ಗದ್ದಲದ ನಡುವೆಯೇ ದೇವಸ್ಥಾನ ಪ್ರವೇಶಿಸಿದ ಮಹಿಳೆ: ಶಬರಿಮಲೆಯಲ್ಲಿ ಹೈಡ್ರಾಮಾ

ಪಂಬಾ, ಅಕ್ಟೋಬರ್ 20: ಶಬರಿಮಲೆ ದೇವಸ್ಥಾನದ ಹೊರಭಾಗ ಶನಿವಾರ ನಾಟಕೀಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು.

ದೇವಸ್ಥಾನದ ಹೊರ ಆವರಣದಲ್ಲಿ ತಮಿಳುನಾಡಿನ ಮಹಿಳಾ ಭಕ್ತರೊಬ್ಬರನ್ನು ತಡೆದು ನಿಲ್ಲಿಸಲಾಯಿತು. ಆ ಮಹಿಳೆ 50 ವರ್ಷ ಒಳಗಿನವರು ಎಂದೇ ಭಾವಿಸಲಾಯಿತು. ಹೀಗಾಗಿ ಅವರ ಪ್ರವೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಪೊಲೀಸರ ಭದ್ರತೆಯ ನಡುವೆಯೂ ಭಾರಿ ಜಗಳ ಆರಂಭವಾಯಿತು. ಕೂಗಾಟ, ತಳ್ಳಾಟಗಳು ನಡೆದವು.

ತಿರುಚಿಯ ನಿವಾಸಿ ಲತಾ ತಮ್ಮ ಕುಟುಂಬದವರೊಂದಿಗೆ ಇರುಮುಡಿಯೊಂದಿಗೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಆಸೆಯಿಂದ ಬಂದಿದ್ದರು. ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಲತಾ ಅವರನ್ನು ಕಂಡೊಡನೆ ಅವರ ಪ್ರವೇಶಕ್ಕೆ ಅವಕಾಶ ನೀಡದೆ ವಿರೋಧಿಸತೊಡಗಿದರು. ಒಬ್ಬರನ್ನೊಬ್ಬರು ಕೈ ಹಿಡಿದು ಅವರ ಸುತ್ತ ಗೋಡೆ ನಿರ್ಮಿಸಿದರು.

high drama at sabarimala women devotee entered temple

ಇದನ್ನು ನೋಡಿ ಲತಾ ಅವರ ದುಃಖದ ಕಟ್ಟೆಯೊಡೆಯಿತು. ಗಳಗಳನೆ ಅತ್ತರು. ತಮ್ಮ ವಯಸ್ಸನ್ನು ತೋರಿಸುವ ಗುರುತಿನ ಚೀಟಿಯನ್ನು ಪ್ರದರ್ಶಿಸಿದರು. 'ಶಬರಿಮಲೆಗೆ ಇದು ನನ್ನ ಎರಡನೆಯ ಭೇಟಿ. ಕಳೆದ ವರ್ಷವೂ ಬಂದಿದ್ದೆ' ಎಂದು ಕಣ್ಣೀರಿಡುತ್ತಲೇ ಒಳಗೆ ಬಿಡುವಂತೆ ಬೇಡಿಕೊಂಡರು.

ಲತಾ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ, ಅವರ ವಯಸ್ಸು 52 ಮೀರಿದೆ ಎನ್ನುವುದು ಖಚಿತವಾದ ನಂತರವಷ್ಟೇ ಅವರನ್ನು ಒಳಬಿಡಲಾಯಿತು.

10-50 ವರ್ಷದ ಮಹಿಳೆಯರನ್ನು ಶಬರಿಮಲೆಯ ಮೂಲ ಪ್ರವೇಶದ ನೆಲೆಯಿಂದಲೇ ವಾಪಸ್ ಕಳುಹಿಸಲಾಗುತ್ತಿದೆ.

ಶಬರಿಮಲೆ ದೇವಸ್ಥಾನದ ಆವರಣಕ್ಕೆ ಪ್ರವೇಶಿಸುವ ಜಾಗದಲ್ಲಿ ಮಹಿಳೆಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನೂರಾರು ಪೊಲೀಸರನ್ನು ನಿಯೋಜಿಸಿದ್ದರೆ, ಮುಟ್ಟಿನ ವಯಸ್ಸು ಮೀರದ ಮಹಿಳೆಯರು ಒಳಗೆ ಬಾರದಂತೆ ತಡೆಯಲೆಂದೇ ಅಷ್ಟೇ ಸಂಖ್ಯೆಯ ಭಕ್ತರು ಹೊರಭಾಗದಲ್ಲಿ ನಿಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+