದರಾಬಾದ್‌ನಿಂದ ಕೊಚ್ಚಿಗೆ ಬರಲು ಎರಡು ದಿನಗಳು ಬೇಕಾಗುತ್ತದೆ. ಆದರೆ ಈ ಐಫೋನ್ ಬರುವಾಗ ಮೂರು ದಿನಗಳು ತಗುಲಿದೆ. ಈ ಹಿನ್ನೆಲೆ ನೂರುಲ್ ಅಮೀನ್ ಅವರಿಗೆ ಅನುಮಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೂರುಲ್ ಅಮೀನ್ ಅಮೆಜಾನ್‌ನಿಂದ ಈ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಸಾಮಾಗ್ರಿಯನ್ನು ವಿತರಣೆ ಮಾಡುವ ವ್ಯಕ್ತಿಯ ಎದುರಲ್ಲೇ ಈ ಪ್ಯಾಕೇಜ್ ಅನ್ನು ತೆರೆದಿದ್ದಾರೆ.
ಈ ಸಂದರ್ಭದಲ್ಲಿ ಸಾಕ್ಷಿಗೆಂದು ನೂರುಲ್ ಅಮೀನ್ ವಿಡಿಯೋವನ್ನು ಕೂಡಾ ಮಾಡಿದ್ದಾರೆ. ಇನ್ನು ಆ ಪಾರ್ಸೆಲ್ ಒಳಗೆ ಇದ್ದ ಐಟಂಗಳು ಐಫೋನ್‌ನ ತೂಕವನ್ನು ಹೋಲುತ್ತದೆ ಎಂದು ಮಾತೃಭೂಮಿಗೆ ನೂರುಲ್ ಅಮೀನ್ ತಿಳಿಸಿದ್ದಾರೆ. ಈ ಪ್ಯಾಕೇಜ್‌ನಲ್ಲಿ ನೂರುಲ್ ಅಮೀನ್ ಆರ್ಡರ್ ಮಾಡಿದ ಆ್ಯಪಲ್ ಐಫೋನ್ 12 ಬದಲಾಗಿ ಜನಪ್ರಿಯವಾದ ಪಾತ್ರೆ ತೊಳೆಯುವ ಬಾರ್ ವಿಮ್, ಸಾಬೂನಿ ತುಂಡು ಹಾಗೂ ಐದು ರೂಪಾಯಿಯ ಒಂದು ನಾಣ್ಯ ಇತ್ತು.
ಇದನ್ನು ಗಮನಿಸಿದ ಕೂಡಲೇ ನೂರ್ ಅಮೀನ್ ಅಮೆಜಾನ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದು, ಸೆಪ್ಟೆಂಬರ್ 25 ರಿಂದ ಜಾರ್ಖಂಡ್‌ನಲ್ಲಿ ಯಾರೋ ಈ ಐಫೋನ್ ಅನ್ನು ಬಳಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ್ದಾರೆ. ನೂರುಲ್ ಅಮೀನ್ ಈ ಫೋನ್ ಅನ್ನು ಬುಕ್ ಮಾಡುವ 15 ದಿನಗಳ ಮೊದಲೇ ಈ ಫೋನ್ ಅನ್ನು ಜಾರ್ಖಂಡ್‌ನಲ್ಲಿ ಬಳಕೆ ಮಾಡಲಾಗಿದೆ.
ಸ್ಟಾಕ್ ಮುಗಿದಿದೆ, ಹಣ ವಾಪಾಸ್ ನೀಡುತ್ತೇವೆ ಎಂದ ಮಾರಾಟಗಾರರು
"ನಾವು ಅಮೆಜಾನ್ ಅಧಿಕಾರಿಗಳು ಮತ್ತು ತೆಲಂಗಾಣ ಮೂಲದ ಮಾರಾಟಗಾರರನ್ನು ಸಂಪರ್ಕ ಮಾಡಿದೆವು. ಈ ವರ್ಷದ ಸೆಪ್ಟೆಂಬರ್ 25 ರಿಂದಲೇ ಈ ಫೋನ್ ಅನ್ನು ಜಾರ್ಖಂಡ್‌ನಲ್ಲಿ ಬಳಕೆ ಮಾಡಲಾಗುತ್ತಿದೆ. ಆದರೆ ಇದನ್ನು ಆರ್ಡರ್ ಮಾಡಿರುವುದು ಅಕ್ಟೋಬರ್‌ನಲ್ಲಿ. ನಾವು ಈ ನಿಟ್ಟಿನಲ್ಲಿ ಮಾರಾಟಗಾರರನ್ನು ಸಂಪರ್ಕ ಮಾಡಿದೆವು. ಆ ಫೋನ್‌ನ ಸ್ಟಾಕ್ ಮುಗಿದಿದೆ. ನೂರುಲ್ ಪಾವತಿ ಮಾಡಿದ ಹಣವನ್ನು ನಾವು ಹಿಂದಿರುಗಿಸಲಾಗುವುದು ಎಂದು ತಿಳಿಸಿದ್ದಾರೆ," ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾತೃಭೂಮಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನೂರುಲ್ ಅಮೀನ್, "ಅಮೆಜಾನ್ ಪೇ ಕಾರ್ಡ್ ಮೂಲಕ ನಾನು ಆರ್ಡರ್ ಮಾಡಲು ಬಳಸಿದ್ದ ಹಣವನ್ನು ನನ್ನ ಖಾತೆಗೆ ಈಗ ಹಾಕಿದ್ದಾರೆ," ಎಂದು ತಿಳಿಸಿದ್ದಾರೆ. ಇನ್ನು ಈ ಕುರಿತು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಕೇರಳ ಪೊಲೀಸರು, "ಅಮೀನ್‌ಗೆ ಮಾರಾಟಗಾರರು ಹಣವನ್ನು ವಾಪಾಸ್ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications